ಹಾಲವರ್ತಿ ಮಠದ ಅಭಿವೃದ್ಧಿಗೆ ಬದ್ಧ: ಶಾಸಕಿ ಎಂ.ಪಿ.ಲತಾ

KannadaprabhaNewsNetwork |  
Published : Aug 04, 2024, 01:23 AM IST
ಹರಪನಹಳ್ಳಿ ಪಟ್ಟಣದ ಹಾಲವರ್ತಿ ಮಠದಲ್ಲಿ ಶನಿವಾರ ನಡೆದ ಮಹಾಮಂಗಲದ ಧರ್ಮ ಸಭೆಯನ್ನು ಶಾಸಕಿ ಎಂ.ಪಿ.ಲತಾ ಉದ್ಘಾಟಿಸಿದರು. | Kannada Prabha

ಸಾರಾಂಶ

ಇಲ್ಲಿರುವ ಒಂದೂವರೆ ಎಕರೆ ಜಾಗವನ್ನು ಮಠಕ್ಕೆ ದೇಣಿಗೆಯಾಗಿ ನೀಡಿ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಸಹಕರಿಸುವುದಾಗಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.

ಹರಪನಹಳ್ಳಿ: ಪಟ್ಟಣದ ಗೋಸಾವಿ ಗುಡ್ಡದ ಹಿಂಭಾಗದಲ್ಲಿರುವ ಹಾಲವರ್ತಿ ಮಠದ ಅಭಿವೃದ್ದಿಗೆ ಸಹಕರಿಸುವುದಾಗಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ಗೋಸಾಯಿ ಗುಡ್ಡದ ಹಿಂಭಾಗದಲ್ಲಿರುವ ಐತಿಹಾಸಿಕ ಹಾಲವರ್ತಿ ಮಠದಲ್ಲಿ ಲಿಂಗನಾಯಕನಹಳ್ಳಿ ಶ್ರೀ ಚನ್ನವಿರ ಮಹಾಶಿವಯೋಗಿಗಳು ಕಳೆದ ಒಂದು ತಿಂಗಳಿಂದ ಕೈಗೊಂಡಿದ್ದ ಮೌನ ಅನುಷ್ಠಾನ ಮಹಾಮಂಗಲದ ಧರ್ಮ ಸಭೆ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಇಲ್ಲಿರುವ ಒಂದೂವರೆ ಎಕರೆ ಜಾಗವನ್ನು ಮಠಕ್ಕೆ ದೇಣಿಗೆಯಾಗಿ ನೀಡಿ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಜಾಗದ ವಾರಸುದಾರ ಪಟೇಲ್‌ ಬೆಟ್ಟನಗೌಡರಿಗೆ ಶಾಸಕರು ಸಲಹೆ ನೀಡಿದರು.

ಚನ್ನವೀರ ಮಹಾಶಿವಯೋಗಿಗಳ ಮೌನ ಅನುಷ್ಠಾನದಿಂದ ಪಟ್ಟಣದ ಹಾಲವರ್ತಿ ಮಠಕ್ಕೆ ಈಗ ಜೀವ ಕಳೆ ಬಂದಿದೆ ಎಂದ ಅವರು ತುಂಬಾ ಹಳೆಯ ಕಾಲದ ಹಾಲವರ್ತಿ ಮಠಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದ್ದು, ರಾಜಸೋಮಶೇಖರ ನಾಯಕ ಈ ಪ್ರದೇಶವನ್ನು ಆಳಿದ್ದರು. ಅಲ್ಲದೇ ಭಗವಂತನ ಕೃಪೆಯಿಂದ ಅವರು ಇಲ್ಲಿ ಕಲ್ಯಾಣಿ ಕಟ್ಟಿಸಿದ್ದರು ಎಂದು ಹೇಳಿದರು.

ಇತ್ತೀಚೆಗೆ ಈ ಪ್ರದೇಶದ ಸುತ್ತ ತಪ್ಪಲು ಬೆಳೆದು ನಿರ್ಜನ ಪ್ರದೇಶವಾಗಿ ಮಾರ್ಪಟ್ಟಿತ್ತು. ಇದೀಗ ಲಿಂಗನಾಯಕನಹಳ್ಳಿ ಶ್ರೀಗಳ ಪಾದಾರ್ಪಣೆಯಿಂದ ಮಠಕ್ಕೆ ಕಳೆ ಬಂದಿದೆ. ನಾನು ಮಠದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ಭಕ್ತರೂ ಕೈ ಜೋಡಿಸಬೇಕು ಎಂದು ಕೋರಿದರು.

ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವಿರ ಮಹಾಶಿವಯೋಗಿಗಳು, ತೆಗ್ಗಿನಮಠದ ವರಸದ್ಯೋಜಾತ ಶ್ರೀಗಳು, ಮುಂಡರಿಗಿ ಸಂಸ್ಥಾನ ಮಠದ ಡಾ. ಅನ್ನದಾನೇಶ್ವರ ಸ್ವಾಮೀಜಿ, ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿಗಳು ಧರ್ಮ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗೋಲಗೇರಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ, ಶಿಗ್ಗಾಂವಿ ವಿರಕ್ತ ಮಠದ ಸಂಗನಬಸವ ಸ್ವಾಮೀಜಿ, ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ಶ್ರೀಗಳು, ಹೂವಿನಹಡಗಲಿ ಗವಿಮಠದ ಹಿರಿಯ ಶಾಂತವೀರ ಸ್ವಾಮೀಜಿ, ಇಟಗಿ ಹಿರೇಮಠದ ಗುರುಶಾಂತವೀರ ಸ್ವಾಮೀಜಿ, ಹಿರೇಹಡಗಲಿಯ ಹಾಲಸಿದ್ದೇಶ್ವರ ಸ್ವಾಮೀಜಿ ಧರ್ಮ ಸಭೆಯ ಸಾನಿಧ್ಯ ವಹಿಸಿದ್ದರು.

ನಿವೃತ್ತ ಪಶು ವೈದ್ಯಾಧಿಕಾರಿ ಷಣ್ಮುಖಪ್ಪ ಮಠದ ಪರಂಪರೆ, ಇತಿಹಾಸ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಲಿಂಗನಾಯಕನಹಳ್ಳಿ ಮಠದ ನಿರಂಜನದೇವರು, ಮುಖಂಡರಾದ ಪಾಟೀಲ ಬೆಟ್ಟನಗೌಡ, ಎಂ. ರಾಜಶೇಖರ, ಆರುಂಡಿ ನಾಗರಾಜ, ಶಶಿಧರ ಪೂಜಾರ, ಪುಷ್ಪ ದಿವಾಕರ, ದಾನ ಚಂತಾಮಣಿ ಎಚ್.ಎಂ. ಲಲಿತಮ್ಮ, ವಿಜಯ ದಿವಾಕರ, ಕೆ. ಕಲ್ಲಹಳ್ಳಿ ಕೆ.ಎಂ. ಗುರುಸಿದ್ದಯ್ಯ, ಎ. ಕರಿಬಸವರಾಜ, ಮಂಜುನಾಥ ಪೂಜಾರ, ಎಚ್‌.ಎಂ. ಕೊಟ್ರಯ್ಯ, ಎಚ್.ಎಂ. ಅಶೋಕ, ಪಿ.ಬಿ. ಗೌಡ್ರು, ಮಲ್ಲಿಕಾರ್ಜುನ್, ಎಂ.ಪಿ.ಎಂ., ಶಾಂತವೀರಯ್ಯ, ಟಿ.ಎಚ್‌.ಎಂ. ಮಲ್ಲಿಕಾರ್ಜುನ, ಎ.ಎಸ್‌.ಎಂ. ಗುರುಪ್ರಸಾದ್, ಗುರುರಾಜ, ಎಚ್.ಎಂ. ರವೀಂದ್ರ, ರಾಮಚಂದ್ರಪ್ಪ, ಬಸವರಾಜ, ರಾಜಶೇಖರ ಬಣಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ