ಸಂವಿಧಾನದ ಕರ್ತವ್ಯ ಪಾಲಿಸಿದರೆ ದೇಶ ಪ್ರಗತಿಯತ್ತ: ಸೋಮನಕಟ್ಟಿ

KannadaprabhaNewsNetwork |  
Published : Jan 27, 2024, 01:17 AM IST
೨೬ಬಿಎಸ್ವಿ೦೧- ಬಸವನಬಾಗೇವಾಡಿ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆವರಣದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ ೭೫ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸ್ಥಳೀಯ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಡೆಸಿಕೊಟ್ಟ ಸಾಮೂಹಿಕ ನೃತ್ಯ ಜನಮನಸೂರೆಗೊಂಡಿತ್ತು. | Kannada Prabha

ಸಾರಾಂಶ

ಬ.ಬಾಗೇವಾಡಿ ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕಾಡಳಿತವು ಶುಕ್ರವಾರ ಹಮ್ಮಿಕೊಂಡಿದ್ದ ೭೫ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ದೇಶದ ಸಂವಿಧಾನವು ನಮಗೆ ನೀಡಿರುವ ಹಕ್ಕುಗಳನ್ನು ಪ್ರತಿಪಾದಿಸದೇ ಸಂವಿಧಾನ ಹೇಳಿರುವ ಕರ್ತವ್ಯಗಳನ್ನು ಎಲ್ಲ ನಾಗರಿಕರು ಪಾಲಿಸಿದರೆ ದೇಶವು ಪ್ರಗತಿಯತ್ತ ಸಾಗುತ್ತದೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.

ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕಾಡಳಿತವು ಶುಕ್ರವಾರ ಹಮ್ಮಿಕೊಂಡಿದ್ದ ೭೫ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಡೀ ಜಗತ್ತಿನಲ್ಲಿಯೇ ಅತ್ಯಂತ ಬೃಹತ್, ಲಿಖಿತ ಸಂವಿಧಾನ ನಮ್ಮದಾಗಿದೆ. ನಮ್ಮ ಸಂವಿಧಾನವು ರಾಜ್ಯನಿರ್ದೇಶಕ ತತ್ವಗಳನ್ನು, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಸಂಸದೀಯ ವ್ಯವಸ್ಥೆ, ಜಾತ್ಯತೀತ ನಿಲುವು, ಏಕ ಪೌರತ್ವ, ವಯಸ್ಕ ಮತದಾನ ವ್ಯವಸ್ಥೆ ಸೇರಿದಂತೆ ಅನೇಕ ಮೌಲ್ಯಯುತ ಅಂಶಗಳನ್ನು ಹೊಂದಿದೆ ಎಂದರು.

ಮೂಲ ಸಂವಿಧಾನದಲ್ಲಿ ೩೯೫ ವಿಧಿಗಳು, ೨೨ ಭಾಗಗಳು, ೮ ಅನುಸೂಚಿಗಳಿವೆ. ಹಲವಾರು ತಿದ್ದುಪಡಿ ಕಂಡು ಪ್ರಸ್ತುತ ನಮ್ಮ ಸಂವಿಧಾನದಲ್ಲಿ ೪೭೦ ವಿಧಿಗಳು, ೨೫ ಭಾಗಗಳು, ೧೨ ಅನುಸೂಚಿಗಳನ್ನು ಒಳಗೊಂಡಿದೆ. ನಮ್ಮ ಸಂವಿಧಾನದ ಪೂರ್ವ ಪೀಠಿಕೆಯನ್ನು ನಾವು ಓದಿದರೆ ಇಡೀ ಸಂವಿಧಾನದ ತಿರುಳು ಅರ್ಥವಾಗುತ್ತದೆ. ನಾವೆಲ್ಲರೂ ಸಂವಿಧಾನದ ಆಶಯದಂತೆ ಜೀವನವನ್ನು ಸಾಗಿಸುವ ಮೂಲಕ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರುವಂತೆ ಮಾಡುವ ಸಂಕಲ್ಪ ಮಾಡಬೇಕು ಎಂದರು.

ವೇದಿಕೆಯಲ್ಲಿ ತಾಪಂ ಇಒ ಡಾ.ಯುವರಾಜ ಹನಗಂಡಿ, ಬಿಇಒ ವಸಂತ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಪಿಐ ಶರಣಗೌಡ ನ್ಯಾಮಣ್ಣನವರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಮಾಜಿ ಸೈನಿಕರಾದ ಕೆ.ಎಸ್.ಲೆಂಕೆನ್ನವರ, ಬಸವರಾಜ ತಳವಾರ, ವಿಠ್ಠಲ ಹಳ್ಳಿ, ಗುರಪ್ಪ ಲಮಾಣಿ, ಬಸವರಾಜ ದೊಡಮನಿ ಇತರರು ಇದ್ದರು. ಕ್ಷೇತ್ರಸಮನ್ವಯಾಧಿಕಾರಿ ಪಿ.ಯು.ರಾಠೋಡ ಸ್ವಾಗತಿಸಿದರು. ಶಿಕ್ಷಕರಾದ ಬಿ.ವಿ.ಚಕ್ರಮನಿ, ಕೊಟ್ರೇಶ ಹೆಗಡ್ಯಾಳ ನಿರೂಪಿಸಿದರು. ಶಿಕ್ಷಕ ಶಿವಾನಂದ ಮಡಿಕೇಶ್ವರ ವಂದಿಸಿದರು. ಗಣರಾಜ್ಯೋತ್ಸವ ಸಮಾರಂಭದಂಗವಾಗಿ ಸ್ಥಳೀಯ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಡೆಸಿಕೊಟ್ಟ ಸಾಮೂಹಿಕ ನೃತ್ಯ ಜನಮನಸೂರೆಗೊಂಡಿತು. ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ