ಕೆರೆ ಹೂಳೆತ್ತಿದರೆ ನೀರಿನ ಸಂಗ್ರಹಣ ಸಾಮರ್ಥ್ಯ ಹೆಚ್ಚಳ: ರೇಖಾ ರವೀಶಯ್ಯ

KannadaprabhaNewsNetwork |  
Published : Mar 05, 2024, 01:30 AM IST
 ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ಅಡಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮ | Kannada Prabha

ಸಾರಾಂಶ

ಕೆರೆ ಹೂಳೆತ್ತಿಸಿದಲ್ಲಿ ನೀರಿನ ಸಂಗ್ರಹಣ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಹಾದಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ರವೀಶಯ್ಯ ಹೇಳಿದ್ದಾರೆ.

- ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಕೆರೆ ಹೂಳೆತ್ತಿಸಿದಲ್ಲಿ ನೀರಿನ ಸಂಗ್ರಹಣ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಹಾದಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ರವೀಶಯ್ಯ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ತರೀಕೆರೆ ತಾಲೂಕು ಇದರ ಆರ್ಥಿಕ ಸಹಕಾರದೊಂದಿಗೆ ಹಾದಿಕೆರೆ ಗ್ರಾಪಂ ಮತ್ತು ಅರಸೀ ಕೆರೆ ಕೆರೆ ಅಭಿವೃದ್ಧಿ ಸಮಿತಿ ಯರೇಹಳ್ಳಿ ತಾಂಡ್ಯ ಹಾಗೂ ಗ್ರಾಮಸ್ಥರ ಸಹಭಾಗಿತ್ವ ದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಯರೇಹಳ್ಳಿ ತಾಂಡ್ಯದಲ್ಲಿ ಪುನಶ್ಚೇತನಗೊಳ್ಳುತ್ತಿರುವ ಅರಸೀ ಕೆರೆ ಕೆರೆ ಹೂಳೆತ್ತುವ ಕಾಮಗಾರಿಗೆ ನಡೆದ ಭೂಮಿ ಪೂಜೆಯಲ್ಲಿ ಮಾತನಾಡುತ್ತಿದ್ದರು.

ಜಾನುವಾರುಗಳಿಗೆ ಕುಡಿಯುವ ನೀರು ದೊರಕಲಿದೆ ಮತ್ತು ಸುತ್ತ ಮುತ್ತಲಿನ ಬೋರ್ವೆಲ್ ಗಳ ಅಂತರ್ಜಲ ಮಟ್ಟದ ಪ್ರಮಾಣ ಹೆಚ್ಚುವ ಜೊತೆಗೆ ಕೃಷಿಗೆ ಯೋಗ್ಯ ಮಣ್ಣು ದೊರೆಯಲಿದೆ ಎಂದು ತಿಳಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಇಂತಹ ಹಲವಾರು ಕಾರ್ಯಕ್ರಮಗಳು ಸರಕಾರಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಮಾತನಾಡಿ ಕೆರೆಕಟ್ಟೆಗಳು ಹಳ್ಳಿಗಳ ಜೀವನಾಡಿ, ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಈಗಾಗಲೇ ರಾಜ್ಯದಲ್ಲಿ 689 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇಂದು ಈ ಗ್ರಾಮದ ಅರಸೀಕೆರೆ ಕೆರೆಯನ್ನು 2023-24 ನೇ ಸಾಲಿನಲ್ಲಿ ಪುನಶ್ಚೇತನಕ್ಕೆ ಆಯ್ಕೆಯಾಗಿದೆ. ಮಳೆ ನೀರನ್ನು ಸಂಗ್ರಹಣೆಗೆ ಕೆರೆಗಳ ಅವಶ್ಯಕತೆ ಇದ್ದು ಜಾನುವಾರುಗಳು ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಮೂಲ ಸೆಲೆ ಕೆರೆಯಾಗಿದೆ ಎಂದು ತಿಳಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಅಸ್ಲಾಂ ಖಾನ್ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕೃಷಿ ಕಾರ್ಯಕ್ರಮಗಳು, ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಬಲವರ್ಧನೆ, ಪ್ರಗತಿ ನಿಧಿ, ಆರೋಗ್ಯ ಕಾರ್ಯಕ್ರಮಗಳು ಹೀಗೆ ಹತ್ತು ಹಲವು ಕಾರ್ಯಕ್ರಮ ಸಮಾಜಕ್ಕೆ ಮಾದರಿ ಎಂದು ತಿಳಿಸಿದರು.

ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಕೆ ಮಾತನಾಡಿದರು. ಗ್ರಾಪಂ ಸದಸ್ಯ ವಸಂತ್ ಕುಮಾರ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಶ್ರೀಧರ್, ಕೆರೆ ಅಭಿವೃದ್ಧಿ ಸಮಿತಿ ಅಣ್ಣಪ್ಪ ನಾಯ್ಕ್, ರವಿ ನಾಯ್ಕ್, ಕೆರೆ ಅಭಿವೃದ್ಧಿ ಸಮಿತಿಯ ಎಲ್ಲಾ ಸದಸ್ಯರು, ವಲಯದ ಮೇಲ್ವಿಚಾರಕ ಸಿದ್ದಯ್ಯ,ಕೃಷಿ ಮೇಲ್ವಿಚಾರಕ ಸಂತೋಷ್, ಸೇವಾಪ್ರತಿನಿಧಿ ವಾಣಿ, ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು, 4ಕೆಟಿಆರ್.ಕೆ.1ಃ

ತರೀಕೆರೆಯ ಹಾದಿಕೆರೆ ಗ್ರಾಪಂ ಯರೇಹಳ್ಳಿ ತಾಂಡ್ಯದಲ್ಲಿ ಅರಸೀಕೆರೆ ಕೆರೆ ಪುನಶ್ಚೇತನಗೊಳಿಸುವ ಕಾರ್ಯಕ್ರಮದಲ್ಲಿ ಹಾದಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ರವೀಶಯ್ಯ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಪ್ರಕಾಶ್ ರಾವ್, ಯೋಜನಾಧಿಕಾರಿ ಕುಸುಮಾಧರ್ ಕೆ. ಮತ್ತಿತರರು ಭಾಗವಹಿಸಿದ್ದರು.

-----------------

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ