ಪೊಲೀಸರು ಸಕ್ರಿಯರಾದರೆ, ರೌಡಿಗಳು ನಿಶ್ಕ್ರಿಯರಾಗುತ್ತಾರೆ

KannadaprabhaNewsNetwork |  
Published : Mar 19, 2024, 12:49 AM IST
೧೮ಕೆಎಲ್‌ಆರ್-೨ಮುಳಬಾಗಿಲಿನ ಪೊಲೀಸ್ ಠಾಣಾ ಆವರಣದಲ್ಲಿ ಉಪ ವಿಭಾಗದ ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲೂಕು ಪೊಲೀಸ್ ಠಾಣೆಗಳ ವ್ಯಾಪಿಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿ ಮತ್ತು ಕೊಕೊ ಪಟ್ಟಿಯಲ್ಲಿ ಇರುವ ಕ್ರಿಯಾಶೀಲ ರೌಡಿಗಳ ಪೆರೇಡ್ ನಡೆಯಿತು. | Kannada Prabha

ಸಾರಾಂಶ

ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಲಿಸ್ಟ್‌ನಲ್ಲಿರುವ ಅಪರಾಧಿಗಳ ಚಲನವಲನಗಳನ್ನು ಬೀಟ್ ಮತ್ತು ಕೈಂ ಪೊಲೀಸರು ಪರಿಶೀಲಿನೆ ಮಾಡಬೇಕು ಅವರ ವಾಸ ಸ್ಥಳ, ಮಾಡುತ್ತಿರುವ ಉದ್ಯೋಗ, ಚಟುವಟಿಕೆಗಳನ್ನ ಕಡತದಲ್ಲಿ ದಾಖಲಿಸಬೇಕು

ಕನ್ನಡಪ್ರಭ ವಾರ್ತೆ ಮುಳಬಾಗಿಲು

ಪೊಲೀಸ್ ಇಲಾಖೆ ಸಜ್ಜನರಿಗೆ ಸದಾ ಗೌರವದಿಂದ ಕಾಣುತ್ತದೆ, ದುರ್ಜನರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತದೆ. ಒಮ್ಮೆ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡವರು ಮತ್ತೆ ಬಾಲ ಬಿಚ್ಚಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ರವಿಶಂಕರ್ ನೀಡಿದರು.

ನಗರ ಪೊಲೀಸ್ ಠಾಣೆ ಆವರಣದಲ್ಲಿ ಉಪ ವಿಭಾಗದ ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲೂಕು ಪೊಲೀಸ್ ಠಾಣೆಗಳ ವ್ಯಾಪಿಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿ ಮತ್ತು ಕೊಕೊ ಪಟ್ಟಿಯಲ್ಲಿ ಇರುವ ಕ್ರಿಯಾಶೀಲ ರೌಡಿಗಳ ಪೆರೇಡ್‌ನಲ್ಲಿ ಪ್ರತಿಯೊಬ್ಬ ಅಪರಾಧಿಯ ಪೂರ್ವಪರ ವಿಚಾರಿಸಿ ಕಠಿಣ ಎಚ್ಚರಿಕೆ ನೀಡಿದರು.

ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ

ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಲಿಸ್ಟ್‌ನಲ್ಲಿರುವ ಅಪರಾಧಿಗಳ ಚಲನವಲನಗಳನ್ನು ಬೀಟ್ ಮತ್ತು ಕೈಂ ಪೊಲೀಸರು ಪರಿಶೀಲಿನೆ ಮಾಡಬೇಕು ಅವರ ವಾಸ ಸ್ಥಳ, ಮಾಡುತ್ತಿರುವ ಉದ್ಯೋಗ, ಚಟುವಟಿಕೆಗಳು, ಮೊಬೈಲ್ ಸಂಖ್ಯೆ, ಜಾಲತಾಣ ಅವರ ಕುಟುಂಬದ ಸಂಪರ್ಕ ಎಲ್ಲ ಮಾಹಿತಿಗಳು ಕಡತದಲ್ಲಿ ದಾಖಲು ಮಾಡಬೇಕು. ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳೊದು, ಪ್ರೋತ್ಸಾಹ ನೀಡುವುದು ಕಂಡು ಬಂದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ, ಆಯಾ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಸದಾ ಸಕ್ರಿಯರಾಗಿರಬೇಕು, ಆಗ ರೌಡಿಗಳು ನಿಶ್ಕ್ರಿಯರ್ ಆಗುತ್ತಾರೆ ಎಂದು ಸಿಬ್ಬಂದಿಗೆ ಸೂಚಿಸಿದರು.

ರೌಡಿಗಳಿಗೆ ಗಡಿಪಾರು ಎಚ್ಚರಿಕೆ

ಮುಳಬಾಗಿಲು ಉಪ ವಿಭಾಗದ ಡಿ.ವೈ.ಎಸ್.ಪಿ ಡಿ.ಸಿ.ನಂದಕುಮಾರ್ ಮಾತನಾಡಿ, ರೌಡಿಗಳು ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಗೊಂಡರೆ ಆರು ತಿಂಗಳಿಂದ ಒಂದು ವರ್ಷಗಳ ಕಾಲ ಇಲಾಖೆ ನಿಮಾನುಸಾರ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದರು. ಲೋಕಸಭೆ ಚುನಾವಣೆ ಬರುತ್ತಿದ್ದು ಯಾವುದೇ ಚುಟುಕುಗಳಲ್ಲಿ ಪಾಲ್ಗೊಳ್ಳುವುದು ಬಿಟ್ಟು ಸಜ್ಜನರಾಗಿ ಬದುಕುಕಟ್ಟಿಕೊಳ್ಳಿ ಎಂದು ಬುದ್ಧಿವಾದ ಹೇಳಿದರು. ಮುಳಬಾಗಿಲು ಗ್ರಾಮಾಂತರ ಸಿಪಿಐ ಕೆ.ಜಿ.ಸತೀಶ್, ಶ್ರೀನಿವಾಸಪುರ ನಗರಠಾಣೆ ಇನ್ಸ್‌ಪೆಕ್ಟರ್ ಬಿ.ಎಂ.ಗೊರವನಕೊಳ್ಳ, ಮುಳಬಾಗಿಲು ನಗರ ಠಾಣೆ ಇನ್ಸ್‌ಪೆಕ್ಟರ್‌ ಎಚ್.ಎಂ.ಶಿವಕುಮಾರ್, ಶ್ರೀನಿವಾಸಪುರ ಗ್ರಾಮಾಂತರ ಸಿಪಿಐ ಎಸ್.ಜಯಾನಂದ್, ಪಿಎಸ್‌ಐಗಳಾದ ಮುಳಬಾಗಿಲು ಗ್ರಾಮಾಂತರ ಠಾಣೆ ವಿಠಲವಾರ ವೈ.ತಳವಾರ, ನಗರಠಾಣೆ ಹೆಚ್.ಮಂಜುನಾಥ್, ನಂಗಲಿ ಠಾಣೆಯ ಎಲ್.ಮಮತಾ, ರಾಯಲ್ಪಾಡು ಠಾಣೆಯ ಎಸ್.ಆರ್.ಯೋಗೇಶ್ ಕುಮಾರ್, ಗೌನಿಪಲ್ಲಿ ಠಾಣೆಯ ರಾಮು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ