ವಿದ್ಯಾವಂತರಲ್ಲಿ ಮೌಡ್ಯತೆ ವಿಷಾದಕರ: ರಾಮು ಗುರೂಜಿ

KannadaprabhaNewsNetwork | Published : Aug 9, 2024 12:34 AM

ಸಾರಾಂಶ

ತರೀಕೆರೆ, ಇಂದಿನ ಕಾಲದ ವಿದ್ಯಾವಂತರಲ್ಲೂ ಮೌಢ್ಯ ಅತಿ ಹೆಚ್ಚಾಗಿ ಕಂಡುಬರುತ್ತಿರುವುದು ತುಂಬಾ ವಿಷಾದಕರ ಎಂದು ಕುರುಬರಹಳ್ಳಿ ಯೋಗ ಆಶ್ರಮ ಯೋಗ ಮತ್ತು ಪ್ರಕೃತಿ ಚಿಕಿತ್ಸ ಕೇಂದ್ರ ಪ್ರಗತಿಪರ ಚಿಂತಕ, ವಾಗ್ಮಿ ರಾಮು ಗುರೂಜಿ ಹೇಳಿದರು.

ತರೀಕೆರೆಯಲ್ಲಿ ನಾಗರ ಪಂಚಮಿ ಬದಲಾಗಿ ಬಸವ ಪಂಚಮಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಇಂದಿನ ಕಾಲದ ವಿದ್ಯಾವಂತರಲ್ಲೂ ಮೌಢ್ಯ ಅತಿ ಹೆಚ್ಚಾಗಿ ಕಂಡುಬರುತ್ತಿರುವುದು ತುಂಬಾ ವಿಷಾದಕರ ಎಂದು ಕುರುಬರಹಳ್ಳಿ ಯೋಗ ಆಶ್ರಮ ಯೋಗ ಮತ್ತು ಪ್ರಕೃತಿ ಚಿಕಿತ್ಸ ಕೇಂದ್ರ ಪ್ರಗತಿಪರ ಚಿಂತಕ, ವಾಗ್ಮಿ ರಾಮು ಗುರೂಜಿ ಹೇಳಿದರು.

ಮಾನವ ಬಂಧುತ್ವ ವೇದಿಕೆ ತರೀಕೆರೆಯಿಂದ ಪಟ್ಟಣದ ಕಂಬದ ಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ನಾಗರ ಪಂಚಮಿ ಬದಲಾಗಿ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಯುಗದಲ್ಲಿ ಇಂತಹ ಕಾರ್ಯಕ್ರಮ ಸಮಾಜಕ್ಕೆ ಮತ್ತು ಮಕ್ಕಳಿಗೆ ತುಂಬಾ ಅವಶ್ಯಕತೆ ಇದೆ. ಮನುವಾದ ನಮ್ಮನ್ನು ಕಪಿಮುಷ್ಠಿಯಲ್ಲಿ ಹಿಡಿದಿಟ್ಟಿದೆ ಅದರಿಂದ ಹೊರ ಬರಬೇಕಾದರೆ ಬುದ್ಧ ಬಸವ ಅಂಬೇಡ್ಕರ್ ವಿಚಾರಗಳು ತುಂಬಾ ಮುಖ್ಯ. ಇಂದು ನಮ್ಮ ನಾಡಿನಲ್ಲಿ ಈ ನಿಟ್ಟಿನಲ್ಲಿ ಅಂತಹ ಒಂದು ವಿಚಾರ ಮತ್ತು ಸಂಘಟನೆ ಮಾನವ ಬಂಧುತ್ವ ವೇದಿಕೆ ಎಂಬ ಹೆಸರಿನಲ್ಲಿ ಬೆಳಕು ಚೆಲ್ಲುತ್ತಿರುವ ಈ ಯುಗದ ಅಸಾಮಾನ್ಯ ಪುರುಷ ಸತೀಶ್ ಜಾರಕಿಹೊಳಿ ಎಂದರು.

ಇದೊಂದು ತುಂಬಾ ಅದ್ಭುತ ಕಾರ್ಯಕ್ರಮ, ಮಕ್ಕಳಿಗೆ ಇಂಥ ಕಾರ್ಯಕ್ರಮ ತುಂಬಾ ಅವಶ್ಯಕತೆ ಇದೆ. ನಾವು ಶಾಲೆ ಯಲ್ಲಿ ಮಕ್ಕಳಿಗೆ ಪಾಠ ಮಾಡುವುದು ಸಹ ಸಂಘಟನೆಗಳ ಮುಖಾಂತರ ಮೌಢ್ಯ ಮತ್ತು ವೈಜ್ಞಾನಿಕ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತಿರುವುದು ಉಪಯುಕ್ತ. ಈ ಹಿಂದೆ ಶರಣರು ಅನೇಕ ಜ್ಞಾನ ನಮಗೆ ಕೊಟ್ಟು ಹೋಗಿದ್ದಾರೆ, ಗೌತಮ ಬುದ್ಧನನಿಂದ ಹಿಡಿದು ಬಸವಣ್ಣ, ಅಂಬೇಡ್ಕರ್ ಅವರು, ಪ್ರಸ್ತುತ ಸತೀಶ್ ಜಾರಕಿಹೊಳಿ ಅವರು ಮುಂದುವರಿಸಿ ಕೊಂಡು ಹೋಗುತ್ತಿರುವುದು ಈ ಕಾಲದ ಸತ್ಯ ಎಂದು ಹೇಳಿದರು.ಸಾಹಿತಿ ಮನಸುಳಿ ಮೋಹನ್ ಮಾತನಾಡಿ ನಾವು ಬುದ್ಧನ ಮಾತು ಕೇಳಬೇಕು ಮತ್ತು ಕೇಳಿಸಿಕೊಳ್ಳಬೇಕು. ಅದನ್ನು ಬಸವಣ್ಣ ಅಂಬೇಡ್ಕರ್ ಮಾಡಿದ್ದಾರೆ. ಈಗ ಮಾನವ ಬಂಧುತ್ವ ವೇದಿಕೆ ಸ್ಥಾಪನೆ ಮಾಡಿ ಅದರ ಮುಖೇನ ಜನರಲ್ಲಿನ ಮೌಡ್ಯ ಮತ್ತು ಅಂಧಕಾರ ಇನ್ನಿತರ ಸಮಾಜವನ್ನು ಭಯಭೀತಿಗೊಳಿಸುತ್ತಿರುವ ಅಂಧಕಾರ ವಿಷಯಗಳ ವಿರುದ್ಧ ಹೋರಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಶಾಲೆ ಮುಖ್ಯ ಶಿಕ್ಷಕ ಎಂ.ಬಿ.ರಾಮಚಂದ್ರಪ್ಪ ಮಾತನಾಡಿ, ಈ ದಿನ ಕರ್ನಾಟಕದಲ್ಲಿ ಬಸವ ಪಂಚಮಿಯನ್ನು ಮಾನವ ಬಂದುತ್ವ ವೇದಿಕೆ ಆಚರಿಸುತ್ತದೆ. ಮೌಡ್ಯ, ವಾಮಾಚಾರ ಜೋತಿಷ್ಯ ಪಂಚಾಂಗ, ವಾಸ್ತು ಇನ್ನು ಮುಂತಾದ ವಿಷಯಗಳ ಕುರಿತು ಈಗಾಗಲೇ ಸತೀಶ್ ಜಾರಕಿಹೊಳಿ ಅವರು ಹೋರಾಟ ಮಾಡಿದ್ದಾರೆ. ಇಂದಿನ ಮಕ್ಕಳು ಮೌಡ್ಯವಿಚರಗಳ ವಿರುದ್ಧ ಹೋರಾಡಿದಾಗ ನಮ್ಮ ಭವಿಷ್ಯ ಸಮಾಜದ ವ್ಯವಸ್ಥೆ ಉತ್ತಮಗೊಳ್ಳುತ್ತದೆ ಎಂದರು.

ಬಸವ ಪಂಚಮಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪೌಷ್ಟಿಕ ಹಾಲು ಮತ್ತು ಬಾಳೆಹಣ್ಣು ಬಿಸ್ಕೆಟ್ಸ್ ಕಾರ್ಯಕ್ರಮದಲ್ಲಿ ಉಣ ಪಡಿಸಲಾಯಿತು.ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಪರುಶುರಾಮ್ ಎಚ್, ಶಿಕ್ಷಕರಾದ ನೇತ್ರಮ್ಮ ರಾಜಶೇಖರ್, ರಮ್ಯಾ, ಚಂದ್ರಕಲಾ, ಮಮತ, ಸೋಮಶೇಖರ್ ಕವಾಲಿ , ಅಣ್ಣಯ್ಯ ಮುಂತಾದ ಗಣ್ಯರು , ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. 8ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಮಾನವ ಬಂಧುತ್ವ ವೇದಿಕೆ ತರೀಕೆರೆಯಿಂದ ಏರ್ಪಡಿಸಿದ್ದ ನಾಗರ ಪಂಚಮಿ ಬದಲು ಬಸವ ಪಂಚಮಿ ಕಾರ್ಯಕ್ರಮದಲ್ಲಿ ಕುರುಬರಹಳ್ಳಿ ಯೋಗ ಆಶ್ರಮ ಯೋಗ ಮತ್ತು ಪ್ರಕೃತಿ ಚಿಕಿತ್ಸ ಕೇಂದ್ರ ಪ್ರಗತಿಪರ ಚಿಂತಕರು ವೈಚಾರಿಕ ವಾಗ್ಮಿಗಳು ರಾಮು ಗುರೂಜಿ ಮಾತನಾಡಿದರು. ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಪರುಶುರಾಮ್ ಎಚ್, ಸಾಹಿತಿ ಮನಸುಳಿ ಮೋಹನ್ ಮತ್ತಿತರರು ಇದ್ದರು.

Share this article