ಹದನೂರ ಹೊಲಗದ್ದೆಗಳಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಮರಳು ಸಂಗ್ರಹ

KannadaprabhaNewsNetwork |  
Published : Jun 11, 2024, 01:36 AM IST
ಫೋಟೋ- ಭೀಮಾ ಸ್ಯಾಂಡ್‌ 1 ಮತ್ತು ಭೀಮಾ ಸ್ಯಾಂಡ್‌ 2ಜೇವರ್ಗಿಯ ಹದನೂರು ಖಾಸಗಿ, ಸರಕಾರಿ ಜಾಗದಲ್ಲಿ ಅಕ್ರಮ ಮರಳು ಸಂಗ್ರಹಿಸಿರುವ ನೋಟ | Kannada Prabha

ಸಾರಾಂಶ

ಜೇವರ್ಗಿ ತಾಲೂಕಿನ ಭೀಮಾ ನದಿಯ ಮರಳು, ಬಹುಕೋಟಿ ಮೌಲ್ಯದ ನಿಸರ್ಗ ಸಂಪನ್ಮೂಲ ಕಳ್ಳರ ಪಾಲಾಗುತ್ತಿದೆ. ಶಾಸಕರಾದ ಕಣ್ಣಿಗೆ ಮಣ್ಣು ಎರಚುವ ಮೂಲಕ ಖದೀಮರು ಈ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜೇವರ್ಗಿ ತಾಲೂಕಿನ ಭೀಮಾ ನದಿಯ ಮರಳು, ಬಹುಕೋಟಿ ಮೌಲ್ಯದ ನಿಸರ್ಗ ಸಂಪನ್ಮೂಲ ಕಳ್ಳರ ಪಾಲಾಗುತ್ತಿದೆ. ಶಾಸಕರಾದ ಕಣ್ಣಿಗೆ ಮಣ್ಣು ಎರಚುವ ಮೂಲಕ ಖದೀಮರು ಈ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ.

ಈ ನಿಸರ್ಗ ಸಹಜ ಸಂಪನ್ಮೂಲ ಲೂಟಿಮಾಡಲು ಅಲ್ಲಿನ ತಾಲೂಕು ಆಡಳಿತವೇ ಸಾಥ್‌ ನೀಡುತ್ತಿರೋದು ದುರತದ ವಿಚಾರವೆಂದು ಈಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮಿಜಿ ಗಂಭೀರ ಆರೋಪ ಮಾಡಿದ್ದಾರೆ.

ಜೇವರ್ಗಿ ತಾಲೂಕಿನ ಹದನೂರ ಗ್ರಾಮದ ಸರ್ವೆ ನಂ 53 & 102,103 ರಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದಲ್ಲಿ ಲಕ್ಷಾಂತರ ರೂಪಾಯಿ ಭಿಮಾನದಿಯಿಂದ ಮರಳು ಸಂಗ್ರಹ ಮಾಡಿರುತ್ತಾರೆ. ಇಂತಹ ಮರಳು ಸಂಗ್ರಹದ ಹಿಂದೆ ಬಹುದೊ್ಡ ಗ್ಯಾಂಗ್‌ ಅಡಗಿದೆ. ಇದಕ್ಕೆಲ್ಲಾ ಜೇವರ್ಗಿ ದಂಢಾಧಿಕಾರಿ ಮತ್ತು ಪಿಎಸ್‌ಐ ಸಹಕಾರ ನೀಡುತ್ತಿರೋದು ಬಹುದೊಡ್ಡ ದುರಂತದ ಸಂಗತಿ. ಬೇಲಿಯೇ ಇಲ್ಲಿ ಹೊಲ ಮೇಯುತ್ತಿರುವಂತಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಸ್ಪಿ.ವರು ಇದನ್ನು ಗಮನಿಸಿ ತಕ್ಷಣ ಇಲ್ಲಿ ದಾಳಿ ನಡೆಸಬೇಕು. ಅಕ್ರಮ ಸಂಪತ್ತಿನ ಲೂಟಿ ತಡೆಯಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಗ್ರಾಮಸ್ಥರ ವಿರೋಧ ದ ಮಧ್ಯಯೂ ಮರಳು ಸಂಗ್ರಹ ಮಾಡಲಾಗುತ್ತಿದೆ. ಮರಳು ಸಂಗ್ರಹ ಕ್ಕೆ ಸರಕಾರಿ ಮತ್ತು ಖಾಸಗಿ ಜಮೀನು ದುರ್ಬಳಕೆ ಮಾಡಲಾಗುತ್ತಿದೆ. ರಾತ್ರಿ ಮರಳು ಸಾಗಣಿಕೆ ಗೆ ಜೇವರ್ಗಿ ಮತ್ತು ಶಹಾಪುರ ತಾಲೂಕಿನ ರೌಡಿಗಳಿಂದ ಬೆಂಗಾವಲು ಇದ್ದು, ಇದನ್ನು ಪ್ರಶ್ನಿಸಿದರೆಕೊಲೆ ಬೆದರಿಕೆ ಹಾಕಲಾಗುತ್ತಿದೆ. ಇದನ್ನೆಲ್ಲ ಹೇಳಿ ಕ್ರಣಕ್ಕೆ ಕೋರಿದರೆ ಇದಕ್ಕೆ ಜೇವರ್ಗಿ ತಸ್ಹೀಲ್ಧಾರ. ಮಲಣ್ಣ ಯಲಗೋಡ ಪಿಎಸ್‌ಐ ಸುರೇಶ ಚವ್ಹಾಣ ಸ್ಪಂದಸುತ್ತಿಲ್ಲ ಎಂದು ಶ್ರೀಗಳು ದೂರಿದ್ದಾರೆ.

ತಕ್ಷಣ ಜಿಲ್ಲಾಧಿಕಾರಿಗಳು ಮರಳು ಜಪ್ತಿಮಾಡಿ ದಂಧೇಕೋರರು ಮತ್ತು ಜಮೀನು ಮಾಲಿಕರ ಮೇಲೆ MMRD ಅಡಿಯಲ್ಲಿ ಪ್ರಕರಣ ದಾಖಲಿಸಿ ತಸ್ಹೀಲ್ದದಾರ ಮತ್ತು ಪಿಎಸ್‌ಐ ಅವರ ವಿರುದ್ಧ ಶಸ್ತು ಕ್ರಮ ಜರುಗಿಸಬೇಕು. ಅಕ್ರಮ ಕೋಕರಿಗೆ ಬಿಸಿ ಮುಟ್ಟಿಸಬೇಕು ಎಂದು ಸಿದ್ದಲಿಂಗ ಶ್ರೀಗಳು ಆಗ್ರಹಿಸಿದ್ದಾರೆ.

ಆಂದೋಲಾ ಶ್ರೀಗಳು ಹದನೂರಿನ ಸದರಿ ಅಕ್ರಮ ಮರಳು ಗುಡ್ಡೆಗಳ ಜಿಪಿಎಸ್‌ ಭಾವಚಿತ್ರಗಳು. ನಕಾಶೆ ಎಲ್ಲವನ್ನು ಪತ್ರಿಕಾ ಹೇಳಿಕೆಯೊಂದಿಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ಮರಳು ಸಂಗಹದ ಖಾಸಗಿ ಜಮೀನಿನ ಮೇಲೆ ಬೋಜ್‌ ಕೂಡಿಸಲು ಹೊರಟಿರುವ ಜಿಲ್ಲಾಧಿಕಾರಿಗಳು ಮೊದಲು ಜೇವರ್ಗಿಯಿಂದಲೇ ಅದನ್ನ ಶುರು ಮಾಡಲಿ ಎಂದು ಆಗ್ರಹಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ