ಕುಟುಂಬ ನಿರ್ವಹಣೆಯಲ್ಲಿ ಅಜ್ಜ-ಅಜ್ಜಿ ಪ್ರಮುಖ ಪಾತ್ರ: ಭರತ್

KannadaprabhaNewsNetwork | Published : Dec 2, 2024 1:20 AM

ಸಾರಾಂಶ

ಅಜ್ಜ- ಅಜ್ಜಿಯರು ಕುಟುಂಬದಲ್ಲಿ ಪ್ರಮುಖರು. ಮೊಮ್ಮಕ್ಕಳಿಗೆ ಕಥೆ ಹೇಳುವವರಾಗಿ, ಮಕ್ಕಳ ಮಾರ್ಗದರ್ಶಕರಾಗಿ ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವಂತಹವರು. ಮಕ್ಕಳಿಗೆ ಸದ್ಗುಣಗಳನ್ನ್ನು ನಾಜೂಕಾಗಿ ತಿಳಿಸುವ ಅಜ್ಜ -ಅಜ್ಜಿಯರು ಮೊಮ್ಮಕ್ಕಳಿಗೆ ಅತಿಯಾದ ಪ್ರೀತಿ ನೀಡುವ ಜೀವಗಳಾಗಿದ್ದಾರೆ. ಮಕ್ಕಳು ಸಹ ತಮ್ಮ ಅಜ್ಜ-ಅಜ್ಜಿಯರನ್ನು ಗೌರವಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಜ್ಜ- ಅಜ್ಜಿಯರು ಕುಟುಂಬದಲ್ಲಿ ಪ್ರಮುಖರು. ಮೊಮ್ಮಕ್ಕಳಿಗೆ ಕಥೆ ಹೇಳುವವರಾಗಿ, ಮಕ್ಕಳ ಮಾರ್ಗದರ್ಶಕರಾಗಿ ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವಂತಹವರು ಎಂದು ಶಾಲೆಯ ಪ್ರಾಂಶುಪಾಲ ಭರತ್ ಅಲ್ಮೀನ ತಿಳಿಸಿದರು.

ತಾಲೂಕಿನ ಬಿ.ಹೊಸೂರು ಕಾಲೋನಿ ಬಳಿಯ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಆಯೋಜಿಸಲಾಗಿದ್ದ ಅಜ್ಜ- ಅಜ್ಜಿಯರ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮಕ್ಕಳಿಗೆ ಸದ್ಗುಣಗಳನ್ನ್ನು ನಾಜೂಕಾಗಿ ತಿಳಿಸುವ ಅಜ್ಜ -ಅಜ್ಜಿಯರು ಮೊಮ್ಮಕ್ಕಳಿಗೆ ಅತಿಯಾದ ಪ್ರೀತಿ ನೀಡುವ ಜೀವಗಳಾಗಿದ್ದಾರೆ. ಮಕ್ಕಳು ಸಹ ತಮ್ಮ ಅಜ್ಜ-ಅಜ್ಜಿಯರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಮಾಮಣಿ ಮಾತನಾಡಿ, ಅಜ್ಜ-ಅಜ್ಜಿಯ ನಮ್ಮ ಜೀವನದ ಶ್ರೇಷ್ಠ ಆಧಾರ ಸ್ಥಂಭಗಳಾಗಿದ್ದಾರೆ. ಅವರ ಜೀವನ ಅನುಭವ, ಯಾನ, ತಾಳ್ಕೆ ನಮಗೆ ಸಾಕಷ್ಟು ಪಾಠ ಕಲಿಸುತ್ತದೆ. ಅವರು ಕುಟುಂಬದಲ್ಲಿ ಅತ್ಯಮೂಲ್ಯ ಪಾತ್ರ ವಹಿಸುತ್ತಾರೆ ಎಂದರು.

ತಮ್ಮ ಜೀವನದಲ್ಲಿ ಹಲವು ಬಲಿದಾನಗಳನ್ನು ನೀಡುವ ಅವರು, ಕುಟುಂಬದ ಯುವಜನಕ್ಕೆ ಸಂಸ್ಕೃತಿ, ಮೌಲ್ಯಗಳು ಮತ್ತು ನೀತಿಗಳನ್ನು ಕಲಿಸುತ್ತಾರೆ. ಈ ಮೂಲಕ ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಎಂದರು.

ತಮ್ಮೊಂದಿಗೆ ಕಾಲ ಕಳೆಯುವ ಮಕ್ಕಳಿಗೆ ಅಜ್ಜ-ಅಜ್ಜಿಯರು ಸಾತ್ವಿಕ ಪಾಠ ನೀಡುತ್ತಾರೆ. ಅವರ ಸಂಗಡ ಮಕ್ಕಳಿಗೆ ಶಾಂತಿ- ಸಂತೋಷವನ್ನು ನೀಡುವುದಲ್ಲದೆ, ನೈತಿಕ ಪಾಠವನ್ನು ಅವರ ಆರೈಕೆ ಮತ್ತು ಪ್ರೀತಿಯು ಒದಗಿಸುತ್ತದೆ ಎಂದರು.

ಅಜ್ಜ ಅಜ್ಜಿಯರು ಮಕ್ಕಳಲ್ಲಿ ಸಂಸ್ಕೃತಿಯ ಒಲವನ್ನು ತುಂಬಲಿದ್ದು, ಇದನ್ನು ಸದಾ ಮುಂದಿನ ಪೀಳಿಗೆಗೆ ಕೊಂಡೊಯ್ಯುವರು, ಬದುಕಿನ ಅನುಭವ ಮತ್ತು ಕಥೆಗಳಿಂದ ಮಕ್ಕಳಿಗೆ ಜೀವನ ಪಾಠ ಕಲಿಸುವುದಲ್ಲದೆ. ಶ್ರೇಷ್ಠ ಸಲಹೆಗಾರರಾಗುತ್ತಾರೆ ಎಂದು ತಿಳಿ ಹೇಳಿದ ಅವರು ಈಗಿನ ಮಕ್ಕಳು ಅವರ ಪ್ರೀತಿ, ಜ್ಞಾನ, ಆರೈಕೆಯನ್ನು ಗೌರವಿಸಬೇಕು ಮತ್ತು ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ನಂತರ ಅಜ್ಜ-ಅಜ್ಜಿಯರಿಗೆ ಪಾಸಿಂಗ್-ದ-ಬಾಲ್ ಹಾಗೂ ಮ್ಯೂಸಿಕಲ್ ಚೇರ್ ಆಟಗಳನ್ನು ಆಡಿಸಲಾಯಿತು. ಮಕ್ಕಳಿಂದ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಮಾಡಲಾಯಿತು. ಈ ವೇಳೆ ಶಾಲೆಯ ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Share this article