ವ್ಯಾಯಾಮ ಮಾಡುವುದರಿಂದ ಆರೋಗ್ಯ ಸುಧಾರಣೆ

KannadaprabhaNewsNetwork |  
Published : Aug 22, 2024, 01:00 AM IST
ಸೂಲಿಬೆಲೆ ಹೋಬಳಿ ಬಾಲೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸೂಲಿಬೆಲೆನಿತ್ಯ ವ್ಯಾಯಾಮ ಮಾಡುವುದರಿಂದ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಸೂಲಿಬೆಲೆ, ಶಾಸಕ ಶರತ್ ಬಚ್ಚೇಗೌಡ, ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಸೂಲಿಬೆಲೆ

ನಿತ್ಯ ವ್ಯಾಯಾಮ ಮಾಡುವುದರಿಂದ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೋಬಳಿ ಬಾಲೇನಹಳ್ಳಿ ಗ್ರಾಮದಲ್ಲಿ ದಿ.ಪಿಳ್ಳಪ್ಪ ಕೃಷ್ಣಮ್ಮ ಅವರ ಸ್ಮರಣಾರ್ಥವಾಗಿ ಕಲ್ವಾರಿ ಎ.ಜಿ. ಚರ್ಚ್ ಬಾಲೇನಹಳ್ಳಿ, ವೈದೇಹಿ ಅಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಿರಂತರ ಒತ್ತಡದ ಜೀವನದಿಂದ ಹಾಗೂ ಗುಣಮಟ್ಟದವಲ್ಲದ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ದೃಷ್ಪರಿಣಾಮ ಬೀರಲಿದೆ. ಇದನ್ನು ಸುಧಾರಣೆ ಮಾಡಿಕೊಳ್ಳಬೇಕು ಎಂದರು.

ಪ್ರಸ್ತುತ ಪ್ರಕೃತಿ ದತ್ತವಾಗಿ ನೀಡಿರುವ ಎಲ್ಲಾ ನೀರು, ಗಾಳಿ, ಆಹಾರ ವಿಷವಾಗುತ್ತಿದೆ. ರಾಗಿ ಬೆಳೆಗೂ ಔಷಧಿ ಸಿಂಪಡಣೆ ಮಾಡುವ ಕಾಲ ಬಂದಿದ್ದು, ಇಂತಹ ಸಂದರ್ಭದಲ್ಲಿ ಉತ್ತಮ ಅಹಾರ ಸೇವೆ ಮಾಡಬೇಕು. ಸದೃಢ ಆರೋಗ್ಯದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಹಮ್ಮಿಕೊಳ್ಳುವುದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದರು. ಆರೋಗ್ಯ ಶಿಬಿರದ ಆಯೋಜಕರಾದ ರೆವೆರೆಂಡ್ ರಾಜು, ಯಾಧವ ಸಂಘದ ಅಧ್ಯಕ್ಷ ಮುತ್ಸಂದ್ರ ಆನಂದಪ್ಪ, ಸಮಾಜ ಸೇವಕ ಆರ್.ಟಿ.ಸಿ.ಗೋವಿಂದರಾಜು, ಬಾಲೇನಹಳ್ಳಿ ಗುಂಡಪ್ಪ, ಕಲ್ವಾರಿ ಇದ್ದರು.

ಬಾಕ್ಸ್; ಶ್ರೀಘ್ರದಲ್ಲೆ ಸರ್ಕಾರಿ ಬಸ್ ವ್ಯವಸ್ಥೆ

ಬಾಲೇನಹಳ್ಳಿ ಗ್ರಾಮದ ಜನರ ಬೇಡಿಕೆಯಂತೆ ಶ್ರೀಘ್ರದಲ್ಲೇ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗುವುದು. ಕ್ರಿಶ್ವಿಯನ್ ಸಮುದಾಯದ ಕಲ್ವಾರಿ ಚರ್ಚ್ ಅಭಿವೃದ್ಧಿಗೆ ಹಾಗೂ ಸಮುದಾಯದ ಏಳಿಗೆಗೆ ಅವಶ್ಯಕತೆ ಇರುವ ವಿಷಯನ್ನು ಇಲಾಖೆಯ ಗಮನಕ್ಕೆ ತಂದು ಅಲ್ಪಸಂಖ್ಯಾತ ಇಲಾಖೆಯಿಂದ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.

ಚಿತ್ರ; ೨೧ ಸೂಲಿಬೆಲೆ ೦೦೧ ಜೆಪಿಜೆ ನಲ್ಲಿದೆ

ಸೂಲಿಬೆಲೆ ಹೋಬಳಿ ಬಾಲೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ