ಕನ್ನಡಪ್ರಭ ವಾರ್ತೆ ಇಂಡಿ
ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಜ್ಞಾನ ಬೆಳೆಸಿಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಗಳಿಗೆ ಅಣಿಯಾಗಬೇಕು ಎಂದು ಶಾಸಕ, ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರುಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಶಿಕ್ಷಣಾಧಿಕಾರಿ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಮತ್ತು ಶಿಕ್ಷಕರ ಸಹಯೋಗದಲ್ಲಿ ತಾಲೂಕು ಮಟ್ಟದ ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಕೌನ್ ಬನೇಗಾ ವಿದ್ಯಾಪತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಾಲಾ ಪಠ್ಯ ವಿಷಯಗಳ ಜೊತೆ ಜ್ಞಾನಾತ್ಮಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಜ್ಞಾನ ಸಿಮೀತವಲ್ಲ. ಇದರ ಆಳ ಅಂತರ ತಿಳಿದಿಲ್ಲ .ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಗಳು ಸಿಮೀತ ಗಡಿರೇಖೆ ಇರುವುದಿಲ್ಲ. ಎಷ್ಟು ಓದಿದರೂ ಕಡಿಮೆಯೇ. ಆದ್ದರಿಂದ ವಿದ್ಯಾರ್ಥಿಗಳು ಸತತ ಪರಿಶ್ರಮ ಗುರಿ ಇಟ್ಟುಕೊಳ್ಳಬೇಕು. ಗುರಿ ಇಲ್ಲದ ಜೀವನ ದಿಕ್ಸೂಚಿ ಇಲ್ಲದ ಹಡುಗಿನಂತಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳೂ ಜ್ಞಾನಾತ್ಮ ವಲಯಕ್ಕೆ ಹೆಚ್ಚು ಆದ್ಯತೆ ಇರಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ ಹಾಗೂ ಶಿಕ್ಷಕ ಬಳಗ ವಿದ್ಯಾರ್ಥಿಗಳಿಗೆ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಎಸಿ ಅಬೀದ ಗದ್ಯಾಳ ಮಾತನಾಡಿ, ಪ್ರಪಂಚ ಎಂದಾಕ್ಷಣ ಜಗತ್ತು ಎನ್ನುತ್ತೇವೆ ಹಾಗೆ ಸ್ಪಧಾತ್ಮಕ ಎಂದಾಕ್ಷಣ ಇಡೀ ಜ್ಞಾನ ಎಂಬ ಕಲ್ಪನೆ ವಿದ್ಯಾರ್ಥಿಗಳಲ್ಲಿ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಳ, ಅಂತರವಿಲ್ಲ. ವಿಷಯದ ಹರವು ವ್ಯಾಪ್ತಿ ಸಾಕಷ್ಟು ಇದೆ. ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಬೇಕು. ಅಂದಾಗ ಯಶಸ್ವಿಯಾಗಲು ಸಾಧ್ಯ ಎಂದರು.ಜಿಲ್ಲಾ ಪ್ರೌಢ ಶಾಲೆಗಳ ಅಧ್ಯಕ್ಷ ಶಿವರಾಜ ಬಿರಾದಾರ, ಕೇತ್ರ ಶಿಕ್ಷಣಾಧಿಕಾರಿ ಟಿ.ಎಸ್ ಆಲಗೂರ, ಕ್ಷೇತ್ರಸಮನ್ವಯಾಧಿಕಾರಿ ಎಸ್.ಆರ್ ನಡಗಡ್ಡಿ, ಎಸ್.ಎಸ್ ಹರಳಯ್ಯಾ, ಎ.ಓ ಹೂಗಾರ, ಪ್ರಭು ಚಾಂದಕವಟೆ, ಸಂತೋಷ ಪಾಟೀಲ, ಈಶ್ವರ ಅಳೂರ ,ಬಸವರಾಜ ಗೋರನಾಳ, ಶಿಕ್ಷಕ ವಿ.ಜಿ.ಕಲ್ಮನಿ ಮುಖಂಡರಾದ ಜಾವೀದ ಮೋಮಿನ್, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಇಲಿಯಾಸ ಬೋರಾಮಣಿ, ಮಹೇಶ ಹೊನಬಿಂದಗಿ, ಸಂತೋಷ ಪರಶೇನವರ್, ಸದಾಶಿವ ಪ್ಯಾಟಿ, ಸುಭಾಷ ಬಾಬರ, ಶೇಖರ ಶಿವಶರಣ , ಅವಿನಾಶ ಬಗಲಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.