ಲೋಕಸಭೆ ಚುನಾವಣೆ ಹಿನ್ನೆಲೆ ಬೇಲೂರಲ್ಲಿ ನೀತಿ ಸಂಹಿತೆ ಮಾಹಿತಿ ನೀಡಿದ ಚುನಾವಣಾಧಿಕಾರಿ

KannadaprabhaNewsNetwork |  
Published : Mar 19, 2024, 12:45 AM ISTUpdated : Mar 19, 2024, 12:46 AM IST
18ಎಚ್ಎಸ್ಎನ್18 : ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ನೂತನವಾಗಿ ನೇಮಕಗೊಂಡಿರುವ  ಸಹಾಯಕ  ಚುನಾವಣಾಧಿಕಾರಿ ಮಂಜುನಾಥ್ ಹಾಗೂ ತಹಶಿಲ್ದಾರ್ ಎಂ ಮಮತಾ ಮಾಹಿತಿ ನೀಡಿದರು. | Kannada Prabha

ಸಾರಾಂಶ

ಏಪ್ರಿಲ್‌ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಬೇಲೂರಲ್ಲಿ ನೂತನವಾಗಿ ನೇಮಕಗೊಂಡಿರುವ ಸಹಾಯಕ ಚುನಾವಣಾಧಿಕಾರಿ ಮಂಜುನಾಥ್ ಹಾಗೂ ತಹಸೀಲ್ದಾರ್ ಎಂ ಮಮತಾ ನೀಡಿದರು.

ಏಪ್ರಿಲ್‌ನಿಂದ ಲೋಕಸಭೆ ಚುನಾವಣೆ । ಮಂಜುನಾಥ್, ತಹಸೀಲ್ದಾರ್ ಮಮತಾ ಮಾಹಿತಿ । ಬೇಲೂರಲ್ಲಿ ೧,೯೯,೯೯೨ ಮತದಾರರು

ಕನ್ನಡಪ್ರಭ ವಾರ್ತೆ ಬೇಲೂರು

2024ನೇ ಏಪ್ರಿಲ್‌ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ನೂತನವಾಗಿ ನೇಮಕಗೊಂಡಿರುವ ಸಹಾಯಕ ಚುನಾವಣಾಧಿಕಾರಿ ಮಂಜುನಾಥ್ ಹಾಗೂ ತಹಸೀಲ್ದಾರ್ ಎಂ ಮಮತಾ ನೀಡಿದರು.

ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ, ತಾಲೂಕಿನಲ್ಲಿ ಒಟ್ಟು ೧,೯೯,೯೯೨ ಮತದಾರರು, ಬೇಲೂರು ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡುಡಿ, ಈಗಾಗಲೇ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ೧೬ ನೇ ತಾರೀಖಿನಿಂದ ಲೋಕಸಭಾ ಚುನಾವಣೆ ವೇಳಾಪಟ್ಟಿಯ ಮಾದರಿಯಂತೆ ನೀತಿ ಸಂಹಿತೆ ಜಾರಿಗೆ ಬಂದಿದೆ. ಅದರಂತೆ ತಾಲೂಕಿನಲ್ಲಿ ಒಟ್ಟು ೧,೯೯,೯೯೨ ಮತದಾರರಿದ್ದು, ಇನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಮಾ.೨೭ ರವರೆಗೆ ಸಮಯವಿದ್ದು ಅರ್ಹ ಮತದಾರರ ಪಟ್ಟಿಗೆ ಸೇರಲು ಅವಕಾಶವಿದೆ. ಒಟ್ಟು ಪುರುಷರು ೧,೦೦೧೫೮ ಹಾಗೂ ಮಹಿಳೆಯರು ೯೯,೮೩೪ ಮತದಾರರಿದ್ದಾರೆ. ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೭೦ ಮತಗಟ್ಟೆಗಳಿದ್ದು ೬ ಹೋಬಳಿಗಳಲ್ಲಿ ಸೂಕ್ಷ್ಮ ೮೧ ಹಾಗೂ ಅತಿ ಸೂಕ್ಷ್ಮ ೧೮೯ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಮನೆಯಲ್ಲಿ ೮೦ ವರ್ಷದವರಿಗೆ ಮಾತ್ರ ಮತದಾನ ಮಾಡಲು ಅವಕಾಶವಿತ್ತು. ಆದರೆ ಅದು ಈಗ ೮೫ ವರ್ಷಗಳಿಗೆ ವಿಸ್ತರಿಸಲಾಗಿದೆ. ಈ ಬಾರಿ18 ಹಾಗೂ 19 ವರ್ಷದ ಗಂಡು ೭೮೩ ಹಾಗೂ ಹೆಣ್ಣು ೧೨೬೬ ಜನ ಮತದಾನ ಮಾಡಲಿದ್ದಾರೆ. ಮತದಾನ ಮಾಡಲು ಅಸಾಧ್ಯವಾದಂತವರಿಗೆ, ಅನಾರೋಗ್ಯ ಪೀಡಿತರು ಮತ್ತು ವಿಕಲಚೇತನರಿಗೆ ಮನೆಯಲ್ಲೇ ಫಾರಂ ೧೨ ಡಿ ಮೂಲಕ ಅವರಿಗೆ ಮತದಾನಕ್ಕೆ ವ್ಯವಸ್ಥೆ ಮಾಡಿದ್ದೇವೆ. ನಮ್ಮ ತಂಡ ಅವರ ಮನೆಗೆ ಭೇಟಿ ನೀಡಿ ಮತದಾರರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿ ಹಾಗೂ ಆದಷ್ಟು ಮತದಾನ ಮಾಡಲು ಉತ್ತೇಜನ ನೀಡುತ್ತೇವೆ ಎಂದು ಹೇಳಿದರು.

ನೂತನ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು ಅದರಂತೆ ತಾಲೂಕಿನ ಚನ್ನಾಪುರ, ಚೀಕನಹಳ್ಳಿ ಜಾವಗಲ್, ಮೂರು ಕಡೆ ಚೆಕ್‌ಪೋಸ್ಟ್ ಅಳವಡಿಸಿದ್ದು ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಯಾವುದೇ ದೂರು ಬಂದರೆ ನಮ್ಮಲ್ಲಿ ಒಟ್ಟು ೧೮ ತಂಡಗಳಿದ್ದು ಎಸ್‌ಎಸ್‌ಟಿ ಮೂರು, ಚೆಕ್‌ಪೋಸ್ಟ್ ೯ ತಂಡ ವಿಡಿಯೋ ೨ ತಂಡ ನಿಯೋಜನೆ ಮಾಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಅಳವಡಿಸಿದ್ದು ಇದರಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಮತದಾನ ಪೆಟ್ಟಿಗೆ ಹಾಗೂ ಸ್ಟ್ರಾಂಗ್ ರೂಂ ವ್ಯವಸ್ಥೆಯನ್ನು ಬೇಲೂರಿನ ವೈಡಿಡಿ ಕಾಲೇಜಿನಲ್ಲಿ ಗುರ್ತಿಸಲಾಗಿದ್ದು ಸಿಬ್ಬಂದಿಗೆ ಮತಗಟ್ಟೆ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರೆ ಸಾರ್ವಜನಿಕರು ಕಂಟ್ರೋಲ್ ರೂಂ 08177-230800ಗೆ ಕರೆ ಮಾಡಬಹುದಾಗಿದೆ ಎಂದು ವಿವರಿಸಿದರು.

ಚುನಾವಣಾ ಸಂಬಂಧಿತ ವೆಬ್ ಪೋರ್ಟಲ್‌ಗಳ ನಿರ್ವಾಹಣೆಗಾಗಿ ತಾಂತ್ರಿಕ ತಂಡ ರಚಿಸಲಾಗಿದೆ. ಇನ್ನು ಉಳಿದಂತೆ ಸಭೆ ಸಮಾರಂಭಗಳಿಗೆ ಚುನಾವಣೆಗೆ ಸಂಬಂಧಪಟ್ಟಂತೆ ಪ್ರಚಾರ ಅನುಮತಿ ಪಡೆಯಬೇಕು. ತಾಲೂಕಿನ ೩೭ ಗ್ರಾಪಂಯಲ್ಲಿ ತಂಡ ಮಾಡಿದ್ದು ಅದರಲ್ಲಿ ಜಾವಗಲ್ ಕೂಡ ಸೇರಿದೆ. ಯುವ ಮತದಾರರು ೩೦೪೭ ಜನರಿದ್ದು ಸೇರದೆ ಇರುವವರು ತಿದ್ದುಪಡಿ ಮಾಡಿಸಲು ಅವಕಾಶವಿದೆ ಎಂದರು. ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ನೂತನವಾಗಿ ನೇಮಕಗೊಂಡಿರುವ ಸಹಾಯಕ ಚುನಾವಣಾಧಿಕಾರಿ ಮಂಜುನಾಥ್ ಹಾಗೂ ತಹಸೀಲ್ದಾರ್ ಎಂ ಮಮತಾ ನೀಡಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ