ಅಯೋಧ್ಯೆ ಮಂದಿರ ಉದ್ಘಾಟನೆ ರಾಮ ಭಕ್ತರಲ್ಲಿ ಸಂತಸ: ಶಾಸಕ

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ಶ್ರೀರಾಮನ ಭಕ್ತರು ಕಂಡಿದ್ದ ಶತಮಾನದ ಕನಸು ನನಸಾಗಿದೆ. ಜ.೨೨ರಂದು ರಾಮ ಮಂದಿರ ಉದ್ಘಾಟನೆ ಆಗಲಿದ್ದು, ಅದನ್ನು ನೋಡುವ ಭಾಗ್ಯ ನಮಗೆಲ್ಲರಿಗೂ ಸಳಿಸಲಿದೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ಕೆ ಇಡೀ ಜಗತ್ತೇ ನಮ್ಮ ದೇಶದತ್ತ ನೋಡುತ್ತಿದೆ: ಶಾಸಕ ಡಾ. ಅವಿನಾಶ ಜಾಧವ್.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕೆಂಬ ಶ್ರೀರಾಮನ ಭಕ್ತರು ಕಂಡಿದ್ದ ಶತಮಾನದ ಕನಸು ನನಸಾಗಿದೆ. ಜ.೨೨ರಂದು ರಾಮ ಮಂದಿರ ಉದ್ಘಾಟನೆ ಆಗಲಿದೆ. ಅದನ್ನು ನೋಡುವ ಭಾಗ್ಯ ನಾವೆಲ್ಲರೂ ನೋಡುವ ಕಾಲ ಸನ್ನಿಹಿತವಾಗಿದೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ಕೆ ಇಡೀ ಜಗತ್ತೇ ನಮ್ಮ ದೇಶದತ್ತ ನೋಡುತ್ತಿದೆ ಎಂದು ಬಿಜೆಪಿ ಶಾಸಕ ಡಾ. ಅವಿನಾಶ ಜಾಧವ್ ಹರ್ಷವ್ಯಕ್ತಪಡಿಸಿದರು.

ಪಟ್ಟಣದ ಚಂದಾಪುರ ನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಅಭಿಯಾನ ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಅಯೋಧ್ಯೆ ಮಂತ್ರಾಕ್ಷತೆಯನ್ನು ತಾಲೂಕಿನ ಪ್ರತಿಯೊಂದು ಮನೆ ಮನೆಗೆ ತಲುಪಿಸಬೇಕು ಮತ್ತು ಜ.೨೨ರಂದು ಎಲ್ಲರೂ ಮನೆ ಮುಂದೆ ದೀಪಗಳನ್ನು ಹಚ್ಚಿ ಸಂಭ್ರಮಿಸಬೇಕು. ಅಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರ ಉದ್ಘಾಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ನೇತೃತ್ವದಲ್ಲಿ ನಡೆಯುತ್ತಿದ್ದು ಇದೊಂದು ಐತಿಹಾಸಿಕ ಸಾಧನೆ ಆಗಿದೆ. ದೇಶದ ರಾಮನ ಭಕ್ತರು ಕಂಡಿದ ಕನಸು ನನಸಾಗಿದೆ ಎಂದು ಶಾಸಕ ಡಾ. ಅವಿನಾಶ ಜಾಧವ್ ಹೇಳಿದರು.

ಆರ್.ಎಸ್.ಎಸ್. ಜಿಲ್ಲಾ ಸಂಘದ ಸಂಚಾಲಕ ಅಶೋಕ ಪಾಟೀಲ ಮಾತನಾಡಿ, ದೇಶದಲ್ಲಿ ಬಿಜೆಪಿ ತುಂಬಾ ಬಿಲಿಷ್ಠವಾಗುತ್ತಿರುವುದಕ್ಕೆ ಅದರ ಹಿಂದೆ ಶ್ರೀರಾಮನ ಆಶೀರ್ವಾದ ಹೆಚ್ಚಾಗಿದೆ.ಶ್ರೀರಾಮ ಮಂತ್ರಾಕ್ಷತೆ ನಿಮ್ಮೂರಿಗೆ ಬಂದಾಗ ರಾಮನೆ ಬಂದ ಹಾಗೇ ನಾವೆಲ್ಲರೂ ಸಂಭ್ರಮಿಸಬೇಕು ಎಂದರು.

ವಿಹೆಚ್‌ಪಿ ಆರ್.ಎಸ್.ಎಸ್ ಮುಖಂಡ ರೇವಣಸಿದ್ದಪ್ಪ ಮೋಘಾ, ಸಂತೋಷ ಗಡಂತಿ, ಭೀಮಶೆಟ್ಟಿ ಮುರುಡಾ, ಗಿರಿರಾಜ ನಾಟೀಕಾರ, ಗೋಪಾಲರಾವ ಕಟ್ಟಿಮನಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೌತಮ ಪಾಟೀಲ, ನರಸಿಂಹರೆಡ್ಡಿ ನರನಾಳ, ಮಲ್ಲಿಕಾರ್ಜುನ ಉಡುಪಿ, ಉದಯಕುಮಾರ ಸಿಂಧೋಲ, ಸೂರ್ಯಕಾಂತ ಚಿಂಚೋಳಿಕರ, ಭೀಮಶೆಟ್ಟಿ ಮುಕ್ಕಾ, ಮಚೇಂದ್ರ ಸೇರಿಕಾರ, ಪ್ರವೀಣಕುಮಾರ, ಆಕಾಶ ಕೊಳ್ಳುರ, ಶರಣಗೌಡ ಮುದ್ದಾ, ಪಿಎಲ್‌ಡಿ ಬ್ಯಾಂಕ ನಿರ್ದೇಶಕ ಶ್ರೀಹರಿ ಕಾಟಾಪೂರ, ಹರ್ಷವರ್ಧನ ಮ್ಯಾಕಲ್ ಇನ್ನಿತರಿದ್ದರು.

ತಾಲೂಕ ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ ಸ್ವಾಗತಿಸಿದರು ಅನೀಲಕುಮಾರ ಕಂಟ್ಲಿ ನಿರೂಪಿಸಿದರು ಶ್ರೀನಿವಾಸ ಚಿಂಚೋಳಿಕರ ವಂದಿಸಿದರು.

Share this article