ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಾರ್ವಜನಿಕ ಹಿತದೃಷ್ಟಿಯಿಂದ ನಮ್ಮ ಟ್ರಸ್ಟ್ ನಿಂದ ಕಾಡಂಚಿನ ಗ್ರಾಮಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಆರೋಗ್ಯ ಸೇವೆ ಒದಗಿಸಲಾಗುತ್ತಿತ್ತು. ಇನ್ನು ಮುಂದೆ ಲಯನ್ಸ್ ಸಂಸ್ಥೆ ಹಾಗೂ ನಮ್ಮ ಟ್ರಸ್ಟ್ ವತಿಯಿಂದ ಪಟ್ಟಣ ಪ್ರದೇಶಗಳಲ್ಲಿಯೂ ಆರೋಗ್ಯ ಅರಿವು ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಕಾಯಿಲೆ ಬಾರದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಸರ್ಕಾರಿ ಶಾಲಾ ಮಕ್ಕಳಿಗೆ, ಸರ್ಕಾರಿ ಶಾಲೆಗೆ ಬೇಕಾದ ಸವಲತ್ತುಗಳನ್ನು ಗುರುತಿಸಿ ನೀಡಲಾಗುವುದು. ಈಗಾಗಲೇ ನಗರದ ಪಿಡಬ್ಲ್ಯೂಡಿ ಕಾಲೋನಿಯಲ್ಲಿರುವ ಪಿಡಬ್ಲ್ಯೂಡಿ ಶಾಲೆಯನ್ನು ನಮ್ಮ ಟ್ರಸ್ಟ್ ವತಿಯಿಂದ ದತ್ತು ಸ್ವೀಕರಿಸಿ ಆರು ಕೊಠಡಿಗಳ ನಿರ್ಮಾಣ ಹಾಗೂ ವಾಹನ ವ್ಯವಸ್ಥೆ ಮಾಡಿ ದಾಖಲಾತಿ ಹೆಚ್ಚಿಸಲಾಗಿದೆ. ಪಿಯು ವರೆಗೂ ಅಲ್ಲಿಯೇ ಶೈಕ್ಷಣಿಕ ಸೇವೆ ಒದಗಿಸುವ ದೃಷ್ಟಿಯಿಂದ ನಮ್ಮ ಟ್ರಸ್ಟ್ ಹಾಗೂ ಲಯನ್ಸ್ ಸಂಸ್ಥೆ ಮೂಲಕ ಶಾಲೆ ಅಭಿವೃದ್ಧಿ ಪಡಿಸಲಾಗುವುದು ಎಂದರು.ಲಯನ್ಸ್ ಮಾಜಿ ರಾಜ್ಯಪಾಲ ಎಂ.ವಿ ದೇವಿ ಪ್ರಸಾದ್ ನೂತನ ಸದಸ್ಯರಿಗೆ ಹಾಗೂ ಅಧ್ಯಕ್ಷರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಉತ್ತಮರು ಉತ್ತಮವಾದ ಸೇವೆಗೆ ಬಂದಾಗ ಸಮಾಜ ಸೇವೆ ಅಚ್ಚುಕಟ್ಟಾಗಿ ನಡೆಯುತ್ತೆ ಎಂದರು.
ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಜೈನ್, ಖಜಾಂಚಿ ಲೋಕೇಶ್ ಕುಮಾರ್ ಜೈನ್, ಕಾರ್ಯದರ್ಶಿ ಟಿ.ಎಂ.ರಂಗಸ್ವಾಮಿ, ವಲಯ ಅಧ್ಯಕ್ಷ ಜಯ ಕುಮಾರ್, ಪ್ರಾಂತೀಯ ಅಧ್ಯಕ್ಷ ರವಿ ಕುಮಾರ್, ಮೈಸೂರಿನ ವಿಸ್ಮಯ್, ಪ್ರಭುಸ್ವಾಮಿ, ಚೇತನ್, ಹೊಸೂರು ಜಗದೀಶ್ ಹಾಜರಿದ್ದರು.