ಕನ್ನಡಪ್ರಭ ವಾರ್ತೆ ಬೆಟ್ಟದಪುರ
ವಿದ್ಯಾರ್ಥಿಗಳು ಪುಸ್ತಕ ಪ್ರೇಮಿಯಾಗಬೇಕು, ಪುಸ್ತಕಗಳೇ ನಿಮ್ಮ ಸಂಗಾತಿ ಗಳಾಗಬೇಕು ಎಂದು ಹಾರನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಹೇಳಿದರು.ಪಟ್ಟಣದ ಅನಿಕೇತನ ಪಿಯು ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಪ್ರೆಮಿಯಾದರೆ ಒಂಟಿತನ ಕಾಡುವುದಿಲ್ಲ. ಪುಸ್ತಕದಿಂದ ಹೆಚ್ಚಿನ ಜ್ಞಾನ ಸಂಪಾದಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಜ್ಞಾವಿದ್ದರೆ ಯಾವುದೇ ಸಮಸ್ಯೆಯನ್ನು ಎದುರಿಸಬಹದು, ಜ್ಞಾನವೇ ನಿಜವಾದ ಸಂಪತ್ತು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯಬೇಕಾದರೆ ಜ್ಞಾನದಲ್ಲಿ ಸಬಲರಾಗಬೇಕು . ಜ್ಞಾನವೇ ಶಕ್ತಿ, ವಿದ್ಯಾರ್ಥಿಗಳು ಉತ್ತಮ ಜ್ಞಾನ ಪಡೆದುಕೊಂಡು ಸಮಾಜದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಜಾನಪದ ಕಲಾವಿದೆ ಅನಿತಾ ತೋಟಪ್ಪ ಶೆಟ್ಟಿ ಮಾತನಾಡಿ, ನಾಯಕತ್ವ ಸ್ವಯಂ ಪ್ರೇರಣೆಯಿಂದ ಬರಬೇಕು. ಸಾಮಾಜಿಕ ಕಳಕಳಿ ಇದ್ದರೆ ನಾಯಕತ್ವದ ಗುಣ ಬೆಳೆಸಿಕೊಳ್ಳಬಹುದು. ಹಣದ ಹಿಂದೆ ಹೋದರೆ ನಾಯಕರಾಗಲು ಸಾಧ್ಯ ವಿಲ್ಲ. ವಿದ್ಯಾರ್ಥಿಗಳು ಸಾಮಾಜಿಕ ಪರಿಜ್ಞಾನ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಬೆಳೆಯಿರಿ ಎಂದು ಹೇಳಿದರು.
ಮೈಸೂರಿನ ಡ಼ಯಟ್ ನ ನಿವೃತ್ತ ಉಪನ್ಯಾಸಕ ಆರ್.ಎಸ್. ದೊಡ್ಡಣ್ಣ ಮಾತನಾಡಿ, ವಿದ್ಯಾರ್ಥಿಗಳ ಮುಂದೆ ಬಹಳ ದೊಡ್ಡ ಸಮಸ್ಯೆಗಳಿವೆ. ಅವುಗಳನ್ನು ಎದುರಿಸಲು ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಬೇಕಾಗಿದೆ. ಅವರನ್ನು ಒತ್ತಡದಿಂದ ಹೊರತರಲು ಸಾಂಸ್ಕೃತಿ ಕ ಮತ್ತು ಕ್ರೀಡಾ ಚಟುವಟಿಕೆಗಳು ನೆರವಾಗಲಿದೆ ಎಂದರು.ಮುಖಂಡ ಕೊಣಸೂರು ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಜಿ.ಟಿ. ನಾಗರಾಜು, ನಿವೃತ್ತ ಮುಖ್ಯಶಿಕ್ಷಕ ಸಣ್ಣ ಸ್ವಾಮಿ ಗೌಡ ಮಾತನಾಡಿದರು.ಅಧ್ಯಕ್ಷತೆಯನ್ನು ಮಾನವ ಟ್ರಸ್ಟ್ ಅಧ್ಯಕ್ಷ ಅಪ್ಪಣ್ಣ ವಹಿಸಿದ್ದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಐಶ್ವರ್ಯ, ರುಕ್ಮಿಣಿ, ಅರ್ಜುನ್ ಕುಮಾರ್, ಸಂದೇಶ, ಸುಶ್ಮಿತಾ, ಮಂಗಳ, ಸಚಿನ್, ಸೂರ್ಯ, ಧನುಷ್, ಪಲ್ಲವಿ ಇವರಿಗೆ ಉಪನ್ಯಾಸಕ ಆರ್.ಪಿ. ಲೋಕೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಕಾರ್ಯದರ್ಶಿ ಡಾ.ಜೆ. ಸೋಮಣ್ಣ, ಉಪನ್ಯಾಸಕರಾದ ಅಭಿಜಿತ್, ಚೇತನ್, ರಮ್ಯಾ, ಶಿವನಂಜು, ಪೋಷಕರಾದ ಶ್ರೀನಿವಾಸ್ ಇದ್ದರು.