ಚೆರಿಯಪರಂಬು: ಹಾಕಿ ತರಬೇತಿ ಕಾರ್ಯಾಗಾರ ಆರಂಭ

KannadaprabhaNewsNetwork |  
Published : Apr 06, 2024, 12:45 AM ISTUpdated : Apr 06, 2024, 12:46 AM IST
ಹಾಕಿ ತರಬೇತಿ ಕುರಿತು ಕಾರ್ಯಗಾರ. | Kannada Prabha

ಸಾರಾಂಶ

ಕುಂಡ್ಯೋಳಂಡ ಹಾಕಿ ಕಪ್‌ ಆಯೋಜಕರು, ಕೊಡವ ಹಾಕಿ ಅಕಾಡೆಮಿ ಹಾಕಿ ಕರ್ನಾಟಕ ಹಾಕಿ ಕೂರ್ಗ್ ಸಹಭಾಗಿತ್ವದಲ್ಲಿ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ 16-30ರ ವಯೋಮಾನದ ಹಾಕಿ ಕ್ರೀಡಾಸಕ್ತರಿಗೆ ಮೂರು ದಿನಗಳ ವಿಶೇಷ ಹಾಕಿ ತರಬೇತಿ ಕುರಿತು ಕಾರ್ಯಾಗಾರ ಶುಕ್ರವಾರ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ 16-30ರ ವಯೋಮಾನದ ಹಾಕಿ ಕ್ರೀಡಾಸಕ್ತರಿಗೆ ಮೂರು ದಿನಗಳ ವಿಶೇಷ ಹಾಕಿ ತರಬೇತಿ ಕುರಿತು ಕಾರ್ಯಾಗಾರ ಶುಕ್ರವಾರ ಆರಂಭವಾಯಿತು.

ಕುಂಡ್ಯೋಳಂಡ ಹಾಕಿ ಕಪ್‌ ಆಯೋಜಕರು, ಕೊಡವ ಹಾಕಿ ಅಕಾಡೆಮಿ ಹಾಕಿ ಕರ್ನಾಟಕ ಹಾಕಿ ಕೂರ್ಗ್ ಸಹಭಾಗಿತ್ವದಲ್ಲಿ ಹಾಕಿ ಇಂಡಿಯಾ ಹಾಗೂ ಎಫ್ಐ ಎಚ್ ನುರಿತ ತರಬೇತುದಾರರು ಕಾರ್ಯಗಾರ ಆರಂಭಿಸಿದರು. ಮೊಹಮ್ಮದ್ ಮುನೀರ್ ಹಾಗೂ ಹಾಕಿ ಇಂಡಿಯಾ ತರಬೇತುದಾರ ಬಾಲಾಜಿ ಕುಮಾರ್ ತರಬೇತಿ ನೀಡಿದರು.

ಈ ಸಂದರ್ಭ ಹಾಕಿ ಅಕಾಡೆಮಿ ಉಪ ಅಧ್ಯಕ್ಷ ಕುಕ್ಕೆರ ಜಯ, ಅಕಾಡೆಮಿ ಸದಸ್ಯ ನೆರ್ಪಂಡ ಹರ್ಷ, ತಮಿಳುನಾಡು ಹಾಕಿ ಕ್ರೀಡಾ ಪಟ್ಟು ಪರದಂಡ ಸದಾ ನಾಣ್ಣಯ್ಯ, ಕ್ರೀಡಾ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಸಂಚಾಲಕ ಕುಂಡ್ಯೋಳಂಡ ದಿನೇಶ್, ಹಾಕಿ ಕರ್ನಾಟಕ ಪ್ರಮುಖರಾದ ಕೂಪದಿರ ಗಣಪತಿ, ಟೂರ್ನಿ ಡೈರೆಕ್ಟರ್ ಅಂಜಪರವಂಡ ಕುಶಾಲಪ್ಪ, ವೀಕ್ಷಕ ವರದಿಗಾರ ಚೆಪ್ಪುಡಿರ ಕಾರ್ಯಪ್ಪ ಇನ್ನಿತರರು ಹಾಜರಿದ್ದರು. 20ಕ್ಕೂ ಅಧಿಕ ಹಾಕಿ ಕ್ರೀಡಾಸಕ್ತರು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಮಹಿಳಾ ದೌರ್ಜನ್ಯ ನಿರ್ಬಂಧ ಘಟಕ ಉದ್ಘಾಟನೆ:

ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಿರುವ ಮಹಿಳಾ ದೌರ್ಜನ್ಯ ನಿರ್ಬಂಧ ಘಟಕವನ್ನು ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಮ್ಮ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಉದ್ಘಾಟಿಸಿದರು.

ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಹಿಳೆಯರಿಗೆ ಕಾನೂನು ರಕ್ಷಣೆ, ಹದಿ ಹರಿಯದ ಮತ್ತು ಕಿಶೋರಿಯರ ಸಮಸ್ಯೆ ಕುರಿತಾಗಿ ಸಾವಿತ್ರಮ್ಮ ಮತ್ತು ಶಾಂತಿ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.ಘಟಕದ ಅಧ್ಯಕ್ಷ ಮತ್ತು ಕಾಲೇಜಿನ ಪ್ರಾಂಶುಪಾಲ ಎಂ.ಆರ್.ನಿರಂಜನ್, ಘಟಕದ ಮೇಲ್ವಿಚಾರಕಿ ಶ್ರೇಯಾ ಸುಹಾಸ್ ಮತ್ತು ಘಟಕದ ಸಹ ಮೇಲ್ವಿಚಾರಕಿ ರಮ್ಯ ಶಿವಣ್ಣ, ಮಕ್ಕಳ ಆಪ್ತ ಸಮಾಲೋಚಕರು, ಕಾಲೇಜಿನ ಉಪನ್ಯಾಸಕಿಯರು ಮತ್ತು ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ