ಹರ್ ಘರ್ ತಿರಂಗಾದಿಂದ ದೇಶಭಕ್ತಿ ಹೆಚ್ಚಳ

KannadaprabhaNewsNetwork | Published : Aug 15, 2024 1:51 AM

ಸಾರಾಂಶ

ಹರ್ ಘರ್ ತಿರಂಗಾ ಅಭಿಯಾನ ಪ್ರತಿಯೊಬ್ಬ ನಾಗರಿಕನಲ್ಲಿ ದೇಶ ಭಕ್ತಿಯನ್ನು ಹೆಚ್ಚಿಸುತ್ತದೆ ಎಂದು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಚಂದ್ರಶೇಖರ್ ಕಾಕುಮಾನು ಹೇಳಿದರು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಹರ್ ಘರ್ ತಿರಂಗಾ ಅಭಿಯಾನ ಪ್ರತಿಯೊಬ್ಬ ನಾಗರಿಕನಲ್ಲಿ ದೇಶ ಭಕ್ತಿಯನ್ನು ಹೆಚ್ಚಿಸುತ್ತದೆ ಎಂದು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಚಂದ್ರಶೇಖರ್ ಕಾಕುಮಾನು ಹೇಳಿದರು.

ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ಮತ್ತು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವಿದುರಾಶ್ವಥ ಗ್ರಾಮದ ಪ್ರಮುಖ ರಸ್ತೆಯಲ್ಲಿ ಕೋಲಾರ ಅಂಚೆ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಕಾಲ್ನಡಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶದಾದ್ಯಂತ 78ರ ಸ್ವಾತಂತ್ರ‍್ಯದ ಸಂಭ್ರಮದ ಪ್ರಯುಕ್ತ ಕೇಂದ್ರ ಸರ್ಕಾರವು "ಹರ್ ಘರ್ ತಿರಂಗಾ " ಎಂಬ ಘೋಷ ವಾಕ್ಯದೊಂದಿಗೆ ಆ. 13ರಿಂದ 15ರವರೆಗೆ ದೇಶದ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶ ಭಕ್ತಿಯನ್ನು ಅಭಿವ್ಯಕ್ತಗೊಳಿಸಲು ಅಭಿಯಾನ ಆಯೋಜಿಸಿದೆ. ಎಲ್ಲಾ ನಾಗರಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು. ಕೋಲಾರ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀ ವಿ. ಎಸ್. ಎಲ್. ನರಸಿಂಹರಾವ್ ಮಾತನಾಡಿ, ಹರ್ ಘರ್ ತಿರಂಗಾವನ್ನು ತಮ್ಮ ಮನೆಗಳಿಗೆ ತರಲು ಮತ್ತು ರಾಷ್ಟ್ರದ ಸ್ವಾತಂತ್ರ್ಯದ ಆಚರಣೆಯಲ್ಲಿ ಅದನ್ನು ಹೆಮ್ಮೆಯಿಂದ ಹಾರಿಸಲು ಪ್ರತಿಯೊಬ್ಬ ಭಾರತೀಯನನ್ನು ಆಹ್ವಾನಿಸುತ್ತದೆ. ಭಾರತೀಯ ರಾಷ್ಟ್ರಧ್ವಜವು ಕೇವಲ ಸಂಕೇತವಲ್ಲ. ಆದರೆ ನಮ್ಮ ಸಾಮೂಹಿಕ ಹೆಮ್ಮೆ ಮತ್ತು ಏಕತೆಯ ಆಳವಾದ ಪ್ರತಿನಿಧಿಯಾಗಿದೆ. ಐತಿಹಾಸಿಕವಾಗಿ, ಧ್ವಜದೊಂದಿಗಿನ ನಮ್ಮ ಸಂಬಂಧವು ಆಗಾಗ್ಗೆ ಔಪಚಾರಿಕ ಮತ್ತು ದೂರವಾಗಿದೆ. ಆದರೆ ಈ ಅಭಿಯಾನವು ಅದನ್ನು ಆಳವಾದ ವೈಯಕ್ತಿಕ ಮತ್ತು ಹೃತ್ಪೂರ್ವಕ ಸಂಪರ್ಕವಾಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ. ಮನೆ ಅಂಗಳದಲ್ಲಿ ಧ್ವಜ ಆರಿಸಿ ಹರ್ ಘರ್ ತಿರಂಗ್ ಅಭಿಯಾನ ಯಶ್ವಸಿಗೊಳಿಸಬೇಕು ಎಂದು ಹೇಳಿದರು.ಶಾಲಾ ಮಕ್ಕಳು, ಗ್ರಾಮಸ್ಥರು ಹಾಗೂ ಅಂಚೆ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Share this article