ಸ್ವಾತಂತ್ರ್ಯೋತ್ಸವ: ಕವಿಗೋಷ್ಠಿ, ದೇಶಭಕ್ತಿ ಗೀತೆ ಸ್ಪರ್ಧೆ

KannadaprabhaNewsNetwork |  
Published : Aug 17, 2024, 12:51 AM IST
ಚಿತ್ರ : 16ಎಂಡಿಕೆ1 : ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕವಿಗೋಷ್ಠಿ-ದೇಶಭಕ್ತಿ ಗೀತೆ ಸ್ಪರ್ಧೆ ಮತ್ತು ಪೊಲೀಸ್ ಹಾಗೂ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಹಾಗೂ ನ್ಯಾಷನಲ್ ಮೆಡಿಕೋಸ್ ಸಂಸ್ಥೆ ಕೊಡಗು ಘಟಕದ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕವಿಗೋಷ್ಠಿ-ದೇಶಭಕ್ತಿ ಗೀತೆ ಸ್ಪರ್ಧೆ ಮತ್ತು ಪೊಲೀಸ್ ಹಾಗೂ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ನಗರದ ಪೊಲೀಸ್ ಮೈತ್ರಿ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಧ್ವಜಾರೋಹಣ ನೆರವೇರಿಸಿ, ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು.ಕವಿಗೋಷ್ಠಿ-ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಕನ್ನಡ ಸರಿಗಮಪ ಖ್ಯಾತಿಯ ಯುವ ಗಾಯಕ ಅನ್ವಿತ್‌ ಕುಮಾರ್, ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಉದ್ಘಾಟಿಸಿದರು.ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಹಾಗೂ ಸಂಸ್ಕೃತಿ ಸಿರಿ ಬಳಗ ಟ್ರಸ್ಟಿನ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.ವೈದ್ಯರಾದ ಮಡಿಕೇರಿಯ ಮಕ್ಕಳ ತಜ್ಞ ಡಾ.ದೇವಯ್ಯ, ಡಾ. ಶ್ಯಾಮ್ ಅಪ್ಪಣ್ಣ, ಡಾ. ಆನಂದ್, ಡಾ.ಲೋಕೇಶ್, ಡಾ. ಸುಧಾಕರ್, ಡಾ.ಅನುಶ್ರೀ, ಡಾ.ದೀಪಾ ಸೇರಿದಂತೆ ಮೈಸೂರಿನ ಸುಯೋಗ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು, ಕೊಡಗು ಮೆಡಿಕಲ್ ಕಾಲೇಜು ವೈದ್ಯರಾದ ಡಾ.ಶ್ರೀಕಾಂತ್, ಡಾ.ಹರಿನಾರಾಯಣ್ ಸೇರಿದಂತೆ ವಿವಿಧ ವಿಭಾಗದ ವೈದ್ಯಧಿಕಾರಿಗಳು ತಪಾಸಣೆ ನಡೆಸಿ, ಸಮಾಲೋಚನೆ ನೀಡಿದರು.ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕಾರಾಗೃಹದ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ, ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರಾದಿಯಾಗಿ 140 ಜನರು ಶಿಬಿರದ ಸದುಪಯೋಗ ಪಡೆದರು. ಶಿಬಿರದ ಜೊತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕವಿಗೋಷ್ಠಿ, ದೇಶಭಕ್ತಿ ಗಾಯನ ಸ್ಪರ್ಧೆಗಳೂ ನಡೆದವು.ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಜನಪದ ಪರಿಷತ್‌ ಅಧ್ಯಕ್ಷ ಹಾಗೂ ಪತ್ರಕರ್ತ ಎಚ್.ಟಿ.ಅನಿಲ್, ಸಿನಿಮಾ ನಿರ್ದೇಶಕಿ, ನಿರ್ಮಾಪಕಿ ಕೊಟ್ಟುಕತ್ತಿರಾ ಯಶೋದಾ ಪ್ರಕಾಶ್, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಟ್ರಸ್ಟಿ ಈರಮಂಡ ವಿಜಯ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಮೇಚಿರ ರವಿಶಂಕರ್ ನಾಣಯ್ಯ, ಸಮಾಜ ಸೇವಕರಾದ ಕೆ.ಎಂ.ಬಿ. ಗಣೇಶ್, ಹೈಕೋರ್ಟ್ ವಕೀಲರಾದ ಆನೇಡ ಹರೀಶ್ ಗಣಪತಿ, ಕೂಡಂಡ ಸೀಮಾ ಕಾವೇರಪ್ಪ, ಪ್ರಮುಖರಾದ ಕೇಚಂಡ ಸುನೀತಾ ಗಣೇಶ್, ಕಳ್ಳಿರ ಕಾಂಚನ ಸುಬ್ಬಯ್ಯ, ಮುಕ್ಕಾಟೀರ ಪುಣ್ಯ, ಅಪ್ಪಚಂಡ ಸುಚಿತ, ಕೂಡಂಡ ದಕ್ಷಕ್ ಪೂಣಚ್ಚ, ವೈದ್ಯಕೀಯ ವಿದ್ಯಾರ್ಥಿಗಳ ತಂಡ, ಸಂಸ್ಕೃತಿ ಸಿರಿ ಬಳಗದ ಟ್ರಸ್ಟಿಗಳು ಹಾಜರಿದ್ದರು.

ಅಪ್ಪಚಂಡ ಜಸಿಕ ಕಾವೇರಪ್ಪ ಪ್ರಾರ್ಥಿಸಿದರು. ವೈದ್ಯಕೀಯ ವಿದ್ಯಾರ್ಥಿನಿಯರಾದ ಅನುದೀಪ ಹಾಗೂ ಮನೋಜ್ ಶೇಖರ್ ನಿರೂಪಿಸಿದರು. ನಾಳಿಯಂಡ ಜಯಂತಿ ಸ್ವಾಗತಿಸಿದರು. ಬಳಗದ ಉಪಾಧ್ಯಕ್ಷೆ ಕೋಲೆಯಂಡ ನಿಶಾ ಮೋಹನ್ ವಂದಿಸಿದರು.ಸಾಧಕರಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಮಾಜ ಸೇವೆ ಹಾಗೂ ಪತ್ರಿಕಾರಂಗದ ಸೇವೆಗಾಗಿ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ, ವೈದ್ಯಕೀಯ ಕ್ಷೇತ್ರದಲ್ಲಿ ಅರವಳಿಕೆ ತಜ್ಞ ಡಾ. ರಾಘವನ್ ಹಾಗೂ ಇಎನ್‌ಟಿ ತಜ್ಞ ಡಾ. ಮೋಹನ್ ಅಪ್ಪಾಜಿ ಅವರನ್ನು ಸನ್ಮಾನಿಸಲಾಯಿತು.ಬಹುಮಾನ ವಿತರಣೆ:

ತೀರ್ಪುಗಾರರಾಗಿ ಆಗಮಿಸಿದ್ದ ಸರಿಗಮಪ ಖ್ಯಾತಿಯ ಯುವ ಗಾಯಕ ಅನ್ವಿತ್ ತಮ್ಮ ಸುಮಧುರ ಕಂಠದಿಂದ ದೇಶಭಕ್ತಿ ಗೀತೆಗಳನ್ನು ಹಾಡಿ ಮೆಚ್ಚುಗೆಗೆ ಪಾತ್ರರಾದರು. ನಂತರ ವಿವಿಧ ವಿಭಾಗಗಳಲ್ಲಿ ನಡೆದ ದೇಶಭಕ್ತಿ ಗೀತೆ ಗಾಯನ ಹಾಗೂ ಕವಿಗೋಷ್ಠಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವೇದಿಕೆಯಲ್ಲಿದ್ದ ಗಣ್ಯರು ವಿತರಿಸಿದರು. ಶಿಬಿರದಲ್ಲಿ ಪಾಲ್ಗೊಂಡ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಸ್ಪರ್ಧಾ ವಿಜೇತರು:

ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ: 6 ರಿಂದ 11 ವರ್ಷ ವಿಭಾಗದಲ್ಲಿ ಸ್ಕಂದ ಮಡಿಕೇರಿ ಪ್ರಥಮ, ಅನಘ ಕುಶಾಲನಗರ ದ್ವಿತೀಯ, ಎಂ.ಕೆ.ನಿಷ್ಮ ತೃತೀಯ, 12ರಿಂದ 18 ವರ್ಷದ ವಿಭಾಗದಲ್ಲಿ ಸ್ವಪ್ನ ಮಡಿಕೇರಿ ಪ್ರಥಮ, ಚಿನ್ನಮ್ಮ ದ್ವಿತೀಯ, ಯಶಿಕ ಮಡಿಕೇರಿ ತೃತೀಯ, 18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಬಿ.ಎಂ.ಮಾಧುರ್ಯ ಪ್ರಥಮ, ಗೀತಾ ಮಧುಕರ್ ದ್ವಿತೀಯ, ಜೆಸಿಕಾ ಕಾವೇರಪ್ಪ ತೃತೀಯ ಸ್ಥಾನ ಪಡೆದುಕೊಂಡರು.ಕವಿಗೋಷ್ಠಿಯಲ್ಲಿ ಎಚ್.ಜಿ. ಯಶೋಧ ಪ್ರಥಮ, ಕಿಗ್ಗಾಲು ಎಸ್ ಗಿರೀಶ್ ದ್ವಿತೀಯ, ಸುನಿತಾ ವಿಶ್ವನಾಥ್ ತೃತೀಯ, ಅಂಬೇಕಲ್ ಸುಶೀಲಾ ಕುಶಾಲಪ್ಪ ಹಾಗೂ ಬೇಬಿ ಪೂವಯ್ಯ ಸಮಾಧಾನಕರ ಬಹುಮಾನ ಪಡೆದುಕೊಂಡರು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ