ಭಾರತ ದೇಶಕ್ಕಿದೆ ಭೀಮಬಲ: ಭೀಮರಾಯ

KannadaprabhaNewsNetwork | Published : Apr 15, 2024 1:21 AM

ಸಾರಾಂಶ

ಜಗತ್ತಿನ ಇತರ ದೇಶಗಳಿಗಿಂತ ಭಾರತ ದೇಶ ಎಲ್ಲಾ ರಂಗದಲ್ಲೂ ಮುಂದಿದೆ. ಕೆಲವು ಸಾಮಾಜಿಕ ಸಮಸ್ಯೆಗಳು ಹೊರತು ಪಡಿಸಿದರೆ ಭಾರತವನ್ನು ತಡೆದು ನಿಲ್ಲಿಸುವ ಶಕ್ತಿ ಬೇರಾವ ದೇಶಕ್ಕೂ ಇಲ್ಲ. ಇದಕ್ಕೆ ಕಾರಣ ಭೀಮರಾವ್ ಅಂಬೇಡ್ಕರ್ ಅವರ ಸಂವಿಧಾನ ಎಂದು ಗ್ರಾಪಂ ಕಾರ್ಯದರ್ಶಿ ಭೀಮರಾಯ ಹೇಳಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ಜಗತ್ತಿನ ಇತರ ದೇಶಗಳಿಗಿಂತ ಭಾರತ ದೇಶ ಎಲ್ಲಾ ರಂಗದಲ್ಲೂ ಮುಂದಿದೆ. ಕೆಲವು ಸಾಮಾಜಿಕ ಸಮಸ್ಯೆಗಳು ಹೊರತು ಪಡಿಸಿದರೆ ಭಾರತವನ್ನು ತಡೆದು ನಿಲ್ಲಿಸುವ ಶಕ್ತಿ ಬೇರಾವ ದೇಶಕ್ಕೂ ಇಲ್ಲ. ಇದಕ್ಕೆ ಕಾರಣ ಭೀಮರಾವ್ ಅಂಬೇಡ್ಕರ್ ಅವರ ಸಂವಿಧಾನ ಎಂದು ಗ್ರಾಪಂ ಕಾರ್ಯದರ್ಶಿ ಭೀಮರಾಯ ಹೇಳಿದರು.

ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಬುದ್ದನಗರದ ಸಿದ್ದಾರ್ಥ ವಿಹಾರದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 133ನೇ ಜಯಂತಿ ಅಂಗವಾಗಿ ಮಾತನಾಡಿದ ಅವರು ನಾವು ಸಾಕಷ್ಟು ವಿಚಾರಗಳಲ್ಲಿ ಭೀನ್ನವಾಗಿದ್ದರೂ ಕೂಡ ಭಾರತೀಯರೆನ್ನುವ ಅಭಿಮಾನ ಮೂಡುವಂತೆ ಮಾಡಿದ್ದು ಅಂಬೇಡ್ಕರ್ . ನಾವು ಇಂದು ಅನುಭವಿಸುತ್ತಿರುವ ಆರಾಮದಾಯಕ ಬದುಕು ಅವರು ಕೊಟ್ಟ ಭೀಕ್ಷೆಯಾಗಿದೆ ಎಂದರು.

ಪತ್ರಕರ್ತ ರಾಹುಲ್ ದೊಡ್ಮನಿ ಮಾತನಾಡಿ ಪ್ರತಿವರ್ಷ ಏ.14ರಂದು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜೈಭೀಮ್ ಘೋಷಣೆ ಮಾಡಿದರೆ ಸಾಲದು, ನಿತ್ಯ ಜೀವನದಲ್ಲಿ ಅಂಬೇಡ್ಕರ್ ಸಂದೇಶಗಳು, ಆಶಯಗಳನ್ನು ಪಾಲನೆ ಮಾಡಬೇಕು ಅಂದಾಗ ಅವರ ಜಯಂತಿ ಆಚರಣೆ ಮಾಡಿದ್ದಕ್ಕೆ ಅರ್ಥ ಬರಲಿದೆ ಎಂದ ಅವರು ಮುಂಬೈನ ದಾದರ ಪ್ರದೇಶದ ಚೌಪಾಟಿಯ ಕಡಲ ಕಿನಾರೆಯಲ್ಲಿರುವ ಅಂಬೇಡ್ಕರರ ಸ್ಮಾರಕ ಸ್ಥಳ ಬಹಳ ದೊಡ್ಡ ಮಟ್ಟದಲ್ಲಿ ಅಭಿವೃದ್ದಿಯಾಗಬೇಕಾಗಿತ್ತು. ಆದರೆ ಸರ್ಕಾರಗಳ ಇಚ್ಚಾಶಕ್ತಿಯ ಕೊರತೆಯಿಂದ ಹಿಂದುಳಿದಿದೆ. ಕೇಂದ್ರ ಸರ್ಕಾರ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಪಂಚತೀರ್ಥಗಳ ಹೆಸರಿನಲ್ಲಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದು ಶೀಘ್ರವೇ ಅವರ ಸ್ಮಾರಕ ಸ್ಥಳವನ್ನು ಅಭಿವೃದ್ಧಿ ಪಡಿಸಲಿ ಎಂದು ಆಗ್ರಹಿಸಿದರು.

ಬಳಿಕ ಪಿಡಿಒ ಪ್ರಶಾಂತ ನಂದಿ, ಗ್ರಾಮದ ಪ್ರಮುಖರಾದ ಶಿವಾನಂದ ನಿಲಂಗಿ, ಶರಣು ಸವಳಿ ಹಾಗೂ ಗ್ರಾಮಸ್ಥರು ಸಮಾಲೋಚನೆ ನಡೆಸಿ ಮುಂದಿನ ವರ್ಷದ ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಪದ್ದತಿ ಪ್ರಾರಂಭ ಮಾಡಲಾಗುವುದು. ಅಂಬೇಡ್ಕರ್ ಅವರನ್ನು ಭಾವಚಿತ್ರದಲ್ಲಿ ಪೂಜೆ ಮಾಡಿ ಬಿಡುವುದರ ಬದಲಾಗಿ ಜನರ ಬದುಕಿನಲ್ಲಿ ಅಂಬೇಡ್ಕರ್ ಅವರ ಕನಸನ್ನು ಬಿತ್ತುವ ಕೆಲಸ ಎಲ್ಲರೂ ಕೂಡಿ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಖಾಜಪ್ಪ ಸಿಂಗೆ, ಪ್ರಮುಖರಾದ ಮರೇಪ್ಪ ಸಿಂಗೆ, ಮಂಜುನಾಥ ಆನೂರ, ರೂಪವಾನ ಪ್ಯಾಟಿ, ವಿನೋದ ಅತನೂರ, ಲಕ್ಷ್ಮೀಪುತ್ರ ಮಾತಾರಿ, ಪ್ರಭಾಕರ ಕಲಬಂಡಿ, ಹಣಮಂತ ಆನೂರ, ನಿಂಗಪ್ಪ ನಾಗರಳ್ಳಿ, ಅಂಬಾರಾಯ ಗುಡೆದಮನಿ, ವಿಜಯಕುಮಾರ ಭತ್ತಾ, ಶರಣು ಪಕಾಲಿ,ಶೆಟ್ಟೆಪ್ಪ ಇಮ್ಮನ, ಗುಂಡಪ್ಪ ಸಿಂಗೆ, ರವಿ ಮೂಗಾ, ಹಣಮಂತ, ಮುತ್ತು ಮೂಗಾ, ವಿಜಯ ನಾಗರಳ್ಳಿ, ಸಂತೋಷ ಬ್ಯಾಡಿಗಾಳ, ಶಂಕರ ಮುಗಾ ಸೇರಿದಂತೆ ಅನೇಕರು ಇದ್ದರು.

Share this article