ಭವಿಷ್ಯದಲ್ಲಿ ವಿಶ್ವ ನಾಯಕತ್ವ ಭಾರತ ವಹಿಸಲಿದೆ: ಡಾ.ಮಂಜುನಾಥ ಅಭಿಮತ

KannadaprabhaNewsNetwork | Published : Aug 4, 2024 1:16 AM

ಸಾರಾಂಶ

ತಂಡದ ಸದಸ್ಯರನ್ನು ಸಮಾಜಮುಖಿಯಾದ ಸತ್ಕಾರ್ಯಗಳಿಗೆ ಪ್ರೇರೇಪಿಸುವವನೇ ಸಮರ್ಥ ನಾಯಕ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ದಾವಣಗೆರೆ ತಂಡದ ಸದಸ್ಯರನ್ನು ಸಮಾಜಮುಖಿಯಾದ ಸತ್ಕಾರ್ಯಗಳಿಗೆ ಪ್ರೇರೇಪಿಸುವವನೇ ಸಮರ್ಥ ನಾಯಕ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು.

ನಗರದ ಬಾಪೂಜಿ ವಿದ್ಯಾ ಸಂಸ್ಥೆಯ ಸಿಬಿಎಸ್‌ಇ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ''''''''''''''''''''''''''''''''ಕಲಾವೃಕ್ಷ''''''''''''''''''''''''''''''''ವನ್ನು ಉದ್ಘಾಟಿಸಿ, ಶಾಲಾ ಡೈರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ಭಾರತಕ್ಕೆ ವಿಶ್ವ ನಾಯಕತ್ವ ವಹಿಸುವ ಅವಕಾಶ ಬರಲಿದೆ. ಅದಕ್ಕಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಈಗಿಂದಲೇ ನಾಯಕತ್ವ ಗುಣದ ಪರಿಕಲ್ಪನೆಯನ್ನು ಬೆಳೆಸಬೇಕಿದೆ. ಉತ್ತಮ ನಾಯಕತ್ವವು ಒಂದು ಕಲೆಯಾಗಿದೆ. ಕಾರ್ಯಕ್ರಮಕ್ಕೆ ''''''''ಕಲಾವೃಕ್ಷ'''''''' ಎಂಬ ಶೀರ್ಷಿಕೆ ಯೋಗ್ಯವಾಗಿದೆ ಎಂದರು.

ದೊಡ್ಡ ಮರವು ಒಂದು ವರ್ಷದಲ್ಲಿ ₹2 ಲಕ್ಷ ಮೌಲ್ಯದ ಆಮ್ಲಜನಕವನ್ನೂ, ಸುಮಾರು ₹3 ಲಕ್ಷ ಮೌಲ್ಯದ ಭೂಪಲವತ್ತತೆಯನ್ನೂ ಉಂಟುಮಾಡುವುದು. ಅಲ್ಲದೇ, ಸುಮಾರು ₹3 ಲಕ್ಷ ಮೌಲ್ಯದಷ್ಟು ಭೂ ಸವಕಳಿ ತಡೆಯುತ್ತದೆ. ಸುಮಾರು ₹2 ಲಕ್ಷ ಮೌಲ್ಯದಷ್ಟು ಹಕ್ಕಿಗಳಿಗೆ ನೆರಳು, ಹೂವು, ಕಾಯಿ, ಹಣ್ಣುಗಳನ್ನು ನೀಡುತ್ತದೆ. ಇಂತಹ ಬಹು ಉಪಯೋಗಿ ಒಂದು ಮರವು 50 ವರ್ಷಗಳ ಅವಧಿಯಲ್ಲಿ ₹5 ಕೋಟಿಗೂ ಹೆಚ್ಚಿನ ಮೌಲ್ಯದ ಉಪಕಾರವನ್ನು ಮನುಷ್ಯರಿಗೆ ಮಾಡುತ್ತದೆ ಎಂದರು.

ಶಾಲೆ ಆಡಳಿತಾಧಿಕಾರಿ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾದ ಪ್ರೊ. ವೈ.ವೃಷಭೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ‍್ಯಾನಂತರ ಭಾರತ 10,000 ಪಟ್ಟು ಆರ್ಥಿಕ ಬಲಿಷ್ಠತೆ ಹೊಂದಿದೆ. ವಿದ್ಯಾರ್ಥಿಗಳು ಮುಂದೆ ಮತ್ತಷ್ಟು ದುಡಿದು ಆರ್ಥಿಕತೆ ಬೆಳೆಸಬೇಕು. ನಮ್ಮ ಸಂವಿಧಾನವನ್ನು ಅರ್ಥ ಮಾಡಿಕೊಂಡು ಅದರಂತೆ ನಡೆಯುವುದು ಮತ್ತು ನಡೆಸುವುದು ಸಹಾ ಉತ್ತಮ ನಾಯಕತ್ವದ ಲಕ್ಷಣ ಎಂದು ಹೇಳಿದರು.

ಶಾಲಾ ಪ್ರಾಂಶುಪಾಲ ಎಚ್.ಎಸ್. ಸತೀಶ್, ಶಿಕ್ಷಕಿ ಗೀತಾ, ಕೆ.ಜಿ.ಪುಷ್ಪಾ, ಜೆ.ಎಂ. ಅವಿನಾ, ಸಿಬ್ಬಂದಿ ಮುರುಗೇಶ, ಪ್ರಶಾಂತ, ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿ ಸಂಘದ ಜೀವನ್ ಕೃಷ್ಣ, ಮೊಹಮ್ಮದ್ ಝಾಯಿದ್, ಡಿ.ಪಿ. ಸಾನ್ವಿ, ಮೊಹಮದ್ ಅನಸ್ ಖಾನ್, ಆರ್.ಕೀರ್ತನ ಇತರರು ಇದ್ದರು.

ಅರ್ಚನಾ ಮತ್ತು ತಂಡದವರು ಪ್ರಾರ್ಥಿಸಿದರೆ, ಪ್ರಜ್ವಲ್ ಪಟೇಲ್ ಸ್ವಾಗತಿಸಿದರು. ವರ್ಷಿಣಿ ಹಾಗೂ ಜೋಯಾ ಸುಲ್ತಾನ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಜಿ.ಶೇಟ್ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Share this article