ವಿಶ್ವಕಪ್‌ ಗೆದ್ದು ಬಾ ಭಾರತ<bha>;</bha> ತಂಡಕ್ಕೆ ಶುಭ ಹಾರೈಕೆ

KannadaprabhaNewsNetwork |  
Published : Nov 19, 2023, 01:30 AM IST
ಪೊಟೋ: 18ಎಸ್‌ಎಂಜಿಕೆಪಿ06ಶಿವಮೊಗ್ಗ ಶಿವಪ್ಪನಾಯಕ ವೃತ್ತದಲ್ಲಿ ವಿಶ್ವಕಪ್‌ನಲ್ಲಿ ಭಾರತ ಗೆದ್ದು ಬರಲಿ ಎಂದು ಆರೈಸಿ ಜಿಲ್ಲಾ ಕಾಂಗ್ರೆಸ್ ಕ್ರಿಕೆಟ್ ಅಭಿಮಾನ ಬಳಗದ ವತಿಯಿಂದ ಪ್ರಾರ್ಥನೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಫೈನನ್‌ನಲ್ಲಿ ಭಾರತ ತಂಡಕ್ಕೆ ಶುಭಾಶಯಗಳ ಮಹಾಪೂರ ಹರಿದುಬಂದಿದೆ.ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಕ್ರಿಕೆಟ್ ಅಭಿಮಾನಿ ಬಳಗದ ವತಿಯಿಂದ ವಿಶ್ವಕಪ್‌ ಪೈನಲ್‌ನಲ್ಲಿ ಇಂಡಿಯಾ ಗೆದ್ದು ಬರಲಿ ಎಂದು ಭಾರತಮಾತೆಯ ಫೋಟೋ ಹಿಡಿದು ಪ್ರಾರ್ಥಿಸಿ ಭಾರತ ಕ್ರಿಕೆಟ್‌ ತಂಡದ ಆಟಗಾರಿಗೆ ನೈತಿಕವಾಗಿ ಬೆಂಬಲ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ, ಎಚ್.ಸಿ ಯೋಗೇಶ್, ಪ್ರಮುಖರಾದ ಕೆ.ದೇವೇಂದ್ರಪ್ಪ, ಶಾಮೀರ್ ಖಾನ್ , ಕಾಶಿ ವಿಶ್ವನಾಥ್, ಅಫ್ತಾಜ್ ಪರ್ವಿಜ್, ಐಎನ್‌ಟಿಸಿ ಅಧ್ಯಕ್ಷ ಕವಿತಾ, ಅರ್ಜುನ್ ಪಂಡಿತ್ , ನೂರುಲ್ಲಾ, ಅರ್ಜುನ್ ಮತ್ತಿತರರು ಇದ್ದರು.

ಇಂದು ಅಹಮದಾಬಾದ್‌ನಲ್ಲಿ ಭಾರತ- ಆಸ್ಟ್ರೇಲಿಯಾ ನಡುವೆ ಕ್ರಿಕೆಟ್‌ ವಿಶ್ವಕಪ್‌ ಪೈನಲ್‌ ಹಣಾಹಣಿ ಶಿವಮೊಗ್ಗದಲ್ಲಿ ಅಭಿಮಾನಿಗಳಿಂದ ಗೆಲುವಿಗೆ ಹರಕೆ । ದರ್ಗಾದಲ್ಲಿ ಮುಸ್ಲಿಂ ಮುಖಂಡರಿಂದ ಪಾರ್ಥನೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಫೈನನ್‌ನಲ್ಲಿ ಭಾರತ ತಂಡಕ್ಕೆ ಶುಭಾಶಯಗಳ ಮಹಾಪೂರ ಹರಿದುಬಂದಿದೆ.ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಕ್ರಿಕೆಟ್ ಅಭಿಮಾನಿ ಬಳಗದ ವತಿಯಿಂದ ವಿಶ್ವಕಪ್‌ ಪೈನಲ್‌ನಲ್ಲಿ ಇಂಡಿಯಾ ಗೆದ್ದು ಬರಲಿ ಎಂದು ಭಾರತಮಾತೆಯ ಫೋಟೋ ಹಿಡಿದು ಪ್ರಾರ್ಥಿಸಿ ಭಾರತ ಕ್ರಿಕೆಟ್‌ ತಂಡದ ಆಟಗಾರಿಗೆ ನೈತಿಕವಾಗಿ ಬೆಂಬಲ ಸೂಚಿಸಲಾಯಿತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ, ಎಚ್.ಸಿ ಯೋಗೇಶ್, ಪ್ರಮುಖರಾದ ಕೆ.ದೇವೇಂದ್ರಪ್ಪ, ಶಾಮೀರ್ ಖಾನ್ , ಕಾಶಿ ವಿಶ್ವನಾಥ್, ಅಫ್ತಾಜ್ ಪರ್ವಿಜ್, ಐಎನ್‌ಟಿಸಿ ಅಧ್ಯಕ್ಷ ಕವಿತಾ, ಅರ್ಜುನ್ ಪಂಡಿತ್ , ನೂರುಲ್ಲಾ, ಅರ್ಜುನ್ ಮತ್ತಿತರರು ಇದ್ದರು. ಗೆದ್ದು ಬಾ ಇಂಡಿಯಾ: ಕ್ರಿಕೆಟ್‌ ವಿಶ್ವಕಪ್ ಭಾರತ-ಆಸ್ಟ್ರೇಲಿಯಾ ನಡುವೆ ಫೈನಲ್‌ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು ಟೀಂ ಇಂಡಿಯಾ ಗೆದ್ದು ಬಾ ಎಂದು ಘೋಷಣೆ ಕೂಗಿದರು. ಟೀಂ ಇಂಡಿಯಾಕ್ಕೆ ಚಿಯರ್ ಅಪ್ ಮಾಡಿದ ಕಾಲೇಜು ವಿದ್ಯಾರ್ಥಿನಿಯರು. ಆಲ್ ದ ಬೆಸ್ಟ್ ಟೀಂ ಇಂಡಿಯಾ ಎಂದು ಘೋಷಣೆ. ಮಲೆನಾಡಿನಲ್ಲಿ ಕಾತುರದಿಂದ ಕಾಯುತ್ತಿರುವ ಜನರು. ಇಂಡಿಯಾ ಮೂರನೇ ಬಾರಿ ಗೆದ್ದು ಬರಲಿ ಎಂದು ಘೋಷಣೆ ಕೂಗಿದರು.ದರ್ಗಾದಲ್ಲಿ ಮುಸ್ಲಿಮರ ಪ್ರಾರ್ಥನೆ: ವಿಶ್ವಕಪ್‌ನಲ್ಲಿ ಭಾರತದ ಕ್ರಿಕೆಟ್ ತಂಡ ಗೆಲ್ಲಲಿ ಎಂದು ಶಿವಮೊಗ್ಗದ ಸೈಯದ್ ಷಾ ದಿವಾನ್ ಹಾಲಿ ದರ್ಗಾದಲ್ಲಿ ಮುಸ್ಲಿಮರ ಪ್ರಾರ್ಥಿಸಿದರು. ದುರ್ಗಾ ಕಮಿಟಿ ಅಧ್ಯಕ್ಷ ಹುಸೇನ್ , ಫೈರೋಜ್ ಅಹಮದ್, ಫಿರ್ದೊಷ್ ಮೊದಲಾದವರ ನೇತೃತ್ವದಲ್ಲಿ ನಡೆದ ಪ್ರಾರ್ಥನೆ ಗುರುಗಳ ಸಮಾಧಿಗೆ ಹೂವಿನ ಚಾದರ ಹೊಂದಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿಶ್ವಕಪ್​ನಲ್ಲಿ ಭಾರತ ಜಯಶಾಲಿ ಆಗಬೇಕು ಎಂದು ಕೋರಿದರು. ಭಾರತ ಗೆಲ್ಲಲಿ ಎಂಧು ಘೋಷಣೆ ಕೂಗಿದ ಮಂದಿ ಬಳಿಕ ಕ್ರಿಕೆಟ್ ನೋಡಲು ಕಾತುರದಿಂದ ಕಾಯುತ್ತಿದ್ದೇವೆ. ನಾಳೆ ಟೀಂ ಇಂಡಿಯಾ ಗೆದ್ದೆ ಗೆಲ್ಲುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ವರ್ಲ್ಡ್​ ಕಪ್ ನಮ್ಮದೇ ಎಂದರು.ನೆಹರು ಕ್ರೀಡಾಂಗಣದಲ್ಲಿ ನೇರಪ್ರಸಾರಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ದೊಡ್ಡ ಎಲ್‌ಇಡಿ ಸ್ಕ್ರೀನ್‌ ಮೂಲಕ ಭಾನುವಾರ ನಡೆಯುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುವ ವಿಶ್ವಕಪ್‌ ಫೈನಲ್‌ ಪಂದ್ಯದ ನೇರಪ್ರಸಾರ ಮಾಡಲಾಗುತ್ತಿದೆ. ಮಧ್ಯಾಹ್ನ 1.30ರಿಂದ ಪಂದ್ಯ ಮುಕ್ತಾಯದವರೆಗೆ ಪಂದ್ಯ ವೀಕ್ಷಣೆಗೆ ಅವಕಾಶ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. -----------------

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ