ಕನ್ನಡಪ್ರಭ ವಾರ್ತೆ ಕುಣಿಗಲ್ ಪ್ರಪಂಚದಲ್ಲಿ ಮನೆ ನಿರ್ಮಾಣ ಎಷ್ಟು ಮುಖ್ಯವೋ ಅದೇ ರೀತಿ ಜನಪದ ಕಲೆ ಹಾಗೂ ಕಥೆಗಳು ಅಷ್ಟೇ ಮುಖ್ಯ. ಈ ಕಥೆ ಹೇಳುವ ಸಂಪ್ರದಾಯ ಸಂಸ್ಕೃತಿಯನ್ನು ವಿಶ್ವಕ್ಕೆ ನೀಡಿ ಪರಿಚಯಿಸಿದವರು ಭಾರತೀಯರು ಎಂಬುದು ನಮ್ಮ ಹೆಮ್ಮೆ ಶ್ರೀಮಂತಿಕೆಯ ಸಂಸ್ಕೃತಿಯ ಸಂಕೇತವಾಗಿದೆ ಎಂದು ಜ್ಞಾನಪೀಠ ಪುರಸ್ಕೃತರಾದ ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ. ಕುಣಿಗಲ್ ಪಟ್ಟಣದ ಜ್ಞಾನಭಾರತಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು . ಕಥೆಗಳ ಮೂಲವನ್ನು ನಾವು ಹುಡುಕುತ್ತಾ ಹೋದಾಗ ಭಾರತ ಸೇರಿದಂತೆ ಎಲ್ಲೆಡೆ ಸಿಗುವುದು ಕೇವಲ 280 ಕಥೆಗಳು ಅವುಗಳ ಹುಟ್ಟು ಹೇಗೆ ಪ್ರಾರಂಭವಾಗಿದೆ ಹೇಗೆ ಕಥೆಗಳು ಒಬ್ಬರಿಂದ ಒಬ್ಬರಿಗೆ ಹಂಚಿಕೆ ಆಗುತ್ತವೆ ಎಂಬುದನ್ನು ನೋಡಿದಾಗ ನಮಗೆ ಜನಪದ ಹಾಗೂ ಇತರ ಮೂಲಗಳಿಂದ ಪಾರ್ವತಿ ಕಥೆ ಹೇಳಿದಳು ಎಂದು ಹೇಳಲಾಗುತ್ತದೆ.
ನಮ್ಮ ಮಕ್ಕಳು ಶಾಲೆಯಿಂದ ಬಂದ ನಂತರ ಒಂದು ಘಟನೆಯನ್ನು ತಂದೆಗೆ ತಾಯಿಗೆ ವಿದ್ಯಾರ್ಥಿಗಳಿಗೆ ಗೆಳತಿಗೆ ಬೇರೆಬೇರೆ ರೀತಿಯಲ್ಲಿ ಹೇಳುತ್ತಾರೆ. ಅವರು ಒಂದೊಂದು ವಿಚಾರವನ್ನು ಪ್ರತ್ಯೇಕವಾಗಿ ಹೇಳುವುದರಿಂದ ಅವರಲ್ಲಿ ಕ್ರಿಯಾತ್ಮಕ ಶಕ್ತಿ ಇದೆ ಎಂದು ನಾವು ಪರಿಗಣಿಸುತ್ತೇವೆ. ಇಂತಹ ಮಾದರಿಯ ಕಥೆಗಳು ಜನಪದ ಸಾಹಿತ್ಯ ಸೇರಿದಂತೆ ಹಲವಾರು ವಿಭಿನ್ನಗಳಲ್ಲಿ ಹುಟ್ಟುಕೊಳ್ಳುತ್ತವೆ ಮಕ್ಕಳಲ್ಲಿ ಇರುವಂತಹ ಕ್ರಿಯಾತ್ಮಕ ಚಟುವಟಿಕೆ ಉತ್ತಮ ಚುರುಕು ಆಗುವ ತೀಕ್ಷ್ಣ ವಾಗಿರುತ್ತದೆಮಕ್ಕಳು ಕೇಳುವ ಹಲವಾರು ಪ್ರಶ್ನೆಗಳಿಗೆ ಹಿರಿಯರು ಉತ್ತರ ನೀಡಲು ಸಾಧ್ಯವಿಲ್ಲದೆ ಮಕ್ಕಳನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ಅದು ಮಾಡಬಾರದು ಮಕ್ಕಳಲ್ಲಿರುವ ಪ್ರತಿಭೆಯನ್ನು ತಡೆಯುವ ಕೆಲಸ ಆಗುತ್ತದೆ ಅದಕ್ಕೆ ಗೊತ್ತಿರುವ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡಿ ಎಂದರು. ಜ್ಞಾನಭಾರತಿ ಶಾಲಾ ಆವರಣಕ್ಕೆ ಜ್ಞಾನಪೀಠ ಪುರಸ್ಕೃತರಾದ ಡಾಕ್ಟರ್ ಚಂದ್ರಶೇಖರ್ ಕಂಬಾರ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಅವರ ಮೇಲೆ ಹೂ ಮಳೆ ಕರೆದು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಬಿ ಬಿ ರಾಮಸ್ವಾಮಿಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ ಎಸ್ ಸಿದ್ದಲಿಂಗಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಗುರು ಮೂರ್ತಿ, ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕರಾದ ನೀಲಕಂಠೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಲ್ ಬೋರೇಗೌಡ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಪನಿಪಾಳ್ಯ ರಮೇಶ್ ಇದ್ದರು.ಫೋಟೋ ಇದೆ :11 ಕೆ ಜಿ ಎಲ್ 1 : ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮ