ಕಾಂಗ್ರೆಸ್ ಸಿದ್ಧಾಂತಕ್ಕೆ ಧಕ್ಕೆಯಾದಾಗ ಯುವ ಕಾಂಗ್ರೆಸ್ಸಿಗರು ಸಿಡಿದೇಳಿ

KannadaprabhaNewsNetwork |  
Published : Mar 04, 2025, 12:33 AM IST
2 | Kannada Prabha

ಸಾರಾಂಶ

ಜಿಲ್ಲಾ, ತಾಲೂಕು ಹಾಗೂ ವಿಧಾನಸಭಾ ಪದಾಧಿಕಾರಿಗಳ ಪ್ರಥಮ ಸಭೆ ಹಾಗೂ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ ಮೈಸೂರುಕಾಂಗ್ರೆಸ್ ಸಿದ್ಧಾಂತಕ್ಕೆ ಧಕ್ಕೆಯಾದಾಗ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಿಡಿದೇಳಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಕರೆ ನೀಡಿದರು.ನಗರದ ಇಂದಿರಾ ಕಾಂಗ್ರೆಸ್ ಭವನದಲ್ಲಿ ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯು ಸೋಮವಾರ ಆಯೋಜಿಸಿದ್ದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಿದ ಜಿಲ್ಲಾ, ತಾಲೂಕು ಹಾಗೂ ವಿಧಾನಸಭಾ ಪದಾಧಿಕಾರಿಗಳ ಪ್ರಥಮ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಕಚೇರಿ ನಮಗೆ ದೇಗುಲ. ಗೆದ್ದ ಪ್ರತಿಯೊಬ್ಬ ಪದಾಧಿಕಾರಿಯೂ ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟು ನಂತರ ಇತರೆ ಕಾರ್ಯಗಳಲ್ಲಿ ತೊಡಗಬೇಕು. ಯುವ ಕಾಂಗ್ರೆಸ್ ಚುನಾವಣೆ ನಡೆದಿರುವುದು ಬಿಜೆಪಿ ಅಥವಾ ಜೆಡಿಎಸ್ ವಿರುದ್ಧ ಅಲ್ಲ. ಗೆದ್ದಿರುವುದು ನಮ್ಮದೇ ಪಕ್ಷದ ಕಾರ್ಯಕರ್ತರ ನಡುವೆ. ಈ ಮುಖಾಂತರ ತಮ್ಮ ತಮ್ಮಲ್ಲಿ ಯಾವುದಾದರೂ ಭಿನ್ನಾಭಿಪ್ರಾಯಗಳು ಇದ್ದರೆ ಅದನ್ನು ಬಿಟ್ಟು, ಪಕ್ಷ ಸಂಘಟನೆಯತ್ತ ತೊಡಗಿಸಿಕೊಳ್ಳಬೇಕು ಎಂದರು.ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತದೆ. ಪಕ್ಷದ ಜವಾಬ್ದಾರಿ ಸಾಕಷ್ಟಿದೆ. ತಾಲೂಕು ಪದಾಧಿಕಾರಿಗಳು ಮೊದಲು ತಾಲೂಕು ಕಾಂಗ್ರೆಸ್ ಕಚೇರಿಗೆ ಹೋಗಬೇಕು. ಯಾವುದೇ ಘಟಕದಲ್ಲಿ ಗೆದ್ದರೂ ಮೊದಲು ಕಾರ್ಯಚಟುವಟಿಕೆ ಆರಂಭವಾಗುವುದೇ ಪಕ್ಷದ ಕಚೇರಿಯಿಂದ. ಪಕ್ಷದ ಶಿಷ್ಟಾಚಾರ ಯಾರು ಮರೆಯಬಾರದು ಎಂದು ಅವರು ಹೇಳಿದರು.ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಮಾತನಾಡಿ, ದೇಶದಲ್ಲಿ ಬಿಜೆಪಿ ಸೃಷ್ಟಿ ಮಾಡುತ್ತಿರುವ ಕೋಮುಗಲಭೆ ಹಾಗೂ ಹಸಿ ಹಸಿ ಸುಳ್ಳುಗಳಿಂದ ದೇಶ ಭಾರಿ ಹಿನ್ನಡೆಯನ್ನು ಅನುಭವಿಸುತ್ತಿದೆ. ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ರಾಜಕೀಯ ಲೇಪನ ಮಾಡಿ, ದೇಶದ ಜನತೆಗೆ ಭೋಗಸ್ ಸುದ್ದಿಗಳನ್ನು ಬಿಜೆಪಿಯವರು ಬಿತ್ತರಿಸುತ್ತಿದ್ದಾರೆ. ಇದರ ವಿರುದ್ಧದ ಹೋರಾಟ ಯುವ ಕಾಂಗ್ರೆಸ್ ಪದಾಧಿಕಾರಿಯ ಜವಾಬ್ದಾರಿ ಎಂದರು.ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, ಉದಯಗಿರಿ ಗಲಾಟೆಯನ್ನ ಬಿಜೆಪಿ ತನ್ನ ಸ್ವಾರ್ಥ ಸಾಧನೆಗೆ ಬಳಸಿಕೊಂಡಿದೆ. ದೇಶದಲ್ಲಿ ಬಿಜೆಪಿಯನ್ನು ಬುಡ ಸಮೇತ ಕಿತ್ತೊಗಿಯುವ ತನಕ ಯುವ ಕಾಂಗ್ರೆಸ್ ಪದಾಧಿಕಾರಿಗಳು ವಿಶ್ರಾಂತಿ ಬಯಸಬಾರದು ಎಂದು ತಿಳಿಸಿದರು.ಕಾಂಗ್ರೆಸ್ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಎಂ. ಶಿವಣ್ಣ, ಎಂ. ಶಿವಪ್ರಸಾದ್, ಈಶ್ವರ್ ಚಕ್ಕಡಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದನ್ ಕುಮಾರ್, ನಗರಾಧ್ಯಕ್ಷ ಅಬ್ರಾರ್, ಪದಾಧಿಕಾರಿಗಳಾದ ದೀಪಕ್ ಶಿವಣ್ಣ, ನಜ್ಮಾನ್ ನಜೀರ್, ಅಬ್ರಾರ್ ಅಹಮದ್, ಮುಖಂಡರಾದ ಸಾ.ಮಾ. ಯೋಗೇಶ್, ರಮೇಶ್, ಎನ್.ಆರ್. ನಾಗೇಶ್, ಎಂ.ಕೆ. ಅಶೋಕ್ ಮೊದಲಾದವರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...