- ಮಹಾಕವಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಪಟ್ಟಣಕ್ಕೂ ಗಮಕ ವಾಚನ-ವ್ಯಾಖ್ಯಾನಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ
ಎಚ್.ಸಿ.ಗೋಪಾಲಕೃಷ್ಣ ಹೇಳಿದ್ದಾರೆ.ಕರ್ನಾಟಕ ಗಮಕ ಕಲಾ ಪರಿಷತ್ತು, ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ಪಟ್ಟಣದ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಮಹಾಕವಿ ಕುಮಾರವ್ಯಾಸ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಕವಿ ಕುಮಾರವ್ಯಾಸರಿಗೆ ನುಡಿನಮನ, ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಮಾರವ್ಯಾಸ ಜಯಂತಿ ಏರ್ಪಡಿಸಿರುವುದು ತುಂಬ ಸಂತೋಷ ತಂದಿದೆ. ಪಟ್ಟಣಕ್ಕೆ ಗಮಕ ವಾಚನ ವ್ಯಾಖ್ಯಾನದ ನಂಟು ಬಹಳ ಹಿಂದಿನಿಂದಲೂ ಇದೆ, ಗಮಕ ಕಲಾವಿದೆ ಶಾರದ ಎನ್.ಮಂಜುನಾಥ್ ಗಮಕ ಪರಂಪರೆಯನ್ನು ಮುಂದುವರೆಸಿದ್ದಾರೆ ಎಂದು ಹೇಳಿದರು.ನಿವೃತ್ತ ಉಪನ್ಯಾಸಕ ಡಾ.ಬಿ.ಎಚ್.ಕುಮಾರಸ್ವಾಮಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಗಮಕ ವಾಚನ ಮತ್ತು ವ್ಯಾಖ್ಯಾನ ಎರಡೂ ಆಕರ್ಷಣೀಯವಾಗಿರುತ್ತದೆ. ಗಮಕ ಪ್ರಾಚೀನ ಕಲೆ., ಜಿಲ್ಲಾ ಗಮಕ ಪರಿಷತ್ತು ಬಹಳ ಒಳ್ಳೆಯ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಹೇಳಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಕವಿ ಕುಮಾರವ್ಯಾಸರ ಕಾವ್ಯವಾಚನ ಬಹಳ ವೈಶಿಷ್ಟ್ಯಪೂರ್ಣವಾಗಿದೆ. ವೇದ ಉಪನಿಷತ್ತುಗಳಿಗೆ ಇರುವಷ್ಟು ಮಹತ್ವ ಖಂಡಕಾವ್ಯಗಳಿಗೂ ಅಷ್ಟೇ ಮಹತ್ವ ಇದೆ. ವಾಚನ ವ್ಯಾಖ್ಯಾನಕ್ಕೆ ಅನೇಕ ಮಹನೀಯರ ಕೊಡುಗೆ ಇದೆ. ಕಾವ್ಯವಾಚನ ಎಂದರೆ ಚೈತನ್ಯ ಮೂಡಿಸುತ್ತದೆ, ಕವಿ ಕುಮಾರವ್ಯಾಸರ ಕಾವ್ಯ ಶೈಲಿ
ಬಹಳ ಸುಂದರವಾಗಿದೆ. ಈ ಕಲೆ ಶಾಶ್ವತವಾಗಿ ನೆಲಸಬೇಕು. ವಿಶ್ವ ಕನ್ನಡಭಾಷಾ ದಿನಾಚರಣೆ ನಡೆಸುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.ಜಿಲ್ಲಾ ಗಮಕ ಪರಿಷತ್ತು ಜಿಲ್ಲಾಧ್ಯಕ್ಷ ಶ್ರೀರಾಮ ಸುಬ್ರಾಯ ಶೇಟ್ ಮಾತನಾಡಿ, ಜಿಲ್ಲಾ ಗಮಕ ಪರಿಷತ್ತು ಶಾಲೆಗಳಲ್ಲಿ ಗಮಕ ಕಲೆ ಪ್ರಸಾರ, ದತ್ತಿ ಉಪನ್ಯಾಸಗಳನ್ನು ಆಯೋಜಿಸುತ್ತಿದೆ. ಚಿಕ್ಕಮಕ್ಕಳಿಗೂ ಇದು ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಗಮಕ ಶಿಕ್ಷಕಿ ಶಾರದ ಎನ್.ಮಂಜುನಾಥ್ ಅವರಿಂದ ಗಮಕ ವಾಚನ ಮತ್ತು ಗಮಕ ಜಿಲ್ಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ರಾಮಸುಬ್ರಾಯ ಶೇಠ್ ಅವರಿಂದ ವ್ಯಾಖ್ಯಾನ ಏರ್ಪಡಿಸಲಾಗಿತ್ತು.ಬ್ರಾಹ್ಮಣ ಸೇವಾ ಸಮಿತಿ ಖಜಾಂಚಿ ಡಿ.ಸಿ.ಶ್ರೀನಿವಾಸಮೂರ್ತಿ, ಸಮಿತಿ ನಿರ್ದೇಶಕರಾದ ಡಿ.ವಿ.ಕೃಷ್ಣಮೂರ್ತಿ, ಶ್ರೀವತ್ಸ ಭಜನಾ ಮಂಡಳಿ ಸದಸ್ಯರು, ಲತಾ ಗೋಪಾಲಕೃಷ್ಣ, ರಮಾ ಪ್ರಕಾಶ್ , ಸುನಿತಾ ಕಿರಣ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.22ಕೆಟಿಆರ್.ಕೆ.1ಃ
ತರೀಕೆರೆಯಲ್ಲಿ ಏರ್ಪಾಡಾಗಿದ್ದ ಮಹಾಕವಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮದ ಉದ್ಗಾಟನೆಯನ್ನು ನಿವೃತ್ತ ಉಪನ್ಯಾಸಕ ಡಾ.ಬಿ.ಹೆಚ್.ಕುಮಾರಸ್ವಾಮಿಅವರು ನೆರವೇರಿಸಿದರು. ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷರು ಹೆಚ್.ಸಿ.ಗೋಪಾಲಕೃಷ್ಣ, ಗಮಕ ಶಿಕ್ಷಕರಾದ ಶಾರದ ಎನ್.ಮಂಜುನಾಥ್, ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷರು ರಾಮಸುಬ್ರಾಯ ಶೇಟ್, ಕನ್ನಡಶ್ರೀ ಬಿ.ಎಸ್.ಭಗವಾನ್, ಲತಾ ಗೋಪಾಲಕೃಷ್ಣ , ಸುನಿತಾ ಕಿರಣ್ ಇದ್ದಾರೆ.
---------------