ಕನ್ನಡಪ್ರಭ ವಾರ್ತೆ ಹಾನಗಲ್ಲ
ಹಾನಗಲ್ಲ ತಾಲೂಕು ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ದೇವರಾಜ ಚಾಲನೆ ನೀಡಿದರು.ತಾಲೂಕಿನ ಅಕ್ಕಿಆಲೂರಿನ ಎಂಕೆಬಿಎಸ್ ಶಾಲೆಯಲ್ಲಿ ಅರಳೇಶ್ವರ, ಅಕ್ಕಿಆಲೂರು, ಹೊಂಕಣ ಗ್ರಾಪಂ ವ್ಯಾಪ್ತಿಯ ಮಕ್ಕಳಿಗಾಗಿ ಜ್ಞಾನ ವಿಜ್ಞಾನ ಸಮಿತಿ, ಸರ್ಕಾರಿ ಮಾದರಿ ಕೇಂದ್ರ ಕನ್ನಡ ಗಂಡು ಮಕ್ಕಳ ಶಾಲೆ ಅಕ್ಕಿಆಲೂರು, ಜಿಲ್ಲಾ ಪಂಚಾಯಿತಿ ಹಾವೇರಿ, ತಾಪಂ ಹಾನಗಲ್ಲ, ಶಾಲಾ ಶಿಕ್ಷಣ ಇಲಾಖೆ ಹಾವೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾನಗಲ್ಲ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 3 ದಿನಗಳ ಮಕ್ಕಳ ಸಾಹಿತ್ಯ ಸಂಭ್ರಮದ ಮೆರವಣಿಗೆ ಹಾಗೂ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಮಖಬೂಲ ಅಹಮ್ಮದ ರುಸ್ತುಂಖಾನನವರ, ಮಕ್ಕಳಲ್ಲಿ ಸಾಂಸ್ಕೃತಿಕ ವಾತಾವರಣ ಮೂಡಿಸುವ ಅಗತ್ಯವಿದೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳನ್ನು ಸರಿಯಾದ ಸಂಸ್ಕಾರದಲ್ಲಿ ಬೆಳೆಸಬೇಕು. ಮಕ್ಕಳಲ್ಲಿನ ಪ್ರತಿಭೆ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಒಳ್ಳೆಯ ಅವಕಾಶ ನೀಡಿದರೆ ಅವರ ಭವಿಷ್ಯ ಬೆಳಗಬಹುದು ಎಂದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಸಂಚಾಲಕಿ ರೇಣುಕಾ ಗುಡಿಮನಿ, ಜಿಲ್ಲಾ ಉಪಾಧ್ಯಕ್ಷ ಈರಣ್ಣ ಬೆಳವಡಿ, ಜಿಲ್ಲಾ ಸದಸ್ಯರಾದ ಎಂ.ಬಿ. ಸತೀಶ, ತಾಲೂಕು ಅಧ್ಯಕ್ಷ ಪ್ರಭು ಗುರಪ್ಪನವರ, ಸಂಚಾಲಕಿ ದೀಪಾ ಗೋನಾಳ, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ಕೊಟ್ರೇಶ ಅಂಗಡಿ, ಮುಖ್ಯಾಧ್ಯಾಪಕಿಯರಾದ ಶೋಭಾ ಪಾಟೀಲ, ಎ.ಬಿ. ಸುಜಾತಾ, ತಾಪಂನ ಚನ್ನವೀರಪ್ಪ ರೂಡಗಿ, ಸಂಪನ್ಮೂಲ ವ್ಯಕ್ತಿಗಳಾದ ಎಸ್.ವಿ. ಹೊಸಮನಿ, ಎಂ.ಎಸ್. ಅಮರದ, ಎಚ್. ಸುಧಾ, ಪ್ರಕಾಶ ಚವ್ಹಾಣ, ರಂಜಿತಾ ಶೇಟ್, ನಿಂಗಪ್ಪ ಸಾಳುಂಕೆ, ರಾಘವೇಂದ್ರ ಕೊಂಡೋಜಿ, ಎ.ಎನ್. ಯೋಗೇಂದ್ರಾಚಾರ್, ಬಾಲಚಂದ್ರ ಅಂಬಿಗೇರ, ಗಿರೀಶ ಬೆಳಗಾವಿ, ಸಿದ್ದು ಗೌರಣ್ಣನವರ, ವೀರೇಶ ಚಕ್ಕಡಿ, ಕುಮಾರ ಮಕರವಳ್ಳಿ, ಅಶೋಕ ಇಂದೂರ, ರಾಜು ಲಮಾಣಿ ಪಾಲ್ಗೊಂಡಿದ್ದರು.
ಅಕ್ಕಿಆಲೂರಿನ ಪ್ರಮುಖ ಬೀದಿಗಳಲ್ಲಿ ಮಕ್ಕಳ ಅಲಂಕಾರಿಕ ಮೆರವಣಿಗೆ ನಡೆಯಿತು. ನಂತರ ೧೦೦ ಮಕ್ಕಳಿಗಾಗಿ ಕಥೆ ಕಟ್ಟೋಣ, ಹಾಡು ಹಕ್ಕಿ, ನಾಟಕ ಆಡೋಣ, ನಾನು ರಿಪೋರ್ಟರ್ ಎಂಬ ೪ ಹಂತದ ಮೂರು ದಿನಗಳ ತರಬೇತಿ ಆರಂಭವಾಯಿತು.