ಅಧಿಕಾರ, ಸಂಪತ್ತು ಹಂಚಿಕೆಯಲ್ಲಿ ಮಹಿಳೆಗೆ ಅನ್ಯಾಯ

KannadaprabhaNewsNetwork |  
Published : Mar 18, 2024, 01:55 AM IST
ಸಿಕೆಬಿ-7 ವಿಶ್ವಕರ್ಮ ಮಹಿಳಾ ಮಂಡಳಿವತಿಯಿಂದ ನಡೆದ  ಎರಡನೇ ವರ್ಷದ ಮಹಿಳಾ ದಿನಾಚರಣೆಯನ್ನು ಡಾ. ಆಶಾಲತಾ ಗುರುಪ್ರಸಾದ್ ಉಧ್ಘಾಟಿಸಿದರು | Kannada Prabha

ಸಾರಾಂಶ

ಹೆಣ್ಣುಮಕ್ಕಳು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ದಾಪುಗಾಲು ಹಾಕುತ್ತಿದ್ದಾಳೆ. ಇಂದಿಗೂ ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದು, ಅವರ ಸಮಾನತೆಯ ಹಕ್ಕುಗಳಿಗೆ ಮನೆಯಿಂದಲೇ ಸ್ಫೂರ್ತಿ ತುಂಬಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಹಿಳೆಯು ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಹಣಕಾಸು ಸಚಿವೆಯಾಗಿ ಕುಟುಂಬ ಮುನ್ನಡೆಸಲು ಬಹುಪಾತ್ರದಾರಿಯಾಗಿದ್ದಾಳೆ ಮತ್ತು ಸಮಾಜ ಮುನ್ನಡೆಸಲು ಮಹಿಳೆ ಎಷ್ಟು ಮುಖ್ಯ ಎಂಬುದನ್ನು ಪ್ರತಿಯೊಬ್ಬರು ಅರಿಯ ಬೇಕು ಎಂದು ಗಿನ್ನಿಸ್ ದಾಖಲೆ ವಿಜೇತೆ ಹಾಗೂ ಭರತನಾಟ್ಯ ಪ್ರವೀಣೆ ಡಾ. ಆಶಾಲತಾ ಗುರುಪ್ರಸಾದ್ ಅಭಿಪ್ರಾಯ ಪಟ್ಟರು.ನಗರದ ಕಂದವಾರ ಗೇಟ್‌ನ ಸಿಸಿ ಸರ್ಕಲ್ ಬಳಿಯ ಕಾಳಿಕಾ ಕಮಟೇಶ್ವರ ದೇವಾಲಯದಲ್ಲಿ ವಿಶ್ವಕರ್ಮ ಮಹಿಳಾ ಮಂಡಳಿವತಿಯಿಂದ ಭಾನುವಾರ ನಡೆದ ಎರಡನೇ ವರ್ಷದ ಮಹಿಳಾ ದಿನಾಚರಣೆಯನ್ನು ಉಧ್ಘಾಟಿಸಿ ಮಾಡನಾಡಿ, ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಪೋಷಕರು ತಮ್ಮ ಹೆಣ್ಣು‌ಮಕ್ಕಳ ಶಿಕ್ಷಣದ ಮೇಲೆ ಹೂಡುವ ಹೂಡಿಕೆ ಇಂದಲ್ಲ ನಾಳೆ ಎಂದಿದ್ದರೂ ಉತ್ತಮ‌ ಪ್ರತಿಫಲವನ್ನು ನೀಡುತ್ತದೆ ಎಂದರು. ಅಧಿಕಾರ ಮತ್ತು ಸಂಪತ್ತುಗಳ ಹಂಚಿಕೆ ವಿಚಾರದಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳು ಅಲ್ಪಸಂಖ್ಯಾತರಾಗಿ ಅವಕಾಶ ವಂಚಿತರಾಗುತ್ತಿದ್ದಾರೆ. ಆದರೂ ಸಹ ಹೆಣ್ಣುಮಕ್ಕಳು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ದಾಪುಗಾಲು ಹಾಕುತ್ತಿದ್ದಾಳೆ. ಇಂದಿಗೂ ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದು, ಅವರ ಸಮಾನತೆಯ ಹಕ್ಕುಗಳಿಗೆ ಮನೆಯಿಂದಲೇ ಸ್ಪೂರ್ತಿ ತುಂಬ ಬೇಕು ಎಂದರು.

ಸಾಧಕರಾಗುವತ್ತ ಹೆಜ್ಜೆ ಹಾಕಿ

ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಬ್ಬಲಕ್ಷ್ಮೀ ಬ್ರಹ್ಮಚಾರಿ ಮಾತನಾಡಿ, ಹೆಣ್ಣು ಕ್ರಾಂತಿಕಾರಿ ವಚನಕಾರ ಬಸವಣ್ಣನವರ ಹಾಗೂ ಸಮಾನತೆಯ ಹರಿಕಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಅರ್ಥ ಮಾಡಿಕೊಂಡು ಸಾಧಕರಾಗುವತ್ತ ದಿಟ್ಟ ಹೆಜ್ಜೆ ಹಾಕುವ ಮೂಲಕ ಇತರರಿಗೂ ಮಾದರಿಯಾಗಬೇಕು ಎಂದರು. ಈ ವೇಳೆ ವಿಶ್ವಕರ್ಮ ಮಹಿಳಾ ಮಂಡಳಿಯ ಕಾರ್ಯದರ್ಶಿ ವಿ ಭಾರತಿ, ಗೌರವಾಧ್ಯಕ್ಷೆ ಜಮುನಾ ರಾಮಕೃಷ್ಣ ಆಚಾರ್, ಉಪಾಧ್ಯಕ್ಷರಾದ ಪಾರಿಜಾತ, ಶಶಿಕಲಾ,ಖಜಾಂಚಿ ಎನ್.ಪುಷ್ಪಾವತಮ್ಮ , ಮಹಿಳಾ ಮಂಡಳಿ ಸದಸ್ಯರಾದ ವಿಜಯಲಕ್ಷ್ಮಿ, ಸುಬ್ಬಲಕ್ಷ್ಮಿ, ನಾಗರತ್ನ ಯತೀಶ್, ಮಂಚನಬಲೆ ಪುಷ್ಪವತಮ್ಮ, ಈಶ್ವರಮ್ಮ ,ಸೌಂದರ್ಯ, ಪಾರಿಜಾತ, ಮತ್ತಿತರರು ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ