ಪಟ್ಟಣ ಪಂಚಾಯಿತಿ ಸಿಬ್ಬಂದಿಗಳ ಮಾಹಿತಿ ಫಲಕದಲ್ಲಿ ಅಳವಡಿಸಿ

KannadaprabhaNewsNetwork |  
Published : Jul 19, 2025, 02:00 AM IST
18ಕೆಕೆಆರ್1: ಕುಕನೂರು ಪಪಂ ಕಾರ್ಯಾಲಯದಲ್ಲಿ ಪಪಂ ಮುಖ್ಯಾಧಿಕಾರಿ ನಬೀಸಾಬ್ ಕಂದಗಲ್ ಅವರಿಗೆ  ಪಟ್ಟಣದ ಹಿತರಕ್ಷಣಾ ವೇದಿಕೆಯಿಂದ ನಾನಾ ಅಭಿವೃದ್ಧಿ ಕಾರ್ಯ ಹಾಗೂ ಪಪಂ ಸಿಬ್ಬಂದಿ ಕಾರ್ಯದ ಮಾಹಿತಿ ಕುರಿತು ಮೂರು ಮನವಿಗಳನ್ನು ಸಲ್ಲಿಸಿದ್ದಾರೆ.  | Kannada Prabha

ಸಾರಾಂಶ

ಫಾರಂ ನಂ.-೩ ಹಾಗೂ ಬಿ-ಖಾತಾ ವಿತರಣೆಯಲ್ಲಿ ಆಗುತ್ತಿರುವ ಅನಗತ್ಯ ವಿಳಂಬ ಸರಿಪಡಿಸಬೇಕು. ಸೇವಾ ಸೌಲಭ್ಯ, ಸೇವೆಗಾಗಿ ಸಾರ್ವಜನಿಕರು ಸಲ್ಲಿಸಬೇಕಾದ ದಾಖಲೆ, ಸೇವೆಗಾಗಿ ತಮ್ಮ ಕಚೇರಿಯಿಂದ ನಿಯೋಜಿಸಲಾಗಿರುವ ಸಿಬ್ಬಂದಿ, ಸೇವೆ ಒದಗಿಸಲು ನಿಗದಿಪಡಿಲಾದ ಅವಧಿಯ ಸಂಪೂರ್ಣ ಮಾಹಿತಿಯನ್ನು ಫಲಕದಲ್ಲಿ ಹಾಕಬೇಕು.

ಕುಕನೂರು:

ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಜತೆಗೆ ಸಿಬ್ಬಂದಿ ಕಾರ್ಯದ ಮಾಹಿತಿ ಫಲಕವನ್ನು ಅಳವಡಿಸಬೇಕೆಂದು ಹಿತರಕ್ಷಣಾ ವೇದಿಕೆ ವತಿಯಿಂದ ಮುಖ್ಯಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಫಾರಂ ನಂ.-೩ ಹಾಗೂ ಬಿ-ಖಾತಾ ವಿತರಣೆಯಲ್ಲಿ ಆಗುತ್ತಿರುವ ಅನಗತ್ಯ ವಿಳಂಬ ಸರಿಪಡಿಸಬೇಕು. ಸೇವಾ ಸೌಲಭ್ಯ, ಸೇವೆಗಾಗಿ ಸಾರ್ವಜನಿಕರು ಸಲ್ಲಿಸಬೇಕಾದ ದಾಖಲೆ, ಸೇವೆಗಾಗಿ ತಮ್ಮ ಕಚೇರಿಯಿಂದ ನಿಯೋಜಿಸಲಾಗಿರುವ ಸಿಬ್ಬಂದಿ, ಸೇವೆ ಒದಗಿಸಲು ನಿಗದಿಪಡಿಲಾದ ಅವಧಿಯ ಸಂಪೂರ್ಣ ಮಾಹಿತಿಯನ್ನು ಫಲಕದಲ್ಲಿ ಹಾಕಬೇಕು ಎಂದರು.

ಪಟ್ಟಣದ ಜವಳದ ರಸ್ತೆಗೆ ಚರಂಡಿ ಹಾಗೂ ರಸ್ತೆ ನಿರ್ಮಾಣ, ಜವಳ ಕಾಲನಿಯಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ಹಳೇ ಮಂಗಳೂರು ರಸ್ತೆ ನಿರ್ಮಾಣ, ನಿರ್ಮಾಣದ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡ ತ್ವರಿತಗತಿಯಲ್ಲಿ ಮುಗಿಸಿ ಜನತೆಯ ಉಪಯೋಗಕ್ಕೆ ಲಭ್ಯಗೊಳಿಸುವುದು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ಸೌಲಭ್ಯ ಹಾಗೂ ವಿವಿಧೆಡೆ ಚರಂಡಿ, ಸಿಡಿ ನಿರ್ಮಾಣ, ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿದರು.

ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಅರೆ ಸರ್ಕಾರಿ ಹಾಗೂ ಗುತ್ತಿಗೆ ಸಿಬ್ಬಂದಿಯ ಹೆಸರು, ಪದನಾಮ (ಹುದ್ದೆ) ಹಾಗೂ ಎಷ್ಟು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಸೇವೆಗಾಗಿ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.

ಈ ವೇಳೆ ಸಮಿತಿ ಸಂಚಾಲಕ ರವಿ ಜಕ್ಕಾ, ಸಹ ಸಂಚಾಲಕ ಮಂಜುನಾಥ ನಾಡಗೌಡರ, ಪ್ರಮುಖರಾದ ರವಿತೇಜ ಅಬ್ಬಿಗೇರಿ, ಅಂದಪ್ಪ ಜವಳಿ, ರಾಮಣ್ಣ ಭಜಂತ್ರಿ, ಕನಕಪ್ಪ ಬ್ಯಾಡರ, ರಷೀದಸಾಬ್ ಹಣಜಗೇರಿ, ರಾಮಣ್ಣ ಮುಂದಲಮನಿ, ಮಹಾದೇವಪ್ಪ ಕುರಿ, ಅಪ್ಪಣ್ಣ ಹಕಾರಿ, ನಿಂಗಪ್ಪ ಗೊರ್ಲೆಕೊಪ್ಪ, ವಿನಾಯಕ ಯಾಳಗಿ, ಗೋವಿಂದರಾವ ಕುಲಕರ್ಣಿ, ದೇವರೆಡ್ಡಿ ಬೀಡಿನಾಳ, ಪ್ರಕಾಶ ಬೋರಣ್ಣನವರ, ಬಡವರಾಜ ಬಡಿಗೇರ, ಸಿದ್ಲಿಂಗಯ್ಯ ಬಂಡಿ, ಕಳಕೇಶ ಹತ್ತಿಕಟಗಿ ಇದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!