ಕನ್ನಡಪ್ರಭ ವಾರ್ತೆ ಭಾರತೀನಗರ
ಜಿ.ಮಾದೇಗೌಡ ತಾಂತ್ರಿಕ ಮಹಾ ವಿದ್ಯಾಲಯದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ವಿಭಾಗದಿಂದ ಜಿಎಂಐಟಿ ಇಇಇ ಎಕ್ಸ್‌ಪೋ-2024ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ಕ್ಷೇತ್ರಗಳಿಗಿಂತಲೂ ತಾಂತ್ರಿಕ ಕ್ಷೇತ್ರ ಉಪಯುಕ್ತ ಮತ್ತು ಅಗತ್ಯತೆಯನ್ನು ತೋರಿಸುವಂತಹ ಕ್ಷೇತ್ರವಾಗಿದೆ ಎಂದರು.
ತಂತ್ರ ಜ್ಞಾನದಲ್ಲೂ ಕೂಡ ಸೈ ಎನಿಸಿಕೊಳ್ಳುವಷ್ಟರ ಮಟ್ಟಿಗೆ ಸಾಧನೆ ಹಾದಿಯಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿಗಳು ಮುಂದುವರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳತ್ತ ಆಲೋಚನೆ ಮಾಡಿದ್ದಲ್ಲಿ ತಂತ್ರಜ್ಞಾನದಲ್ಲಿ ನುರಿತರಾಗಬಹುದೆಂದು ತಿಳಿಸಿದರು.ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳೊಡನೆ ವಿವಿಧ ಎಂಜಿನಿಯರ್ ಕಾಲೇಜುಗಳಾದ ಮೈಸೂರಿನ ವಿದ್ಯಾವಿಕಾಸ್ ತಾಂತ್ರಿಕ ಮಹಾವಿದ್ಯಾನಿಲಯ, ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ, ಎಟಿಎಂಇ ಸೇರಿದಂತೆ ಹಲವು ಕಾಲೇಜುಗಳಿಂದ 35ಕ್ಕೂ ಹೆಚ್ಚು ತಂಡಗಳು ಅಂತಿಮ ವರ್ಷದ ತಂತ್ರಜ್ಞಾನ ಬಳಕೆ ಯೋಜನೆಗಳನ್ನು ಪ್ರದರ್ಶನ ಮಾಡಿದರು.
ಜಿಎಂಐಟಿಯ ಮೆಕಾನಿಕಲ್ ವಿಭಾಗದ ಪ್ರೊ.ಪ್ರಶಾಂತ್ ಮಾರ್ಗದರ್ಶನ ಮಾಡಿದ ಸ್ಯಾನಿಟರಿಯ ದಹನಕಾರಕ ವಿನ್ಯಾಸ ಮತ್ತು ತಯಾರಿಕೆಗೆ ದ್ವಿತೀಯ, ಜಿಎಂಐಟಿಯ ಪ್ರೊ.ರವಿಕುಮಾರ್ ಮಾರ್ಗದರ್ಶನ ಮಾಡಿದ ಬಹುಪಯೋಗಿ ಸ್ಮಾರ್ಟ್ ಕೃಷಿ ರೋಬೊಟ್ ಮತ್ತು ತುಮಕೂರಿನ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಪ್ರೊ.ಪ್ರವೀಣ್ ಮಾರ್ಗದರ್ಶನದಲ್ಲಿ ಸೌರಶಕ್ತಿಯನ್ನು ಉಪಯೋಗಿಸಿ ಹವಾನಿಯಂತ್ರಿಕ ಯೋಜನೆಗಳಿಗೆ ತೃತೀಯ ಬಹುಮಾನ ಲಭಿಸಿತು.