ಈಶ ಗ್ರಾಮೋತ್ಸವ: ರೂರಲ್ ಪ್ರೀಮಿಯರ್ ಲೀಗ್ ವಾಲಿಬಾಲ್, ಥ್ರೋಬಾಲ್ ಪಂದ್ಯಾವಳಿ

KannadaprabhaNewsNetwork |  
Published : Aug 24, 2025, 02:00 AM IST
ಈಶ ಗ್ರಾಮೋತ್ಸವ | Kannada Prabha

ಸಾರಾಂಶ

ಈಶ ಫೌಂಡೇಶನ್‌ ವತಿಯಿಂದ 17ನೇ ಆವೃತ್ತಿಯ ಈಶ ಗ್ರಾಮೋತ್ಸವ ಅಂಗವಾಗಿ ರೂರಲ್‌ ಪ್ರೀಮಿಯರ್‌ ಲೀಗ್‌ ಹಮ್ಮಿಕೊಳ್ಳಲಾಗಿದೆ.

ಮಡಿಕೇರಿ : ಈಶ ಫೌಂಡೇಶನ್ ವತಿಯಿಂದ 17ನೇ ಆವೃತ್ತಿಯ ಈಶ ಗ್ರಾಮೋತ್ಸವ ಅಂಗವಾಗಿ ರೂರಲ್ ಪ್ರೀಮಿಯರ್ ಲೀಗ್ ಹಮ್ಮಿಕೊಂಡಿದೆ.ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಈಶ ಫೌಂಡೇಶನ್‌ನ ಸ್ವಯಂ ಸೇವಕ ಎಂ.ಎನ್.ಅಖಿಲ್, ಆ.24ರಂದು ಬೆಳಗ್ಗೆ 8 ಗಂಟೆಗೆ ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ಮೊದಲ ಹಂತದಲ್ಲಿ(ಕ್ಲಸ್ಟರ್ ವಿಭಾಗ) ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ಆಯೋಜಿಸಲಾಗಿದೆ. ಆಟಗಾರರು ಒಂದೇ ಗ್ರಾಮ ಪಂಚಾಯಿತಿಗೆ ಸೇರಿದವರಾಗಿರಬೇಕು. ಅಂತರಾಷ್ಟ್ರೀಯ, ರಾಜ್ಯಮಟ್ಟದ ಆಟಗಾರರಿಗೆ ಅವಕಾಶವಿಲ್ಲ ಎಂದ ಅವರು, ಶಾಲಾ ಕಾಲೇಜು ಮತ್ತು ಮೀಸಲು ತಂಡಗಳಿಗೆ ಆಡಲು ಅವಕಾಶವಿಲ್ಲ. ಗ್ರಾಮೀಣ ಪ್ರತಿಭೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.ಈಶ ಗ್ರಾಮೋತ್ಸವದಲ್ಲಿ ಭಾಗವಹಿಸಲು 8100ಕ್ಕೂ ಹೆಚ್ಚು ಗ್ರಾಮೀಣ ಕರ್ನಾಟಕದ ಆಟಗಾರರು ಸಜ್ಜಾಗಿದ್ದಾರೆ. 17ನೇ ಆವೃತ್ತಿಗೆ ಪ್ರಸಕ್ತ ಸಾಲಿನಲ್ಲಿ ಕರ್ನಾಟಕದಾದ್ಯಂತ 700ಕ್ಕೂ ಹೆಚ್ಚು ತಂಡಗಳ ಸ್ಪರ್ಧೆಗಳಿಗೆ ಸಾಕ್ಷಿಯಾಗಲಿದೆ ಎಂದ ಅವರು, ಕ್ಲಸ್ಟರ್ ಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ವಿಭಾಗೀಯ ಮಟ್ಟದ ಪಂದ್ಯಾವಳಿ ಸೆ.7ರಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ನಡೆಯಲಿದ್ದು, ಅಂತಿಮ ಪಂದ್ಯಾವಳಿ ಸೆ.21 ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಆಯೋಜಿತವಾಗಿದೆ. ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾಟದ ವಿಜೇತ ತಂಡಕ್ಕೆ ತಲಾ 5 ಲಕ್ಷ ರು.. ಬಹುಮಾನ ನೀಡಲಾಗುತ್ತದೆ. ಆಸಕ್ತ ಆಟಗಾರರು 8861641755 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.ಥ್ರೋಬಾಲ್ ಆಟಗಾರ್ತಿ ಕೆ.ಎಂ.ಚಂದ್ರಕಲಾ ಮಾತನಾಡಿ, ಇಂತಹ ಗ್ರಾಮೀಣ ಕ್ರೀಡಾಕೂಟ ಪ್ರೋತ್ಸಾಹ ನೀಡುವಂತಾಗಬೇಕು. ಗ್ರಾಮೀಣ ಕ್ರೀಡಾಕೂಟಗಳು ಪ್ರತಿಭೆಯನ್ನು ಹೊರಹಾಕಲು ಸಹಕಾರಿಯಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಥ್ರೋಬಾಲ್ ಆಟಗಾರ್ತಿ ಕಟ್ಟೆಮನೆ ಮಿಲನ ಉಪಸ್ಥಿತರಿದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!