ಚಾಣಕ್ಯ ವಿವಿ ಕುಲಾಧಿಪತಿಯಾಗಿ ಇಸ್ರೋ ಸೋಮನಾಥ್‌ ನೇಮಕ

KannadaprabhaNewsNetwork |  
Published : Jun 12, 2025, 05:29 AM ISTUpdated : Jun 12, 2025, 10:42 AM IST
s somanath

ಸಾರಾಂಶ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನಿಕಟಪೂರ್ವ ಅಧ್ಯಕ್ಷ ಎಸ್. ಸೋಮನಾಥ್ ಅವರು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ನೇಮಕಗೊಂಡಿದ್ದು, ಗುರುವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

 ಬೆಂಗಳೂರು :  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನಿಕಟಪೂರ್ವ ಅಧ್ಯಕ್ಷ ಎಸ್. ಸೋಮನಾಥ್ ಅವರು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ನೇಮಕಗೊಂಡಿದ್ದು, ಗುರುವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

ಐತಿಹಾಸಿಕ ಚಂದ್ರಯಾನ ಯೋಜನೆಗಳು ಸೇರಿದಂತೆ ಭಾರತದ ಬಾಹ್ಯಾಕಾಶ ಯಾನಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಖ್ಯಾತ ವಿಜ್ಞಾನಿ ಸೋಮನಾಥ್ ಅವರು ಚಾಣಕ್ಯ ವಿವಿಯ ಕುಲಾಧಿಪತಿಯಾಗಿ ನೇಮಕಗೊಂಡಿರುವುದು ವಿಶ್ವವಿದ್ಯಾನಿಲಯದ ಶ್ರೇಷ್ಠತೆ, ನಾವೀನ್ಯತೆ ಮತ್ತು ರಾಷ್ಟ್ರೀಯ ನಿರ್ಮಾಣದ ಅನ್ವೇಷಣೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ವಿಶ್ವವಿದ್ಯಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ಫೋಸಿಸ್‌ನ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ಆರಿಯನ್ ಕ್ಯಾಪಿಟಲ್‌ನ ಟಿ.ವಿ. ಮೋಹನ್‌ದಾಸ್ ಪೈ ಆಡಳಿತ ಮಂಡಳಿ ಸದಸ್ಯರಾಗಿರಲಿದ್ದಾರೆ.

ಇನ್ಫೋಸಿಸ್‌ನ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ಆರಿಯನ್ ಕ್ಯಾಪಿಟಲ್‌ನ ಟಿ.ವಿ. ಮೋಹನ್‌ದಾಸ್ ಪೈಚಾಣಕ್ಯ ವಿವಿಯ ಸಂಸ್ಥಾಪಕ ಕುಲಾಧಿಪತಿ ಎಂ.ಕೆ. ಶ್ರೀಧರ್ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಎಸ್‌. ಸೋಮನಾಥ್ ಅವರನ್ನು ನೇಮಿಸಲಾಗಿದೆ. ಈ ಮಧ್ಯೆ ವಿವಿಯ ಆಡಳಿತ ಮಂಡಳಿಯನ್ನು (ಬಿಒಜಿ) ಪುನರ್ರಚಿಸಿದ್ದು, ಶ್ರೀಧರ್ ಅವರು ಆಡಳಿತ ಮಂಡಳಿಯ ಸದಸ್ಯರಾಗಿ ಮುಂದುವರಿಯಲಿದ್ದಾರೆ.

ಇನ್ಫೋಸಿಸ್‌ನ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ಆರಿಯನ್ ಕ್ಯಾಪಿಟಲ್‌ನ ಟಿ.ವಿ. ಮೋಹನ್‌ದಾಸ್ ಪೈ, ಐಐಎಂಬಿ ಪ್ರಾಧ್ಯಾಪಕ ಬಿ. ಮಹಾದೇವನ್, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಸದಸ್ಯೆ ಶಮಿಕಾ ರವಿ (ಯುಜಿಸಿ ನಾಮನಿರ್ದೇಶನ), ಬೆಂಗಳೂರು ವಿವಿಯ ಮಾಜಿ ಪ್ರಾಧ್ಯಾಪಕಿ ನಂದಿನಿ ಎನ್., ವಿವಿಯ ಮುಖ್ಯ ಕಾರ್ಯಚರಣಾ ಅಧಿಕಾರಿ ನಾಗರಾಜ ರೆಡ್ಡಿ, ವಿವಿಯ ರಿಜಿಸ್ಟ್ರಾರ್ ಸುಶಾಂತ್ ಜೋಶಿ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಮಿತಿಯಲ್ಲಿ ಇರಲಿದ್ದಾರೆ. ಇತ್ತೀಚೆಗೆ ಚಾಣಕ್ಯ ವಿವಿ ಕಾಯ್ದೆಗೆ ತಂದ ತಿದ್ದುಪಡಿ ಪ್ರಕಾರ ಸರ್ಕಾರ ಮತ್ತೊಬ್ಬ ಸದಸ್ಯನನ್ನು ನಾಮನಿರ್ದೇಶನ ಮಾಡಬಹುದು. ಆದರೆ, ಈವರೆಗೆ ಮಾಡಿಲ್ಲ.

- ಆಡಳಿತ ಮಂಡಳಿಗೆ ಕ್ರಿಸ್‌, ಮೋಹನದಾಸ ಪೈ

PREV
Read more Articles on

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ