ಡ್ರೋನ್ ತಂತ್ರಜ್ಞಾನದಿಂದ ಮರಗಳಿಗೆ ಔಷಧ ಸಿಂಪಡಣೆ ಸುಲಭ: ಡಾ.ಜಯಲಕ್ಷ್ಮೀ ನಾರಾಯಣ ಹೆಗ್ಡೆ

KannadaprabhaNewsNetwork |  
Published : Mar 11, 2024, 01:17 AM IST
ನೇರಲಕೆರೆ ಗ್ರಾಮದಲ್ಲಿ ಡ್ರೋನ್  ಪ್ರಾತ್ಯಕ್ಷಿಕೆ ಕಾರ್ಯಕ್ರಮ | Kannada Prabha

ಸಾರಾಂಶ

ಡ್ರೋನ್ ತಂತ್ರಜ್ಞಾನದಿಂದ ಮರಗಳಿಗೆ ಸುಲಭ ಹಾಗೂ ವೇಗವಾಗಿ ಔಷಧ ಸಿಂಪಡಣೆ ಮಾಡಬಹುದು ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕೀಟನಾಶಕ ಪ್ರಾಧ್ಯಾಪಕರಾದ ಡಾ.ಜಯಲಕ್ಷ್ಮಿ ನಾರಾಯಣ ಹೆಗ್ಡೆ ಹೇಳಿದ್ದಾರೆ.

ನೇರಲಕೆರೆ ಗ್ರಾಮದಲ್ಲಿ ಡ್ರೋನ್ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಡ್ರೋನ್ ತಂತ್ರಜ್ಞಾನದಿಂದ ಮರಗಳಿಗೆ ಸುಲಭ ಹಾಗೂ ವೇಗವಾಗಿ ಔಷಧ ಸಿಂಪಡಣೆ ಮಾಡಬಹುದು ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕೀಟನಾಶಕ ಪ್ರಾಧ್ಯಾಪಕರಾದ ಡಾ.ಜಯಲಕ್ಷ್ಮಿ ನಾರಾಯಣ ಹೆಗ್ಡೆ ಹೇಳಿದ್ದಾರೆ.

ನೇರಲಕೆರೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಇರುವಕ್ಕಿ, ಕೃಷಿ ಮಹಾವಿದ್ಯಾಲಯ ನವಿಲೆ ಶಿವಮೊಗ್ಗ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವದಡಿ, ಬೆಂಗಳೂರು ಭಾರತೀಯ ಕೃಷಿ ಸಂಪನ್ಮೂಲ ಬ್ಯೂರೋ ಇವರ ಸಹಕಾರದೊಂದಿಗೆ ಏರ್ಪಡಿಸಿದ್ದ ಡ್ರೋನ್ ಪ್ರಾತ್ಯಕ್ಷಿಕೆ ಯಲ್ಲಿ ಮಾತನಾಡುತ್ತಿದ್ದರು.

ಸಾವಯವ ಕೃಷಿಗೆ ಪೂರಕವಾದ ರಾಸಾಯನಿಕ ಔಷಧಗಳಲ್ಲದೆ ಸಾವಯವ ಕೀಟ ನಾಶಕವನ್ನು ಡ್ರೋನ್ ಮೂಲಕ ಸಿಂಪಡಣೆ ಮಾಡುವ ವಿಧಾನವನ್ನು ಪರಿಚಯಿಸುವುದೇ ಈ ಪ್ರಾತ್ಯಕ್ಷಿಕೆ ಉದ್ದೇಶ ಎಂದು ಹೇಳಿದರು.

ಬೆಂಗಳೂರು ಐಸಿಎಆರ್ ಭಾರತೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ವಿಜ್ಞಾನಿ ಡಾ.ಕೆ.ಸೆಲ್ವರಾಜ್ ಡ್ರೋನ್ ಕುರಿತು ಮಾತನಾಡಿ ಡ್ರೋನ್ ಮೂಲಕ ಔಷಧ ಸಿಂಪಡಣೆ ತರಬೇತಿಯನ್ನು ಬೆಂಗಳೂರಿನಲ್ಲಿ ಕೊಡಲಾಗುತ್ತದೆ, ಡ್ರೋನ್ ಖರೀದಿಗೆ ಸಬ್ಸಿಡಿ ಕೊಡಲಾಗುತ್ತದೆ ಎಂದು ತಿಳಿಸಿದರು. ಡ್ರೋನ್ ಮೂಲಕ ಸಾವಯವ ಕೀಟನಾಶಕ ಸಿಂಪಡಣೆ ಪ್ರಾತ್ಯಕ್ಷಿಕೆ ನೀಡಿದರು.

ನವಿಲೆ ಕೃಷಿ ಮಹಾ ವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಮತ್ತು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಸಂಯೋಜಕ ಡಾ.ಗಜೇಂದ್ರ ಟಿ.ಎಚ್. ಕೃಷಿ ತೋಟಗಾರಿಗೆ ಸಂಶೋಧನಾ ಕೇಂದ್ರದ ಕೀಟಶಾಸ್ತ್ರ ವಿಜ್ಞಾನಿ ಡಾ.ಪಿ.ಕೃಷ್ಣರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

10ಕೆಟಿಆರ್.ಕೆ.02ಃ

ತರೀಕೆರೆ ಸಮೀಪದ ನೇರಲಕೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ಡ್ರೋನ್ ಪ್ರಾತ್ಯಕ್ಷಿಕೆಯಲ್ಲಿ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕೀಟನಾಶಕ ಪ್ರಾಧ್ಯಾಪಕರಾದ ಡಾ.ಜಯಲಕ್ಷ್ಮಿ ನಾರಾಯಣ ಹೆಗ್ಡೆ. ಬೆಂಗಳೂರು ಐಸಿಎಆರ್ ಭಾರತೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ವಿಜ್ಞಾನಿ ಡಾ.ಕೆ.ಸೆಲ್ವರಾಜ್ ಮತ್ತಿತರರು ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...