ವಿಶೇಷಚೇತನರಿಗೆ ನೆರವಾಗುವುದು ಎಲ್ಲರ ಕರ್ತವ್ಯ

KannadaprabhaNewsNetwork |  
Published : Aug 24, 2025, 02:01 AM IST
80ಕ್ಕೂ ಅಧಿಕ ವಿಕಲಚೇತನರಿಗೆ ಕೃತಕ ಅಂಗಾಗ ವಿತರಣೆ: ಎಂ.ಬಿ.ಪಾಟೀಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿಶೇಷಚೇತನರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಸಭಾಂಗಣದಲ್ಲಿ ಭಾರತ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (ಬಿಪಿಸಿಎಲ್) ಸಿ.ಎಸ್.ಆರ್ ಯೋಜನೆಯಡಿಯಲ್ಲಿ 80ಕ್ಕೂ ಹೆಚ್ಚು ವಿಶೇಷಚೇತನರಿಗೆ ಕೃತಕ ಅಂಗಾಗಗಳು ಮತ್ತು ಶ್ರವಣ ಸಾಧನಗಳನ್ನು ವಿತರಿಸಿ ಅವರು ಮಾತನಾಡಿದರು. ಅಪಘಾತಗಳು ಮತ್ತು ಆರೋಗ್ಯ ಚಿಕಿತ್ಸೆ ಸಂದರ್ಭಗಳಲ್ಲಿ ಅಂಗವಿಕಲತೆ ಎದುರಾಗುವ ಸಾಧ್ಯತೆಗಳಿದ್ದು, ಇವುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ವಿಶೇಷಚೇತನರ ಕಲ್ಯಾಣಕ್ಕೆ ಸರ್ಕಾರಗಳು ಯೋಜನೆಗಳನ್ನು ರೂಪಿಸುತ್ತವೆ.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಶೇಷಚೇತನರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಸಭಾಂಗಣದಲ್ಲಿ ಭಾರತ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (ಬಿಪಿಸಿಎಲ್) ಸಿ.ಎಸ್.ಆರ್ ಯೋಜನೆಯಡಿಯಲ್ಲಿ 80ಕ್ಕೂ ಹೆಚ್ಚು ವಿಶೇಷಚೇತನರಿಗೆ ಕೃತಕ ಅಂಗಾಗಗಳು ಮತ್ತು ಶ್ರವಣ ಸಾಧನಗಳನ್ನು ವಿತರಿಸಿ ಅವರು ಮಾತನಾಡಿದರು. ಅಪಘಾತಗಳು ಮತ್ತು ಆರೋಗ್ಯ ಚಿಕಿತ್ಸೆ ಸಂದರ್ಭಗಳಲ್ಲಿ ಅಂಗವಿಕಲತೆ ಎದುರಾಗುವ ಸಾಧ್ಯತೆಗಳಿದ್ದು, ಇವುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ವಿಶೇಷಚೇತನರ ಕಲ್ಯಾಣಕ್ಕೆ ಸರ್ಕಾರಗಳು ಯೋಜನೆಗಳನ್ನು ರೂಪಿಸುತ್ತವೆ. ಸರ್ಕಾರಗಳ ಜೊತೆ ಸಂಘ-ಸಂಸ್ಥೆಗಳೂ ಕೈಜೊಡಿಸಬೇಕು. ಬಿಪಿಸಿಎಲ್‌ನವರು ಸಿಎಸ್ಆರ್ ಅನುದಾನವನ್ನು ನೀಡುವ ಮೂಲಕ ನೆರವಾಗುತ್ತಿದೆ. ಬಿ.ಎಲ್.ಡಿ.ಇ ಸಂಸ್ಥೆಯಯಲ್ಲಿ 1992ರಲ್ಲಿ ರಾಜ್ಯದ ಮೊದಲ ಜಿಲ್ಲಾ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರವನ್ನು ಪ್ರಾರಂಭಿಸಲಾಯಿತು. ಅಂದಿನ ಖ್ಯಾತ ವೈದ್ಯ ಡಾ.ಶಿವರಾಮಪ್ಪ ಅವರು ಮೊಹಂತಿ ಅವರ ಸಹಯೋಗದಲ್ಲಿ ಆರಂಭಿಸಿದರು. ಅಂದಿನಿಂದ ಈ ಸಂಸ್ಥೆ ವಿಶೇಷಚೇತನರಿಗೆ, ಶ್ರವಣದೋಷ ಹೊಂದಿದವರಿಗೆ ಕೃತಕ ಅಂಗಾಂಗ ಮತ್ತು ಸಲಕರಣೆ ಒದಗಿಸುವ ಕೆಲಸ ಮಾಡುತ್ತಿದೆ. ಬಿ.ಎಲ್.ಡಿ.ಇ ಸಂಸ್ಥೆ ಸಮಾಜಮುಖಿ ಕಾರ್ಯಗಳಿಗೆ ಸದಾ ಮುಂಚೂಣಿಯಲ್ಲಿದ್ದು, ಮಹಿಳಾ ವಿಶ್ವವಿದ್ಯಾಲಯಕ್ಕೆ ₹ 50 ಲಕ್ಷ ಆರ್ಥಿಕ ನೆರವು ನೀಡಿದೆ. ವೃಕ್ಷಥಾನ್‌ಗೆ ಪ್ರತಿವರ್ಷ ₹ 25 ಲಕ್ಷ ಸಹಾಯಧನ ನೀಡುತ್ತಿದೆ. ಸರ್ಕಾರಿ ಕೋಟಾದಡಿ ಆಯ್ಕೆಯಾಗುವ ಬಡ ಮತ್ತು ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶೈಕ್ಷಣಿಕ ಮತ್ತು ಹಾಸ್ಟೆಲ್ ಮತ್ತು ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುತ್ತಿದೆ ಎಂದು ಹೇಳಿದರು.ಬಿಪಿಸಿಎಲ್ ಕರ್ನಾಟಕ ಚೀಫ್ ಮ್ಯಾನೇಜರ್‌ ವೆಂಕಟೇಶ ಮಾತನಾಡಿ, ನಾವು ಸಿ.ಎಸ್.ಆರ್ ಅನುದಾನ ನೀಡುವಾಗ ಎಲ್ಲ ಸಂಘ-ಸಂಸ್ಥೆಗಳು ತಮ್ಮ ವೈಯಕ್ತಿಕವಾಗಿ ನೆರವು ಕೇಳುತ್ತಿದ್ದವು. ಆದರೆ, ಸಚಿವ ಎಂ.ಬಿ.ಪಾಟೀಲರು ಮಾತ್ರ ತಮ್ಮ ಸಂಸ್ಥೆಗೆ ನೆರವು ಕೇಳುವ ಬದಲು ಜಿಲ್ಲೆಯ ಜನರ ಕಲ್ಯಾಣಕ್ಕಾಗಿ ಈ ಹಣ ಬಳಸಲು ಕೇಳಿದರು ಎಂದರು.

ಈ ವೇಳೆ ಅಧಿಕಾರಿಗಳಾದ ಡಾ.ಈಶ್ವರ ಭಾಗೋಜಿ, ವೆಂಕಟೇಶ, ಅಲಿಮ್ಕೊ ಕಂಪನಿಯ ಅಭಿಷೇಕಕುಮಾರ ಆನಂದ, ಶ್ರವಣದೋಷ ತಂತ್ರಜ್ಞ ಕಿಶನಕುಮಾರ, ಟೆಕ್ನಿಷಿಯನ್ ಸೋನುಕುಮಾರ ಅವರನ್ನು ಸನ್ಮಾನಿಸಲಾಯಿತು.

ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಎಸ್ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ರಿಷಿ ಆನಂದ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಕೃತಕ ಅಂಗಾಂಗ ತಯಾರಿಕೆ ಎಂಜಿನಿಯರ್ ಕರಣ ಮೊಹಾಂತಿ, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಜಗದೀಶ ಕೆಂಪಲಿಂಗಣ್ಣವರ, ಡಿಡಿಆರ್‌ಸಿ ಅಕೌಂಟೆಂಟ್ ಜಿ.ಎಂ.ದೇಶಪಾಂಡೆ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು. ಸುಭಾಶಚಂದ್ರ ಕನ್ನೂರ ನಿರೂಪಿಸಿ ವಂದಿಸಿದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!