ರೋಗದ ಲಕ್ಷಣ ಕಂಡುಕೊಳ್ಳುವುದು ಅಗತ್ಯ: ಶ್ರೀಪಾದ ವೈಕುಂಠೆ

KannadaprabhaNewsNetwork |  
Published : May 25, 2026, 02:30 AM IST
ಗದಗ ನಗರದ ಲಯನ್ಸ್ ಸಭಾಂಗಣದಲ್ಲಿ ಶನಿವಾರ ಲಿವರ್ ಫೈಬ್ರೊ ಸ್ಕ್ಯಾನಿಂಗ್ ಪರೀಕ್ಷಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಲಿವರ್ ಫೈಬ್ರೋಸ್ಕ್ಯಾನ್ ಪರೀಕ್ಷೆ ಯಕೃತ್ತಿನ ಆರೋಗ್ಯವನ್ನು ಸರಳ, ನೋವಿಲ್ಲದ ಉಪಕರಣದ ಮೂಲಕ ಪರೀಕ್ಷಿಸುವ ವಿಧಾನ.

ಗದಗ: ವಿವಿಧ ಪರೀಕ್ಷಾ ವಿಧಾನಗಳಿಂದ ರೋಗದ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಭಾವಸಾರ ವಿಜನ್ ಇಂಡಿಯಾ ಘಟಕದ ಅಧ್ಯಕ್ಷ ಶ್ರೀಪಾದ ವೈಕುಂಠೆ ತಿಳಿಸಿದರು.

ನಗರದ ಲಯನ್ಸ್ ಸಭಾಂಗಣದಲ್ಲಿ ಶನಿವಾರ ಭಾವಸಾರ ವಿಜನ್ ಇಂಡಿಯಾ ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಲಿವರ್ ಫೈಬ್ರೊ ಸ್ಕ್ಯಾನಿಂಗ್ ಪರೀಕ್ಷಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿವರ್ ಫೈಬ್ರೋಸ್ಕ್ಯಾನ್ ಪರೀಕ್ಷೆ ಯಕೃತ್ತಿನ ಆರೋಗ್ಯವನ್ನು ಸರಳ, ನೋವಿಲ್ಲದ ಉಪಕರಣದ ಮೂಲಕ ಪರೀಕ್ಷಿಸುವ ವಿಧಾನ. ಯಕೃತ್ತಿನ ಬಿಗಿತ ಮತ್ತು ಕೊಬ್ಬಿನ ಪ್ರಮಾಣವನ್ನು ಅಳೆದು, ಸೈರೋಸಿಸ್, ಫ್ಯಾಟಿ ಲಿವರ್, ಫೈಬ್ರೋಸಿಸ್ ಮುಂತಾದ ಸಮಸ್ಯೆಗಳ ಪ್ರಾರಂಭ ಹಂತದಲ್ಲೇ ಗುರುತಿಸುವ ಕ್ರಮವಾಗಿದೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೆರ್ಣೇಕರ ಮಾತನಾಡಿ, ಯಕೃತ್ತಿನ ಸಮಸ್ಯೆಯ ಅರಿವಿಲ್ಲದೆ ಸೈಡ್‑ ಎಫೆಕ್ಟ್‌ಗಳು ಅನೇಕ ವರ್ಷ ಮುಂದೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಶಿಬಿರಗಳಲ್ಲಿ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ಕ್ರಮ ಎಂದರು.

ಲಿವರ್ ಫೈಬ್ರೊ ಸ್ಕ್ಯಾನಿಂಗ್ ತಾಂತ್ರಿಕ ತಜ್ಞ ಉಮರ್‌ಫಾರೂಕ್ ಮುಲ್ಲಾ ಮಾತನಾಡಿ, ಲಿವರ್ ಫೈಬ್ರೊ ಸ್ಕ್ಯಾನಿಂಗ್ ಮಾಡಿಸುವುದರಿಂದ ಆಗುವ ಲಾಭಗಳನ್ನು ವಿವರಿಸಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಅಶ್ವಥ್ ಸುಲಾಖೆ, ರಮೇಶ ಶಿಗ್ಲಿ, ಡಾ. ಹರೀಶ್ ವೈಕುಂಠೆ, ಷಣ್ಮುಖ ಸುಲಾಖೆ, ವೀಣಾ ಸುಲಾಖೆ, ಗಣಪತರಾವ್ ಬೆಳಮಕರ, ಪರಶುರಾಮ ಮಹೇಂದ್ರಕರ, ತುಕಾರಾಮ ಬೇದ್ರೆ, ಪರಶುರಾಮ ನವಲೆ, ರಾಜೇಂದ್ರ ತ್ರಿಮಲ್ಲೆ, ನಾಗರಾಜ ವಾದೋನೆ, ಈರಣ್ಣ ಬೆಳಮಕರ, ರೇಣುಕಾಪ್ರಸಾದ ಹಿರೇಮಠ, ದತ್ತಣ್ಣ ಬೇವಿನಕಟ್ಟಿ, ಡಾ. ದತ್ತಾತ್ರೇಯ ವೈಕುಂಠೆ, ರವಿ ಶಿವಪ್ಪಗೌಡ್ರ, ಎಸ್.ಡಿ. ಪಾಟೀಲ, ಪ್ರವೀಣ ವಾರಕರ, ಮಂಜುನಾಥ ವೀರಲಿಂಗಯ್ಯನಮಠ, ಸತೀಶ್ ಹುಕ್ಕೇರಿ, ವಿಜಯ್ ಹುಬಳಿಮಠ, ಕೌಶಲ್ಯಬಾಯಿ ಸುಲಾಖೆ, ವಿಜಯಾ ನವಲೆ, ಅರ್ಚನಾ ಬೆಳಮಕರ, ಸುಜಾತಾ ಸುಲಾಖೆ, ಸಹನಾ ಹಿರೇಮಠ, ಪ್ರತಿಭಾ ಬೇವಿನಕಟ್ಟಿ, ಶಾರದಾ ಬೆಳಮಕರ, ಜಯಶ್ರೀ ತ್ರಿಮಲ್ಲೆ, ಅನುರಾಧಾ ವೈಕುಂಠೆ ಇದ್ದರು. ಶಿಬಿರದಲ್ಲಿ 100ಕ್ಕೂ ಹೆಚ್ಚು ಜನರನ್ನು ಉಚಿತವಾಗಿ ಪರೀಕ್ಷಿಸಿ ಸಲಹೆ ನೀಡಲಾಯಿತು. ಜೆ.ಡಿ. ಉತ್ತರಕರ ನಿರೂಪಿಸಿದರು. ಸುಧಾ ವೈಕುಂಠೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಣಮಟ್ಟದ ಶಿಕ್ಷಣವೇ ಸರ್ಕಾರಿ ಶಾಲೆಗಳ ಮೂಲ ಆಶಯ: ನಾಗೇಂದ್ರಪ್ಪ
ಆರೋಗ್ಯಪೂರ್ಣ ಜೀವನಕ್ಕೆ ಬ್ಲಡ್ಡು, ದುಡ್ಡು ಬೇಕು-ಶಿವಬಸವ ಶ್ರೀ