ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕರಿಮಣಿ ಸಿರಿಯಲ್ ಸಂತೆ ಕಾರ್ಯಕ್ರಮ ಕೊಳ್ಳೇಗಾಲದಲ್ಲಿ ನಡೆಯುತ್ತಿರುವುದು ಹೆಮ್ಮೆ ಎನಿಸಿದೆ. ಇದೊಂದು ಉತ್ತಮ ಕಾರ್ಯಕಮ, ಮೈಸೂರು, ಬೆಂಗಳೂರಿನಿಂತರ ದೊಡ್ಡ ದೊಡ್ಡ ನಗರ ಪ್ರದೇಶದಲ್ಲಿ ನಡೆಯುವ ಈ ಕಾರ್ಯಕ್ರಮ ಕೊಳ್ಳೇಗಾಲದಲ್ಲಿ ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ‘ನಮ್ಮೂರ ಕನ್ನಡ ಹಬ್ಬ’ ಕರಿಮಣಿ ಸೀರಿಯಲ್ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾವಿರಾರು ಪ್ರೇಕ್ಷಕರ ನಡುವೆ ತೆರೆದ ವೇದಿಕೆಯಲ್ಲಿ ಕಲರ್‌ಫುಲ್ ಆಗಿ ಈ ಕಾರ್ಯಕ್ರಮ ಅಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾನಂದ ಕೃಷ್ಣಸ್ವಾಮಿ ಅವರು ಈ ಕಾರ್ಯಕ್ರಮದ ರೂವಾರಿಗಳಾಗಿದ್ದಾರೆ. ಹೆಸರಿನಂತೆಯೇ ಎಲ್ಲರನ್ನು ಆನಂದವಾಗಿ ಇಡಲು ಕೊಳ್ಳೇಗಾಲದ ಜನರನ್ನು ಒಂದೆಡೆ ಸೇರಿಸಿದ್ದಾರೆ, ಅವರಿಗೆ ಶುಭವಾಗಲಿ ಎಂದರು.ಮುಡಿಗುಂಡ ವಿರಕ್ತ ಮಠದ ಶ್ರೀ ಕಂಠ ಸ್ವಾಮೀಜಿ ಮಾತನಾಡಿ, ಶಿಕ್ಷಣ, ಜ್ಞಾನ, ಕಲೆ, ಸಾಹಿತ್ಯ, ಸಂಸ್ಕೃತಿ, ಆದ್ಯಾತ್ಮ ಇವೆಲ್ಲವೂ ಮಾನವನನ್ನು ಪರಿಪೂರ್ಣನನ್ನಾಗಿಸುತ್ತದೆ, ಕೊಳ್ಳೇಗಾಲದಲ್ಲಿ ವಿಶೇಷವಾದ ನಮ್ಮೂರ ಕನ್ನಡ ಹಬ್ಬ ಶೀರ್ಷಿಕೆಯಡಿ ‘ಕರಿಮಣಿ ಸಿರಿಯಲ್ ಸಂತೆ’ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಆಯೋಜನೆಗೊಂಡಿದೆ ಎಂದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಚಾಲನೆ ನೀಡಿ ಮಾತನಾಡಿ, ಕನ್ನಡ ನಾಡಿನಲ್ಲಿ ಚಾಮರಾಜನಗರ ಜಿಲ್ಲೆ ವಿಶೇಷವಾದದ್ದು. ಇಲ್ಲಿನ ಪ್ರಕೃತಿ ಮತ್ತು ಕಾಡಿನ ಸೌಂದರ್ಯ ಮನಸೋರೆಗೊಳಿಸುತ್ತದೆ. ಕೊಳ್ಳೇಗಾಲದಲ್ಲಿ ಕನ್ನಡ ಹಬ್ಬ ಆಚರಣೆ ಯಶಸ್ವಿಯಾಗಿದೆ ಎಂದು ಹೇಳಿದರು.ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಕೊಳ್ಳೇಗಾಲದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಯಾವುದೇ ಕಾರ್ಯಕ್ರಮ ಆಚರಣೆ ಮಾಡಿದರೂ ಸಹ ಯಶಸ್ವಿಯಾಗಲಿದೆ ಎಂದರು.
ಜನಪದ ಕಲಾವಿದ ನರಸಿಂಹ ಮೂರ್ತಿ, ಕರಾಟೆ ಪಟು ಭವ್ಯ ಸೇರಿದಂತೆ ಅನೇಕರಿಗೆ ಸನ್ಮಾನಿಸಲಾಯಿತು.ನಗರಸಭೆ ಅಧ್ಯಕ್ಷೆ ರೇಖಾರಮೇಶ್, ಉಪಾಧ್ಯಕ್ಷ ಎ.ಪಿ. ಶಂಕರ್, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ದತ್ತೇಶ್ ಕುಮಾರ್, ಎಚ್.ಕೆ. ಟ್ಸಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಬೆಂಗಳೂರು ಡಿಸಿಆರ್‌ಇ ಡಿವೈಎಸ್ಪಿ ಎಚ್.ಕೆ.ಮಹಾನಂದ ಕೃಷ್ಣಸ್ವಾಮಿ ಹಾಗೂ ಮಹಾನಂದ ಕೃಷ್ಣಸ್ವಾಮಿ, ಪ್ರವೀಣ್, ಉಮಾಶಂಕರ್, ಹರ್ಷ, ಗಿರೀಶ್ ಇತರರಿದ್ದರು.