ಕನ್ನಡಪ್ರಭ ವಾರ್ತೆ ಆಳಂದ
ರಾಷ್ಟ್ರದ ಪ್ರಜೆಗಳ ಸಮಾನತೆಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.ಭಾನುವಾರ ಆಳಂದ ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಬಾ ಸಾಹೇಬರು ಜಗತ್ತು ಕಂಡ ಶ್ರೇಷ್ಠ ಚಿಂತಕರು. ಅಸ್ಪೃಶ್ಯತೆ, ಅಸಮಾನತೆ, ಅವೈಜ್ಞಾನಿಕ ಸಂಪ್ರದಾಯಗಳು ಕಿತ್ತೊಗೆದು ಬಡವರ, ದಿನ, ದಲಿತ, ನಿರ್ಗತಿಕ, ಶೋಷಿತರ ಧ್ವನಿಯಾಗಿದ್ದಾರೆ. ಅಂಬೇಡ್ಕರ್ ಆಶಯದಂತೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕಾಗಿದೆ. ಜಾತಿ, ಮತ, ಧರ್ಮ ಬೇಧ, ಭಾವ ಇಲ್ಲದೆ ಎಲ್ಲ ವರ್ಗದವರಿಗೂ ಸಮಾನ ಹಕ್ಕು ನೀಡಿ ವಿಶ್ವಕ್ಕೆ ಮಾದರಿಯಾದ ವ್ಯಕ್ತಿತ್ವ ಅಂಬೇಡ್ಕರ್ ಅವರದ್ದಾಗಿದೆ, ಅವರ ಚಿಂತನೆಗಳು ಎಂದೆಂದಿಗೂ ಸಮಾಜಕ್ಕೆ ಆದರ್ಶವಾಗಿವೆ ಎಂದರು.ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಂದಗೂಳೆ, ಬಿಜೆಪಿ ಹಿರಿಯ ಮುಖಂಡರಾದ ಸಂಜಯ್ ಮಿಸ್ಕಿನ್, ಅಶೋಕ್ ಗುತ್ತೇದಾರ್, ಮಹೇಶ ಸೂರೆ, ಸುಭಾಷï ಪಾಟೀಲ, ಹಣಮಂತ ಕಾಬಡೆ, ಪುರಸಭೆ ಸದಸ್ಯ ಶಿವಪುತ್ರ ನಡಿಗೇರಿ, ಎಸ್‍ಸಿ ಮೋರ್ಚಾ ಅಧ್ಯಕ್ಷ ರಾಜಕುಮಾರ ಘೋಳ, ಜಿಲ್ಲಾ ಎಸ್‍ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುನೀಲ ಹಿರೋಳಿಕರ, ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಶೇಗಜಿ, ಓಬಿಸಿ ಮೋರ್ಚಾ ಅಧ್ಯಕ್ಷ ಬಾಬುರಾವ್ ಸರಡಗಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಬಿರಾದಾರ, ನಗರ ಅಧ್ಯಕ್ಷ ಬಸವರಾಜ್ ಹತ್ತರಕಿ, ಶ್ರೀಶೈಲ್ ಖಜೂರಿ, ಸಿದ್ದು ಪೂಜಾರಿ, ಪ್ರಭಾಕರ್ ಘನಾತೆ, ಮೃತುಂಜಯ ಆಲೂರೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಪೊತದಾರ, ವಂದನಾ ಪೋತದಾರ್, ದಮಯಂತಿ ಪಾಟೀಲ್, ಲಕ್ಷ್ಮಣ ಬೀಳಗಿ ಪ್ರಕಾಶ್ ತೊಳೆ, ಸಿದ್ದು ಹಿರೋಳಿ, ಶ್ರೀಧರ್ ಸಾಲೇಗಾವ್, ದತ್ತಾ ಕೋಚಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಮಾನೆ, ಸೀತಾರಾಮ ಜಮಾದಾರ ಭಾಗವಹಿಸಿದ್ದರು.