ಮತ್ತೆ ಮೋದಿ ಪ್ರಧಾನಿ ಆಗಿದ್ದು ಭಾರತೀಯರ ದೌರ್ಭಾಗ್ಯ: ಡಿ.ಬಸವರಾಜ ಹೇಳಿಕೆ

KannadaprabhaNewsNetwork | Updated : Jun 11 2024, 01:39 AM IST

ಸಾರಾಂಶ

ಮುಸ್ಲಿಂ ತುಷ್ಟೀಕರಣ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ನ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿದ್ದು ಭಾರತೀಯರ ದೌರ್ಭಾಗ್ಯ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಹೇಳಿದ್ದಾರೆ.

- ಬಿಜೆಪಿಗೆ ನಾಯ್ಡು, ನಿತೀಶ್‌ ಸಖ್ಯ ಹೆಚ್ಚು ದಿನ ಇರದು - - - ದಾವಣಗೆರೆ: ಮುಸ್ಲಿಂ ತುಷ್ಟೀಕರಣ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ನ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿದ್ದು ಭಾರತೀಯರ ದೌರ್ಭಾಗ್ಯ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಹೇಳಿದ್ದಾರೆ.

400ಕ್ಕೂ ಅಧಿಕ ಕ್ಷೇತ್ರ ಗೆಲ್ಲುವುದಾಗಿ ಹೇಳುತ್ತಿದ್ದ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ದೇಶದ ಜನತೆ ಸಂಪೂರ್ಣ ತಿರಸ್ಕರಿಸಿದ್ದಾರೆ. ಆದರೆ, ಚಂದ್ರಬಾಬು ನಾಯ್ಡು, ನಿತೀಶ ಕುಮಾರ ಬೆಂಬಲದಿಂದ ಮತ್ತೆ ಪ್ರಧಾನಿಯಾಗಿದ್ದಾರೆ. ಮೋದಿಗೆ ನೀಡಿದ ಬೆಂಬಲವನ್ನು ನಾಯ್ಡು, ನಿತೀಶ್ ಹಿಂಪಡೆದ ಕ್ಷಣವೇ ಕೇಂದ್ರ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಬ್ಲಾಕ್‌ಮೇಲ್‌ ಮಾಡಿದರೂ ಅಚ್ಚರಿಯಿಲ್ಲ:

ಮುಸ್ಲಿಮರಿಗೆ ಶೇ.4 ಮೀಸಲಾತಿ ಮುಂದುವರಿಸುವ ಹೇಳಿಕೆ ಟಿಡಿಪಿ ನೀಡಿದೆ. ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಹಿಂದು-ಮುಸ್ಲಿಂ ಎಂಬುದಾಗಿ ಜನರನ್ನು ವಿಭಜಿಸುವ ಭಾಷಣ ಮಾಡುವ ಮೋದಿ ಜೊತೆಗೆ ಕೈ ಜೋಡಿಸಿದ ನಿತೀಶ್, ನಾಯ್ಡು ಬೆಂಬಲ ತಾತ್ಕಾಲಿಕ. ಮೋದಿ ಸರ್ಕಾರಕ್ಕೆ ಸ್ಥಿರತೆಯಂತೂ ಇಲ್ಲ. ಇದೊಂದು ಕಿಚಡಿ ಸರ್ಕಾರವಾಗಿದೆ. ತಮಗೆ ಬೆಂಬಲಿಸಿದ ಪಕ್ಷಗಳನ್ನೇ ಮೋದಿ ಬ್ಲಾಕ್ ಮೇಲ್ ಮಾಡಿದರೂ ಅಚ್ಚರಿ ಇಲ್ಲ ಎಂದಿದ್ದಾರೆ.

ರಾಹುಲ್‌ ಗಾಂಧಿ ಜನಪ್ರಿಯತೆ ಸಾಬೀತು:

ಕಳೆದ ಚುನಾವಣೆಯಲ್ಲಿ 4.5 ಲಕ್ಷ ಮತಗಳ ಗೆಲುವು ಸಾಧಿಸಿದ್ದ ನರೇಂದ್ರ ಮೋದಿ ಈ ಸಲ 1.5 ಲಕ್ಷ ಮತಗಳ ಪ್ರಯಾಸದ ಗೆಲುವು ಕಂಡಿದ್ದಾರೆ. ಇದರಿಂದ ಮೋದಿಗೆ ಮುಖಭಂಗವಾಗಿದೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ವಯನಾಡು, ರಾಯಬರೇಲಿ ಎರಡೂ ಕ್ಷೇತ್ರದಲ್ಲೂ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದು, ತಮ್ಮ ಜನಪ್ರಿಯತೆ ಏನೆಂಬುದನ್ನು ತೋರಿಸಿದ್ದಾರೆ. ದೇಶ ಜನರು ಮೋದಿಗಿಂತ ರಾಹುಲ್ ಮೇಲೆ ಹೆಚ್ಚು ಭರವಸೆ ಹೊಂದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

- - -

-9ಕೆಡಿವಿಜಿ10: ಡಿ.ಬಸವರಾಜ

Share this article