ಕಾರಾಗೃಹಗಳು ಪಾಪದ ಕೇಂದ್ರಗಳಲ್ಲ: ಪದ್ಮಕಾಶಿ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ರಾಮನಗರ: ಕಾರಾಗೃಹಗಳು ಪಾಪದ ಕೇಂದ್ರಗಳಲ್ಲ, ಪುನರ್ವಸತಿ ಕೇಂದ್ರಗಳು ಎಂದು ಮನಶಾಸ್ತ್ರಜ್ಞೆ ಡಾ. ಪದ್ಮಕಾಶಿ ಲೋಕೇಶ್ ತಿಳಿಸಿದರು.

ರಾಮನಗರ: ಕಾರಾಗೃಹಗಳು ಪಾಪದ ಕೇಂದ್ರಗಳಲ್ಲ, ಪುನರ್ವಸತಿ ಕೇಂದ್ರಗಳು ಎಂದು ಮನಶಾಸ್ತ್ರಜ್ಞೆ ಡಾ. ಪದ್ಮಕಾಶಿ ಲೋಕೇಶ್ ತಿಳಿಸಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ರಾಮನಗರದ ರೋಟರಿ ಕ್ಲಬ್ ಆಯೋಜಿಸಿದ್ದ ಕೈದಿಗಳಿಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರಾಗೃಹದಲ್ಲಿರುವ ಪ್ರತಿಯೊಬ್ಬರು ಇಲ್ಲಿ ಯಾವುದೋ ಒಂದು ಒತ್ತಡ, ಮಾನಸಿಕ ತುಮುಲದ ಪರಿಣಾಮ ತಪ್ಪೆಸಗಿ ಇಲ್ಲಿಗೆ ಬಂದವರಾಗಿದ್ದಾರೆ. ಕಾಯಿಲೆ ಬಂದಾಗ ಮಾತ್ರೆ ತೆಗೆದುಕೊಂಡಾಗ ದೇಹದ ಕಾಯಿಲೆ ವಾಸಿಯಾಗುತ್ತದೆ. ಅದೇ ರೀತಿ ಇಲ್ಲಿರುವ ಅನಿವಾಸಿಗಳಿಗೆ ಮಾನಸಿಕವಾಗಿ ಸ್ಥೈರ್ಯ ತುಂಬುವ ಕಾರ್ಯ ಆಗಬೇಕು ಎಂದರು.

ಮನೋಚಿಕಿತ್ಸಕ ಡಾ. ಚೇತನ್ ಮಾತನಾಡಿ, ನೀವು ನಿಮ್ಮ ಖಿನ್ನತೆಯಿಂದ ಹೊರಬಂದು ನಿಮ್ಮನ್ನು ನೀವು ಎಷ್ಟು ಬದಲಾಗಿದ್ದೀರ ಎಂದು ಮೌಲ್ಯಮಾಪನ ಮಾಡಿಕೊಳ್ಳಿ, ನೀವು ಇಲ್ಲಿರುವವರೆಗೂ ನಿಮ್ಮ ಸೃಜನಾತ್ಮಕ ಬದಲಾವಣೆ ಹಾಗೂ ಆತ್ಮಾವಲೋಕನ ಮಾಡಿಕೊಂಡು ಉತ್ತಮ ಚಿಂತನೆ ಬೆಳೆಸಿಕೊಂಡು ಬದಲಾಗಬೇಕು. ಕಾರಾಗೃಹದಿಂದ ಹೊರಹೋದಾಗ ನಿಮ್ಮ ಕೀಳರಿಮೆ ಮರೆತು ಬೇರೆಯವರಂತೆ ಆತ್ಮಸ್ಥೈರ್ಯದಿಂದ ಬದುಕುವುದನ್ನು ಕಲಿಯಿರಿ ಎಂದು ಕಿವಿ ಮಾತು ಹೇಳಿದರು.

ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಸ್. ಕಾಂತರಾಜು ಮಾತನಾಡಿ ಯಾರೂ ಹುಟ್ಟಿನಿಂದ ಅಪರಾಧಿಗಳಾಗಿರುವುದಿಲ್ಲ, ಯಾವುದೋ ಸಮಯ, ಸಂದರ್ಭದಲ್ಲಿ ತಿಳಿದೋ, ತಿಳಿಯದೆಯೋ ತಪ್ಪುಗಳಾಗಿರುತ್ತವೆ. ಹಾಗಂತ ಆ ತಪ್ಪುಗಳನ್ನು ನೆನೆದು ಕೊರಗುವುದಕ್ಕಿಂತ, ಸದರಿ ತಪ್ಪುಗಳನ್ನು ಸರಿಪಡಿಸಿಕೊಂಡು ಸತ್ಪ್ರಜೆಗಳಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಜಯಕುಮಾರ್, ನಿರ್ದೇಶಕರಾದ ಪ್ರಕಾಶ್, ಚಾಮರಾಜ್, ಶಿವಕುಮಾರ್, ಎಲ್. ಚಂದ್ರಶೇಖರ್, ಎಂ.ಕೆ. ಮರಿಸ್ವಾಮಿ, ಸಿ.ಕೆ. ನಾಗರಾಜು, ಅಲ್ತಾಪ್ ಅಹಮದ್, ಚಂದ್ರಶೇಖರ್, ವಿಜಯ್ ಕುಮಾರ್, ಜೈಲರ್ ರಾಕೇಶ್ ಕಾಂಬ್ಳೆ ಇದ್ದರು.4ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ರಾಮನಗರದ ರೋಟರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಕೈದಿಗಳಿಗೆ ಅರಿವು ಕಾರ್ಯಕ್ರಮವನ್ನು ಡಾ. ಪದ್ಮಕಾಶಿ ಲೋಕೇಶ್ ಉದ್ಘಾಟಿಸಿದರು.

Share this article