ಸಂತ್ರಸ್ತರ ಅಹವಾಲು ಆಲಿಸಿದ ಸರ್ವೋತ್ತಮ ಜಾರಕಿಹೊಳಿ

KannadaprabhaNewsNetwork |  
Published : Jul 30, 2024, 01:32 AM IST
ಗೋಕಾಕ ತಾಲೂಕಿನ ಮೆಳವಂಕಿ ಗ್ರಾಮದ ಪ್ರವಾಹ ಪೀಡಿತರು ವಾಸವಾಗಿರುವ ಕಾಳಜಿ ಕೇಂದ್ರದಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭೇಟಿ ನೀಡಿ ನೆರೆ ಸಂತ್ರಸ್ತರ ಯೋಗ ಕ್ಷೇಮ ಕೇಳಿ ಚರ್ಚೆ ನಡೆಸುತ್ತಿರುವುದು. | Kannada Prabha

ಸಾರಾಂಶ

ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಭೇಟಿ ನೀಡಿ ನೆರೆ ಸಂತ್ರಸ್ತರ ಯೋಗ ಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಭೇಟಿ ನೀಡಿ ನೆರೆ ಸಂತ್ರಸ್ತರ ಯೋಗ ಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದರು.

ನದಿ ತೀರದ ಸಂತ್ರಸ್ತರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ. ತಾವು ಧೈರ್ಯದಿಂದ ಇರಿ. ಸದಾ ನಾವು ನಿಮ್ಮೊಂದಿಗಿದ್ದೇವೆ. ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಘಟಪ್ರಭ ನದಿ ತೀರದ ನೆರೆ ಸಂತ್ರಸ್ತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಹೊಂದಿದ್ದಾರೆ. ಪ್ರವಾಹ ಪೀಡಿತ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಸಂತ್ರಸ್ತರಿಗೆ ಬೇಕಾಗುವ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುತ್ತದೆ. ತಾಲೂಕಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೆರೆ ಸಂತ್ರಸ್ತರಿಗೆ ಅನುಕೂಲವಾಗಲು ಅವರನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ನಮ್ಮ ಎನ್.ಎಸ್.ಎಫ್.ತಂಡ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸರ್ವೋತ್ತಮ ಜಾರಕಿಹೊಳಿ ಅವರು ಮೂಡಲಗಿ ತಾಲೂಕಿನ ಅಡಿಬಟ್ಟಿ ಜಾಕವೆಲ್, ಮೆಳವಂಕಿಯ ಗೌಡನ್‌ ಕ್ರಾಸ್, ಸದಾಶಿವ ನಗರದ ಕಾಳಜಿ ಕೇಂದ್ರ, ಹಡಗಿನಾಳ, ಉದಗಟ್ಟಿ, ಗ್ರಾಮಗಳ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ತಪಸಿ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ಹಾಸಿಗೆ-ಹೊದಿಕೆ ವಿತರಿಸಿದರು.

ಪ್ರಮುಖರಾದ ಸಿದ್ದಪ್ಪ ಹಂಜಿ, ಮುತ್ತೆನಗೌಡ ಪಾಟೀಲ, ಅಲ್ಲಪ್ಪ ಕಂಕಣವಾಡಿ, ದೊಡ್ಡಪ್ಪ ಕರೆಪ್ಪನವರ, ಅಡಿವೆಪ್ಪ ಗೌಳಿ, ವಿಠ್ಠಲ ಆಡಿನ, ಪ್ರಕಾಶ ಕಾಮೆವಾಡಿ, ಮಲ್ಲಪ್ಪ ಕಲ್ಲೋಳಿ, ಸಣ್ಣ ಮುತ್ತನಗೌಡ ಪಾಟೀಲ, ಸಿದ್ದಪ್ಪ ಪೂಜೇರಿ, ಭೀಮಪ್ಪ ಚಿಪ್ಪಲಕಟ್ಟಿ, ನಿಂಗಪ್ಪ ಶಿಂತ್ರಿ, ಮಲ್ಲಿಕಾರ್ಜುನ ಶಿಂತ್ರಿ, ಬಾಳಪ್ಪ ಮೆಳವಂಕಿ, ಮಾರುತಿ ನಾಯಿಕ, ಕಸ್ತೂರಿ ಚಿಗಡೊಳ್ಳಿ, ಅಡಿವೆಪ್ಪ ಹಂಜಿ, ಉಸ್ತುವಾರಿ ಅಧಿಕಾರಿಗಳು, ಗ್ರಾಪಂ ಸದಸ್ಯರು, ಪಿಡಿಒಗಳು, ಗ್ರಾಮ ಆಡಳಿತ ಅಧಿಕಾರಿಗಳು, ಎಸ್.ಡಿಎಂಸಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ