ಚನ್ನರಾಯ ಪಟ್ಟಣ: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮುಖಂಡರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೇಯಸ್ ಎಂ. ಪಟೇಲ್ ಅವರ ಸಮ್ಮುಖದಲ್ಲಿ ತಮ್ಮ ನಿವಾಸದಲ್ಲಿ ಚನ್ನರಾಯಪಟ್ಟಣದ ಜೆಡಿಎಸ್ ಮುಖಂಡರಾದ ಸುಹಿಲ್ ಪಾಶ, ತೌಫಿಕ್ ಪಾಷಾ, ಚಾಂದ್ ಪಾಷಾ, ಹೊಳೆನರಸೀಪುರ ಪಟ್ಟಣದ ಜೆಡಿಎಸ್ ಪ್ರಭಾವಿ ನಾಯಕರಾದ ಹಸ್ರತ್ ಹುಸೇನ್, ನಾಜಿಮ್ ಪಾಷಾ, ರೆಹಮತ್ ಉಲ್ಲಾ ಶರೀಫ್, ಸೈಫುಲ್ಲಾ, ಅಜಿಬ್ ಹುಸೇನ್, ಹಳೆಕೋಟೆ ಹೋಬಳಿ ಕೋಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮುಖಂಡರಾದ ಕುಂಕುಮದ ಹೊಸೂರು ಗ್ರಾಮದ ಸದಾಶಿವ, ಅಗ್ರಹಾರ ಚೋಳೇನಹಳ್ಳಿಗ್ರಾಮದ ಪ್ರವೀಣ್, ಗ್ರಾಮ ಪಂಚಾಯತಿ ಸದಸ್ಯರಾದ ಮಾರ ಶೆಟ್ಟಿಹಳ್ಳಿ ಗ್ರಾಮದ ರವಿ, ಹಡವನಹಳ್ಳಿ ಗ್ರಾಮದ ನಂಜುಂಡ, ಸೇರಿದಂತೆ ನೂರಾರು ಮಂದಿ ಕಾಂಗ್ರೆಸ್ ಸೇರ್ಪಡೆಯಾದರು.
ಸೇರ್ಪಡೆಯಾದವರನ್ನು ಶ್ರೇಯಸ್ ಪಟೇಲ್ ಅವರು ಸನ್ಮಾನಿಸಿ ಗೌರವಿಸಿ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡು
ಬಳಿಕ ಮಾತನಾಡಿದ ಶ್ರೇಯಸ್, ಕಾಂಗ್ರೆಸ್ ಪಕ್ಷದ ಅಭಿವೃದ್ಧಿ, ನಿಷ್ಠೆಯನ್ನು ನಂಬಿ ಜಿಲ್ಲೆಯ ಹಲವಾರು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಉತ್ತಮರಿಗೆ ಮತದಾನ ಮಾಡುವ ಮುಖಾಂತರ ಹಾಸನದ ಶ್ರೇಯಸ್ಸಿಗೆ ಹಾಗೂ ಅಭಿವೃದ್ಧಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಟಿ. ಲಕ್ಷ್ಮಣ, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು, ಮುಖಂಡರಾದ ವಡ್ಡರಹಳ್ಳಿ ಲಿಂಗರಾಜು, ಚೊಳೇನಹಳ್ಳಿ ಸತೀಶ್, ಅರುಣ್, ಹಿಮಾಯತ ಹುಸೇನ್, ಮುಬಾರಕ್, ಫೈರೋಜ್ ಷರೀಫ್, ಮೀರ್ ಬಾಬರ್ ಅಲಿ, ಅಲಿ ಅಬಾಸ್, ಮುಜಾಹಿದ್ ಖಾನ್ ಇತರ ಮುಖಂಡರು ಹಾಜರಿದ್ದರು.
ಶ್ರೇಯಸ್ ಪಟೇಲ್ ಸಮ್ಮುಖದಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.