- ಕಾರಿಗನೂರಲ್ಲಿ 24ನೇ ಪುಣ್ಯಸ್ಮರಣೋತ್ಸವದಲ್ಲಿ ಶ್ರೀ ಬಸವ ಜಯಚಂದ್ರ ಸ್ವಾಮೀಜಿ ಶ್ಲಾಘನೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ದಕ್ಷ ಆಡಳಿತ ನಡೆಸಿ, ರಾಜ್ಯದ ಜನರ ಕಣ್ಮಣಿ ಎನಿಸಿದವರು ಜೆ.ಎಚ್. ಪಟೇಲರು. ಆಡಳಿತದಲ್ಲಿ ಜೆ.ಎಚ್.ಪಟೇಲರು ಬೆಳಕಿನ ರೀತಿ ಪ್ರಜ್ವಲಿಸಿದವವರು. ಈ ಕಾರ್ತಿಕ ಮಾಸದ ಸಂದರ್ಭದಲ್ಲಿ ಅವರ ಪುಣ್ಯಸ್ಮರಣೆ ಬಂದಿರುವುದು ಬೆಳಕಿನ ಸಂಕೇತವಾಗಿದೆ ಎಂದು ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು ನುಡಿದರು.ತಾಲೂಕಿನ ಕಾರಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ 24ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜೆ.ಎಚ್. ಪಟೇಲ್ ಅವರ ರಾಜಕಾರಣದ ಜೀವನದಲ್ಲಿ ಪ್ರಥಮ ಬಾರಿಗೆ 1967ರಲ್ಲಿ ಸಂಸದರಾದ ಸಂದರ್ಭ ಆಗ ನಡೆಯುತ್ತಿದ್ದ ಲೋಕಸಭಾ ಕಲಾಪದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿಯೇ ಕಲಾಪಗಳು ನಡೆಯುತ್ತಿದ್ದವು. ಆ ಸಂದರ್ಭವನ್ನು ಗಮನಿಸಿದ ಜೆ.ಎಚ್.ಪಟೇಲರು ಭಾರತದಲ್ಲಿ ಹಲವಾರು ರಾಜ್ಯಗಳಿವೆ. ಆಯಾ ರಾಜ್ಯಗಳ ಭಾಷೆಗಳೂ ಬೇರೆ, ಬೇರೆಯಾಗಿವೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಲಾಪ ನಡೆಯುವುದು ಕೆಲವೇ ರಾಜ್ಯದ ಸಂಸದರಿಗೆ ತಿಳಿಯುತ್ತಿತ್ತು. ಇದನ್ನು ಗಮನಿಸಿದ ಪಟೇಲರು ಲೋಕಸಭೆಗೆ ಪ್ರತಿನಿಧಿಸುವ ಎಲ್ಲ ರಾಜ್ಯಗಳ ಸಂಸದರೂ, ಆಯಾ ರಾಜ್ಯಗಳ ಭಾಷೆಗಳಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸುವಂತೆ ಮಾಡಬೇಕು, ಇದಕ್ಕಾಗಿ ಭಾಷಾ ತರ್ಜುಮೆ ತಜ್ಞರನ್ನು ನೇಮಕ ಮಾಡಬೇಕು ಎಂಬ ವಿಚಾರ ಮಂಡಿಸಿದ್ದರು ಎಂದರು.ಈ ವಿಚಾರ ಗಂಭೀರವಾಗಿ ತೆಗೆದುಕೊಂಡ ಆಗಿನ ಕೇಂದ್ರ ಸರ್ಕಾರ ಪಟೇಲರ ಸಲಹೆ ಒಪ್ಪಿಕೊಂಡು, ಅನುಮೋದನೆ ನೀಡಿತು. ಪರಿಣಾಮ ಈಗ ಕೂಡ ದೇಶದ ಎಲ್ಲ ರಾಜ್ಯಗಳ ಸಂಸದರು ಅವರವರ ರಾಜ್ಯಗಳ ಭಾಷೆಗಳಲ್ಲಿಯೇ ವಿಚಾರ ಮಂಡಿಸುವ ಅವಕಾಶ ದೊರಕಿದೆ. ಇದು ಜೆ.ಎಚ್.ಪಟೇಲರಲ್ಲಿದ್ದ ಭಾಷಾಭಿಮಾನ, ದೇಶಾಭಿಮಾನ ತೋರುತ್ತದೆ ಎಂದರು.
ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಜೆ.ಎಚ್.ಪಟೇಲರು ಚನ್ನಗಿರಿ ತಾಲೂಕಿನ ಮಿನುಗುವ ನಕ್ಷತ್ರದಂತಿದ್ದರು. ತಾಲೂಕಿನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ಪ್ರಸ್ತುತ ಗಿ ಸೂಳೆಕೆರೆಯು ಬತ್ತದಂತೆ ಸದಾ ನೀರು ತುಂಬಿರುವಂತೆ ಮಾಡುವಲ್ಲಿ ಭದ್ರಾ ನಾಲೆಯಿಂದ ಬಿಡುಗಂಡಿಯನ್ನು ಮಾಡಿಸಿ, ನೀರುಹರಿಸಿದ್ದರು. ಆ ಮೂಲಕ ಸೂಳೆಕೆರೆಗೆ ಜೀವತುಂಬಿದ್ದರು. ಈ ಸಾಧನೆ ತಾಲೂಕಿನ ಜನತೆ ಮರೆಯುವಂತಿಲ್ಲ ಎಂದರು.ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಪರಿಸರ ತಜ್ಞ ಮಾಧವನ್, ನೈಸರ್ಗಿಕ ಕೃಷಿಕ ಚಂದ್ರಶೇಖರ್ ನಾರಾಣಪುರ, ಶ್ರೀ ರಾಘವ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ಜಿಪಂ ಮಾಜಿ ಸದಸ್ಯ ತೇಜಸ್ವಿ ವಿ. ಪಟೇಲ್, ತ್ರಿಶೂಲ್ ಪಾಣಿ ಪಟೇಲ್, ಜೆ.ಎಚ್. ಪಟೇಲ್ ಪ್ರತಿಷ್ಠಾನದ ಧರ್ಮದರ್ಶಿಗಳಾದ ಟಿ.ಪ್ರಭಾಕರ್, ಟಿ.ಜೆ.ಪಟೇಲ್ ಭಾಗವಹಿಸಿದ್ದರು.
- - -ಕೋಟ್ ಜೆ.ಎಚ್.ಪಟೇಲ್ ಆಡಳಿತದಲ್ಲಿ ಎಂದೂ ಕುಟುಂಬ ರಾಜಕಾರಣ ಮಾಡದೇ, ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುತ್ತಿದ್ದರು. ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಏಳು ಹೊಸ ಜಿಲ್ಲೆಗಳನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ
- ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಹಿರೇಮಠ, ಚನ್ನಗಿರಿ- - - -12ಕೆಸಿಎನ್‌ಜಿ3.ಜೆಪಿಜಿ:
ಕಾರಿಗನೂರಿನಲ್ಲಿ ಮಾಜಿ ಸಿಎಂ ಜೆ.ಎಚ್.ಪಟೇಲ್ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಹಾಲಸ್ವಾಮಿ ವಿರಕ್ತ ಮಠದ ಶ್ರೀಗಳು ಉದ್ಘಾಟಿಸಿದರು. ಹಿರೇಮಠದ ಶ್ರೀಗಳು, ಗಣ್ಯರು ಇದ್ದರು.