ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪತ್ರಕರ್ತರು ವ್ಯಕ್ತಿ ಮತ್ತು ಪಕ್ಷಕ್ಕೆ ಸೀಮಿತವಾಗಿರದೆ, ಪ್ರಾಮಾಣಿಕವಾಗಿ ಸಮಾಜದ ಒಳತಿಗಾಗಿ ವರದಿ ಮಾಡಬೇಕು. ಸಮಾಜದಲ್ಲಿನ ಕುಂದು ಕೊರತೆ ಎತ್ತಿ ತೋರಿಸುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾದುದು. ಯಾರಿಗೂ ಹೆದರದೆ, ನಿರ್ಭೀತಿಯಿಂದ ವಸ್ತುನಿಷ್ಠ ವರದಿ ಮಾಡಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.ಸ್ಥಳೀಯ ಪುರಸಭೆ ಸಭಾಭವನದಲ್ಲಿ ಭಾನುವಾರ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಘಟಕ ಮಹಾಲಿಂಗಪುರ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಜಿಲ್ಲಾ ಕಾನಿಪ ಸಂಘದ ಅಧ್ಯಕ್ಷ ಆನಂದ ದಲಭಂಜನ್ ಮಾತನಾಡಿ, ಸಾಮಾಜಿಕ ಜಾಲತಾಣ ಹೆಚ್ಚಾದಂತೆ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾದರೂ ಕೂಡ ಪತ್ರಿಕೆಗಳು ಅವುಗಳ ಪ್ರಾಮುಖ್ಯತೆ ಕಳೆದುಕೊಂಡಿಲ್ಲ. ನಾಲ್ಕು ಅಂಗಗಳಲ್ಲಿ ಪತ್ರಿಕಾ ರಂಗವೂ ಕೂಡ ಕಾರ್ಯನಿರ್ವಹಿಸುತ್ತಿದೆ ಎಂದರು.ನಂತರ ಹಿರಿಯ ಪತ್ರಕರ್ತ ಡಿ.ಬಿ. ಬಿಸ್ವಾಗರ, ಕಾನಿಪ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಪತ್ರಕರ್ತರಾದ ಶಿವಲಿಂಗ ಸಿದ್ನಾಳ, ಜಯರಾಮ್ ಶೆಟ್ಟಿ, ಅತಿಥಿ ಕವಿತಾ ಕೊಣ್ಣೂರ ಮಾತನಾಡಿದರು. ಹಿರಿಯ ಪತ್ರಕರ್ತರಿಗೆ ಮತ್ತು ಅತಿಥಿಗಳಿಗೆ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಜಿಲ್ಲಾ ಕಾನಿಪ ಸಂಘದ ಸದಸ್ಯ ಎಸ್.ಎಸ್. ಈಶ್ವರಪ್ಪಗೋಳ, ಸ್ಥಳಿಯ ಕಾನಿಪ ಸಂಘದ ಕಾರ್ಯದರ್ಶಿ ಹನುಮಂತ ನಾವಿ, ಪುರಸಭೆ ಮುಖ್ಯಾಧಿಕಾರಿ ಎನ್.ಎ. ಲಮಾಣಿ, ಸದಸ್ಯರಾದ ರವಿ ಜವಳಗಿ, ಚನ್ನಬಸು ಯರಗಟ್ಟಿ, ಹಿರಿಯರಾದ ಮಲ್ಲಿಕಾರ್ಜುನ ಹೆಗ್ಗಳಗಿ, ಸಂಗಪ್ಪ ಹಲ್ಲಿ, ಮಹಾಲಿಂಗಪ್ಪ ಅವರಾದಿ, ಜಿ.ಎಸ್. ಗೊಂಬಿ, ಎಂ.ಐ. ಡಾಂಗೆ, ಈರಣ್ಣ ಹಲಗತ್ತಿ, ಶಿವಲಿಂಗ ಟಿರಕಿ, ಮಹಾದೇವ ಮಾರಾಪೂರ, ಸಿದ್ದು ಶಿರೋಳ, ಬಸವರಾಜ ಮೇಟಿ, ಗಂಗಾಧರ ಮೇಟಿ, ನಿಂಗಪ್ಪ ಬಾಳಿಕಾಯಿ, ಚನ್ನಬಸು ಹುರಕಡ್ಲಿ, ವಿಜಯ ಸಬಕಾಳೆ, ರಾಜು ತೇರದಾಳ, ರಫೀಕ್ ಮಾಲದಾರ, ಬಿಜೆಪಿ ನಗರ ಘಟಕ ಅಧ್ಯಕ್ಷ ಶಂಕರಗೌಡ ಪಾಟೀಲ, ಚೆನ್ನಪ್ಪ ಪಟ್ಟಣಶೆಟ್ಟಿ, ಬಸವರಾಜ ಹುಕ್ಕೇರಿ, ಮಹಾಲಿಂಗ ಮಾಳಿ, ಪ್ರವೀಣಗೌಡ ಪಾಟೀಲ, ಸಂಗಪ್ಪ ಅಮಾತಿ, ಮಹೇಶ ಜಿಡ್ಡಿಮನಿ, ಬಸು ಮಡಿವಾಳ, ರಾಮು ಪಾತ್ರೋಟ, ಮಹಾಂತೇಶ ಪಾತ್ರೋಟ, ಚಿದಾನಂದ ಮಠಪತಿ, ಎಂ ಕೆ ದಳವಾಯಿ, ರವಿ ಹಲಸಪ್ಪಗೊಳ, ಕಾಂತು ಹಡಪದ, ರಾಮು ಮಾಂಗ, ರಾಘು ಮಾಳಗಿ, ಚೇತನ ಬಂಡಿವಡ್ಡರ, ನಂದೇಶ ಲಾತೂರ,ಅನಿಲ ಖವಾಸಿ, ಶಿವು ಸಣ್ಣಕ್ಕಿ,ಸೇರಿದಂತೆ ಅನೇಕ ಪತ್ರಕರ್ತರು, ಮುಖಂಡರು, ನಾಗರಿಕರು ಉಪಸ್ಥಿತರಿದ್ದರು. ಪತ್ರಕರ್ತ ಚಂದ್ರಶೇಖರ ಮೋರೆ ನಿರೂಪಿಸಿದರು. ಮಹಾಲಕ್ಷ್ಮೀ ಗುಳದಳ್ಳಿ ಮತ್ತು ವರ್ಷಿಣಿ ಸಗರಿ ಪ್ರಾರ್ಥಿಸಿದರು. ಪತ್ರಕರ್ತ ಲಕ್ಷಣ ಕಿಶೋರಿ ಸ್ವಾಗತಿಸಿದರು. ಪತ್ರಕರ್ತ ನಾರನಗೌಡ ಉತ್ತಂಗಿ ವಂದಿಸಿದರು.