ಕಾರ್ಯ ಮರೆತ ಪತ್ರಕರ್ತರಿಂದ ಸಮಾಜಕ್ಕೆ ಅಪಾಯ

KannadaprabhaNewsNetwork |  
Published : Aug 07, 2024, 01:02 AM IST
ಚಿತ್ತಾಪುರ ತಾಲೂಕು ಪಂಚಾಯತ ಸಭಾಂಗಣದಲ್ಲಿ ತಾಲೂಕು ಪರ್ತಕರ್ತರ ದಿನಾಚರಣೆ ಕಾರ್ಯಕ್ರಮವನ್ನು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಉದ್ಘಾಟಿಸಿದರು. | Kannada Prabha

ಸಾರಾಂಶ

ಬಂಡವಾಳ ಶಾಹಿ ವ್ಯವಸ್ಥೆ ನಿರ್ನಾಮವಾಗಿ ಸಮಾಜವಾದದ ಅನಿವಾರ್ಯತೆಯಿದೆ. ಆಳುವ ಪಕ್ಷ ಮಳೆ ಬರುತ್ತಿದೆ ಎನ್ನುತ್ತಿದೆ, ವಿರೋಧ ಪಕ್ಷ ಮಳೆ ಬರುತ್ತಿಲ್ಲ ಎನ್ನುತ್ತಿದೆ. ಈ ಹೇಳಿಕೆಯ ಸತ್ಯ ಬಿಚ್ಚಿಡಬೇಕಾದ ಪತ್ರಕರ್ತರು ಕಿಡಿಕಿಯನ್ನು ತೆಗೆದು ನೋಡಿ ಸತ್ಯದಿಂದ ಕೂಡಿದ ವರದಿಯನ್ನು ಪ್ರಕಟಿಸಬೇಕು ಇದು ಪತ್ರಕರ್ತನ ಮುಖ್ಯ ಜವಾಬ್ದಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ವರದಿಗಾರರಲ್ಲಿ ಕಾರ್ಯನಿರತ ಪತ್ರಕರ್ತರು ಮತ್ತು ಕಾರ್ಯಮರೆತ ಪತ್ರಕರ್ತರು ಎಂಬ ಎರಡು ಭಾಗಗಳಿದ್ದು ಕಾರ್ಯ ಮರೆತ ಪತ್ರಕರ್ತರು ದೇಶಕ್ಕೆ ಅಪಾಯಕಾರಿ ಎಂದು ಲೇಖಕ, ಪ್ರಗತಿಪರ ಚಿಂತಕ ಶಿವಸುಂದರ ಬೆಂಗಳೂರು ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಭಗತ್ ಸಿಂಗ್, ನೇತಾಜಿ, ಕಮ್ಯುನಿಸ್ಟ್ ಹೋರಾಟಗಾರರು ಕಂಡಿರುವ ಕನಸಿನ ಭಾರತ ಕಟ್ಟಬೇಕಾಗಿದೆ. ಬಂಡವಾಳ ಶಾಹಿ ವ್ಯವಸ್ಥೆ ನಿರ್ನಾಮವಾಗಿ ಸಮಾಜವಾದದ ಅನಿವಾರ್ಯತೆಯಿದೆ. ಆಳುವ ಪಕ್ಷ ಮಳೆ ಬರುತ್ತಿದೆ ಎನ್ನುತ್ತಿದೆ, ವಿರೋಧ ಪಕ್ಷ ಮಳೆ ಬರುತ್ತಿಲ್ಲ ಎನ್ನುತ್ತಿದೆ. ಈ ಹೇಳಿಕೆಯ ಸತ್ಯ ಬಿಚ್ಚಿಡಬೇಕಾದ ಪತ್ರಕರ್ತರು ಕಿಡಿಕಿಯನ್ನು ತೆಗೆದು ನೋಡಿ ಸತ್ಯದಿಂದ ಕೂಡಿದ ವರದಿಯನ್ನು ಪ್ರಕಟಿಸಬೇಕು ಇದು ಪತ್ರಕರ್ತನ ಮುಖ್ಯ ಜವಾಬ್ದಾರಿಯಾಗಿದೆ.

ಸ್ವಾತಂತ್ರ‍್ಯಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ಗುಂಪೊಂದು ಇತ್ತು. ಈಗ ಬಹುತೇಕ ಅವರೇ ದೇಶ ಆಳುತ್ತಿದೆ. ವಿರೋಧ ಪಕ್ಷದ ಮತ್ತು ಆಡಳಿತ ಪಕ್ಷದ ಹೇಳಿಕೆ ಬರೆದರೆ ಪತ್ರಕರ್ತರ ಜವಾಬ್ದಾರಿ ಮುಗಿಯುವುದಿಲ್ಲ. ತನ್ನ ಮನಸಿನ ಕಿಟಕಿ ತೆರೆದು ನೋಡಬೇಕು. ತನಗೆ ಕಂಡಿದ್ದನ್ನು ಬರೆಯಬೇಕು.

ಜಾಗತಿಕ ತಾಪಮಾನದಿಂದ ನಾಶವಾಗುತ್ತಿರುವ ಅಂಬಾನಿ, ಅದಾನಿ ಮಾಡಿರುವ ಭೂ ಗರ್ಭವನ್ನು ಎಣೆದು ತೆಗೆದಿರುವ ತೈಲಗಳಿಂದ ಪರಿಸರ ನಾಶವಾಗುತ್ತಿರಲು ಪ್ರಮುಖ ಕಾರಣವಾಗಿದೆ. ಬುದ್ಧಿ ಜೀವಿಗಳಿಗೆ, ರಾಜಕಾರಣಿಗಳನ್ನು ಬೆಳೆಸುವ ಮೂಲಕ ಮಾನವ ಸಂಪನ್ಮೂಲಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಶ್ರಮಹಾಕಿ ದುಡಿಯುವ ಈ ದೇಶದ ಜನರನ್ನು ನಾವುಗಳು ಶೋಷಣೆಗೆ ತಳ್ಳಲ್ಪಡಲಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಬಹಳ ಮಹತ್ವದ್ದಾಗಿದೆ. ಅಭಿವ್ಯಕ್ತಿ ಸ್ವಾತಂತ್ರ‍್ಯ, ಉಪಾಸನ ಸ್ವಾತಂತ್ರ‍್ಯ ಉಳಿಸಲು ನಾವು ಕಂಕಣ ಬದ್ಧರಾಗಿಬೇಕು.

ಶರಣಬಸವೇಶ್ವರ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಸುನಿತಾ ಬಿ.ಪಾಟೀಲ ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದ ಪತ್ರಿಕಾ ರಂಗಕ್ಕೆ, ಗ್ರಾಮೀಣ ಮಟ್ಟದ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಸಂಬಳ ಇಲ್ಲದೆ ಸಮಾಜ ಸೇವೆಯಲ್ಲಿ ಕಾರ್ಯಪ್ರವೃತರಾಗಿರುವ ಇವರ ತ್ಯಾಗಕ್ಕೆ ಅಭಿನಂದನೆ ಹೇಳಲೆಬೇಕು ಎಂದರು.

ಶಿಕ್ಷಣ ಪ್ರೇಮಿ ನಾಗರಡ್ಡಿಗೌಡ ಕರದಾಳ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಿವೈಎಸ್ಪಿ ಶಂಕರಗೌಡ ಪಾಟೀಲ, ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ರವಿಂದ್ರ ಸಜ್ಜನಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಸಂಘದ ಅಧ್ಯಕ್ಷ ಸಿದ್ದರಾಜು ಮಲಕಂಡಿ ಸಭೆ ಅಧ್ಯಕ್ಷತೆ ವಹಿಸಿದ್ದರು. ಡಾ.ಸಾಯಬಣ್ಣಾ ಗುಡುಬಾ ಮಾತನಾಡಿದರು.

ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಡಾ.ಶಿವರಂಜನ್ ಸತ್ಯಂಪೇಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ವಾಡಿ ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ಸಾಬ್, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಪಂಡಿತ್ ಸಿಂಧೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಕ್ರಮ್ ನಿಂಬರ್ಗಾ ನಿರೂಪಿಸಿದರು. ಪತ್ರಕರ್ತ ಜಗದೇವ ದಿಗ್ಗಾವಂಕರ್ ಸ್ವಾಗತಿಸಿದರು. ನಾಗಯ್ಯಸ್ವಾಮಿ ಅಲ್ಲೂರು ವಂದಿಸಿದರು.

ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಮಾತನಾಡಿ, ಪತ್ರಕರ್ತನಾದವ ವಿರೋಧ ಪಕ್ಷನಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಆಡಳಿತ ಪಕ್ಷವಾಗಲು ಸಾಧ್ಯವಿಲ್ಲ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯಕ್ಕೆ ಸರ್ಕಾರದಿಂದ ಮಾನ್ಯತೆ ಸಿಕ್ಕಿದೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ