ಕಬೀರ್‌ ಖಾನ್‌, ಸಹಚರರನ್ನು ಗಡಿಪಾರು ಮಾಡಿ: ವೀರೇಶ

KannadaprabhaNewsNetwork | Published : Apr 20, 2025 2:06 AM

ಸಾರಾಂಶ

ಕಾಂಗ್ರೆಸ್ ಪಕ್ಷದ ಪಾಲಿಕೆ ಮಾಜಿ ಸದಸ್ಯ ಅಹಮ್ಮದ್ ಕಬೀರ್ ಖಾನ್ ಪ್ರಚೋದನಾಕಾರಿ ಹೇಳಿಕೆ ಹಿಂದೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ವ್ಯವಸ್ಥಿತ ಜಾಲವಿದೆ. ಬಂಧಿತ ಕಬೀರ್‌ ಹಾಗೂ ಸಹಚರರ ವಿರುದ್ಧ ರಾಷ್ಟ್ರ ವಿರೋಧಿ ಕಾಯ್ದೆಯಡಿ ಕೇಸ್‌ ದಾಖಲಿಸಿ, ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಗಡಿಪಾರು ಮಾಡಬೇಕು ಎಂದು ಬಿಜೆಪಿ ಯುವ ಮುಖಂಡ, ಮಾಜಿ ಮೇಯರ್ ಎಸ್.ಟಿ. ವೀರೇಶ ಒತ್ತಾಯಿಸಿದ್ದಾರೆ.

- ಪ್ರಚೋದನಾಕಾರಿ ಹೇಳಿಕೆ ಹಿಂದೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಸಂಚು: ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಕಾಂಗ್ರೆಸ್ ಪಕ್ಷದ ಪಾಲಿಕೆ ಮಾಜಿ ಸದಸ್ಯ ಅಹಮ್ಮದ್ ಕಬೀರ್ ಖಾನ್ ಪ್ರಚೋದನಾಕಾರಿ ಹೇಳಿಕೆ ಹಿಂದೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ವ್ಯವಸ್ಥಿತ ಜಾಲವಿದೆ. ಬಂಧಿತ ಕಬೀರ್‌ ಹಾಗೂ ಸಹಚರರ ವಿರುದ್ಧ ರಾಷ್ಟ್ರ ವಿರೋಧಿ ಕಾಯ್ದೆಯಡಿ ಕೇಸ್‌ ದಾಖಲಿಸಿ, ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಗಡಿಪಾರು ಮಾಡಬೇಕು ಎಂದು ಬಿಜೆಪಿ ಯುವ ಮುಖಂಡ, ಮಾಜಿ ಮೇಯರ್ ಎಸ್.ಟಿ. ವೀರೇಶ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಯಲ್ಲಿದ್ದ ನ್ಯೂನತೆ ಸರಿಪಡಿಸಲು ತಿದ್ದುಪಡಿ ತಂದಿದೆ. ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸುವ ಭರದಲ್ಲಿ ಕಬೀರ್ ಖಾನ್ ದೇಶದಲ್ಲಿ ಅರಾಜಕತೆ ಸೃಷ್ಠಿಸಲು ಮುಂದಾಗಿದ್ದಾರೆ. ಅದರ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲೂ ವೈರಲ್ ಆಗಿದೆ. ಇಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿದ ಕಬೀರ್ ಖಾನ್ ಇತರರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದರು.

ಕೋಮುವಾದಿ ಮುಸ್ಲಿಮರು 2047ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿಸಲು ವ್ಯವಸ್ಥಿತ ಸಂಚು ನಡೆಸಿದ್ದಾರೆ. ಕಬೀರ್ ಖಾನ್ ಹೇಳಿಕೆ ಹಿಂದೆ ಇಂಥದ್ದೇ ದುರುದ್ದೇಶವಿದೆ. ತಕ್ಷಣವೇ ಆತನ ವಿರುದ್ಧ ರಾಷ್ಟ್ರವಿರೋಧಿ ಕಾಯ್ದೆಯಡಿ ಕೇಸ್ ದಾಖಲು ಮಾಡಬೇಕು, ಉನ್ನತಮಟ್ಟದ ತನಿಖೆಗೆ ಒಪ್ಪಿಸಬೇಕು. ಪೊಲೀಸ್ ಇಲಾಖೆಗೆ ಪಾರದರ್ಶಕವಾಗಿ ತನಿಖೆ ನಡೆಸುವುದಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಲಿ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 2 ವರ್ಷದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ, ಹಲ್ಲೆ ಪ್ರಕರಣ ಹೆಚ್ಚುತ್ತಿವೆ. ಕೋಮುವಾದಿ ಮುಸ್ಲಿಮರು ಗಲಭೆ ಸೃಷ್ಠಿಸುವಂತಹ ಅನೇಕ ಪ್ರಕರಣ ಹುಬ್ಬಳ್ಳಿ, ಮಂಡ್ಯ, ಚನ್ನಗಿರಿ, ದಾವಣಗೆರೆ ನಗರದಲ್ಲಿ ಈಗಾಗಲೇ ಬೆಳಕಿಗೆ ಬಂದಿವೆ. ಆದರೆ, ಮುಖ್ಯಮಂತ್ರಿ, ಗೃಹ ಮಂತ್ರಿ ಮುಸ್ಲಿಮರ ತುಷ್ಠೀಕರಣಕ್ಕೆ ನಿಂತಿದ್ದಾರೆ. ಗಲಭೆಕೋರರ ರಕ್ಷಣೆಗೆ ಇಡೀ ಸರ್ಕಾರವೇ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬೀರ್ ಖಾನ್‌ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ, ಯಾವುದೇ ಅಧಿಕಾರಸ್ಥರು ಪ್ರಯತ್ನಿಸಿದರೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು. ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೇವಲ ಮುಸ್ಲಿಂ ಸಮಾಜಕ್ಕೆ ಮಾತ್ರ ಸಚಿವರಲ್ಲ. ಇಡೀ ಜಿಲ್ಲೆಗೆ ಉಸ್ತುವಾರಿ ಸಚಿವರು ಎಂಬುದನ್ನು ಮರೆಯಬಾರದು. ಕಬೀರ್ ಖಾನ್ ಪರವಾಗಿ ಸಮಾರು 5 ನಿಮಿಷಗಳ ವೀಡಿಯೋಗದಲ್ಲಿ ಬಾಯಿ ತಪ್ಪಿ ಕಬೀರ್ ಹೇಳಿಕೆ ನೀಡಿದ್ದು ಎಂಬುದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಎಸ್.ಟಿ.ವೀರೇಶ ತಿಳಿಸಿದರು.

ಪಕ್ಷದ ಮುಖಂಡರಾದ ಪಾಲಿಕೆ ಮಾಜಿ ಸದಸ್ಯ ಕೆ.ಎಂ. ವೀರೇಶ, ಜಯಪ್ರಕಾಶ, ಸುರೇಶ ಗಂಡಗಾಳೆ ಇತರರು ಇದ್ದರು.

- - -

-19ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಬಿಜೆಪಿ ಯುವ ಮುಖಂಡ, ಮಾಜಿ ಮೇಯರ್ ಎಸ್.ಟಿ.ವೀರೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article