ಕೈರಂಗಳ: ಡಿಸೆಂಬರ್‌ 6ರಿಂದ ರಾಜ್ಯಮಟ್ಟದ ಶಿಕ್ಷಣ, ಉದ್ಯೋಗ, ಕೃಷಿ ಮೇಳ

KannadaprabhaNewsNetwork |  
Published : Oct 11, 2024, 11:49 PM IST
11 | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳ ಕೋರ್ಸುಗಳ ಪರಿಚಯದ ಶಿಕ್ಷಣ ಮೇಳ, ಪದವೀಧರ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಕಂಪನಿಗಳನ್ನು ಆಹ್ವಾನಿಸಲಾಗಿದ್ದು, ಜೊತೆಗೆ ವಿಪ್ರೋ, ಲಿನೆವೋ, ಇನ್ಫೋಸಿಸ್‌ ನಂತಹ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಕನ್ನಡಪ್ರಭ ವಾರ್ತೆ ಉಳ್ಳಾಲಶಿಕ್ಷಣ, ಉದ್ಯೋಗ, ಕೃಷಿಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರವು ಆಯೋಜಿಸುವ ರಾಜ್ಯಮಟ್ಟದ ಶಿಕ್ಷಣ, ಉದ್ಯೋಗ, ಕೃಷಿ ಮೇಳ- 2024 ಡಿಸೆಂಬರ್‌ 6,7, 8ರಂದು ಕೈರಂಗಳ ಪುಣ್ಯಕೋಟಿನಗರದಲ್ಲಿ ನಡೆಯಲಿದೆ ಎಂದು ಮೇಳ ಸಂಚಾಲಕ ಟಿ.ಜಿ. ರಾಜಾರಾಮ ಭಟ್‌ ಹೇಳಿದರು.ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪ್ರೋ, ಲೆನೆವೋ, ಇನ್ಫೋಸಿಸ್‌ ಸೇರಿದಂತೆ ಪ್ರತಿಷ್ಠಿತ ಐಟಿ ಕಂಪನಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯಾದ್ಯಂತ ಉದ್ಯೋಗಾಕಾಂಕ್ಷಿಗಳು, ಕೃಷಿಕರು, ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಬಳಿಕ ಮುಂದೇನು? ಅನ್ನುವ ಕುತೂಹಲದಲ್ಲಿ ವಿದ್ಯಾರ್ಥಿ ಸಮೂಹಕ್ಕಿದೆ. ರಾಜ್ಯದ ಅನೇಕ ಕಾಲೇಜುಗಳು ವಿದ್ಯಾರ್ಥಿಗಳಿಗೆ ಹಲವು ರೀತಿಗಳಲ್ಲಿ ಕೋರ್ಸುಗಳನ್ನು ಒದಗಿಸುತ್ತಿದೆ. ಅಂತಹ ಒಟ್ಟು 37 ಕಾಲೇಜುಗಳನ್ನು ಒಟ್ಟಾಗಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳ ಕೋರ್ಸುಗಳ ಪರಿಚಯದ ಶಿಕ್ಷಣ ಮೇಳ, ಪದವೀಧರ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಕಂಪನಿಗಳನ್ನು ಆಹ್ವಾನಿಸಲಾಗಿದ್ದು, ಜೊತೆಗೆ ವಿಪ್ರೋ, ಲಿನೆವೋ, ಇನ್ಫೋಸಿಸ್‌ ನಂತಹ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.ಕೃಷಿ ಮೇಳದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಬಲ್ಲಂತಹ ಯಂತ್ರೋಪಕರಣಗಳು, ಸಾವಯವ ಬಿತ್ತನೆ ಬೀಜಗಳು, ರಸಗೊಬ್ಬರಗಳು, ರಾಜ್ಯದ ವಿವಿಧ ಕಡೆಗಳಿಂದ ನರ್ಸರಿಯವರು ಭಾಗವಹಿಸಲಿದ್ದಾರೆ. ಆಕರ್ಷಕ ದೋಣಿ ವಿಹಾರ, ಆಹಾರ ವಸ್ತುಗಳು, ತಿಂಡಿ ತಿನುಸುಗಳ ಮಳಿಗೆಗಳು ಸೇರಿದಂತೆ ಒಟ್ಟು 306 ಮಳಿಗೆಗಳು ಕೃಷಿ ಮೇಳದಲ್ಲಿ ಭಾಗಿಯಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯಕ್ಷಗಾನ, ಗಂಗಾವತಿ ಪ್ರಾಣೇಶ್‌ ಅವರ ಹಾಸ್ಯ, ಶಿವಮೊಗ್ಗದ ತಂಡದಿಂದ ನೃತ್ಯ ಹೀಗೆ ರಾಜ್ಯಮಟ್ಟದ ತಂಡಗಳು ಮೂರು ದಿನಗಳ ಕಾಲ ಯಶಸ್ವಿ ಕಾರ್ಯಕ್ರಮಗಳನ್ನು ನೀಡಲಿದೆ ಎಂದರು.ಮೇಳದ ಪ್ರಯೋಜನವನ್ನು ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾವಂತ ನಿರುದ್ಯೋಗಿಗಳು, ಕೃಷಿಕರು ಪಡೆದುಕೊಳ್ಳಬೇಕು. ಸಂಸದ ಬ್ರಿಜೇಶ್‌ ಚೌಟ ಸೇರಿದಂತೆ ರಾಜ್ಯದ ವಿವಿಧ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷರಾದ ಜಯರಾಮ ಶೆಟ್ಟಿ ಕಂಬ್ಳಪದವು, ಕಾರ್ಯದರ್ಶಿ ನವೀನ್‌ ಪಾದಲ್ಪಾಡಿ, ಜತೆ ಕಾರ್ಯದರ್ಶಿಗಳಾದ ವಿಶ್ವನಾಥ್‌ ಕಡ್ವಾಯಿ, ರಂಜಿತ್‌ ಮಿತ್ತಾವು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ