ದಾಸಪರಂಪರೆಯಲ್ಲಿ ಶ್ರೇಷ್ಠರು ಕನಕದಾಸರು

KannadaprabhaNewsNetwork |  
Published : Nov 19, 2024, 12:53 AM IST
ಸೂಲಿಬೆಲೆ ಹೋಬಳಿ ವಳಗೆರೆಪುರ ಸರ್ಕಾರಿ ಶಾಲೆಯಲ್ಲಿ ಜೇನುಗೂಡು ಟ್ರಸ್ಟ್ ವತಿಯಿಂದ ಕನಕದಾಸರ ೫೩೭ನೇ ಜಯಂತಿ ಕಾರ್ಯಕ್ರಮ ನೆಡೆಯಿತು, ಟ್ರಸ್ಟಿನ ಪಧಾಧಿಕಾರಿಗಳು, ಶಿಕ್ಷಕರು ಇದ್ದರು | Kannada Prabha

ಸಾರಾಂಶ

ಸೂಲಿಬೆಲೆ: ದಾಸ ಪರಂಪರೆಯಲ್ಲಿ ಕನಕದಾಸರು ದಾಸ ಶ್ರೇಷ್ಠರು ಎಂದು ಜೇನುಗೂಡು ಟ್ರಸ್ಟ್ ನಿರ್ದೇಶಕ ದೇವಿದಾಸ್ ಸುಬ್ರಾಯ್ ಶೇಠ್ ಹೇಳಿದರು.

ಸೂಲಿಬೆಲೆ: ದಾಸ ಪರಂಪರೆಯಲ್ಲಿ ಕನಕದಾಸರು ದಾಸ ಶ್ರೇಷ್ಠರು ಎಂದು ಜೇನುಗೂಡು ಟ್ರಸ್ಟ್ ನಿರ್ದೇಶಕ ದೇವಿದಾಸ್ ಸುಬ್ರಾಯ್ ಶೇಠ್ ಹೇಳಿದರು.

ಹೋಬಳಿಯ ವಳಗೆರೆಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಕನಕದಾಸರ ೫೩೭ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರು ಸಂತರಾಗುವ ಮೊದಲು ತಿಮ್ಮಪ್ಪನಾಯಕ ಹೆಸರಿನ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಯುದ್ದದಲ್ಲಿ ಗಾಯಗೊಂಡ ನಂತರ ಅವರಲ್ಲಿ ಆಧ್ಯಾತ್ಮಿಕತೆ ಚಿಗುರೊಡೆಯಿತು. ಬಳಿಕ ಅವರು ಧಾರ್ಮಿಕ ಕ್ಷೇತ್ರದಲ್ಲಿ ಭಕ್ತಿಮಾರ್ಗದಲ್ಲಿ ಕನಕದಾಸರು ಹರಿದಾಸ ಕೀರ್ತನೆಗಳನ್ನು ರಚಿಸುತ್ತ ಹರಿಭಕ್ತರಾದರು ಎಂದು ಹೇಳಲಾಗುತ್ತದೆ ಎಂದರು.

ಜೇನುಗೂಡು ಟ್ರಸ್ಟಿನ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ ಮಾತನಾಡಿ, ಸಂತರಾಗಿದ್ದ ಕನಕದಾಸರು ಭಕ್ತಿ ಮಾರ್ಗದಲ್ಲಿದ್ದರು ಸಮಾಜ ಸುಧಾಕರಾಗಿಯು ಗುರುತಿಸಿಕೊಂಡಿದ್ದಾರೆ. ಅಂದಿನ ದಿನಗಳಲ್ಲಿ ಪ್ರಬಲವಾಗಿದ್ದ ಜಾತಿ ವ್ಯವಸ್ಥೆಯನ್ನು ಖಂಡಿಸಿ ಜಾತಿ ಪದ್ಧತಿ ನಿರ್ಮೂಲನೆಗೆ ಹೋರಾಟ ಮಾಡಿದ ಸಮಾಜ ಸುಧಾರಕರು ಎಂದು ಹೇಳಿದರು.

ಮುಖ್ಯಶಿಕ್ಷಕ ಜಿ.ಎಂ.ರಾಜು ಮಾತನಾಡಿ, ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲ ನೆಲೆಯನೆನಾದರೂ ಬಲ್ಲಿರಾ ಎಂಬ ವಾಕ್ಯದೊಂದಿಗೆ ೫೦೦ ವರ್ಷಗಳ ಹಿಂದೆಯೇ ಜಾತಿ ಪದ್ಧತಿಯನ್ನು ಖಂಡಿಸಿ ಸಮಾಜ ಜಾಗೃತಿಗೆ ಕರೆ ನೀಡಿದ ಪುಣ್ಯಪುರುಷ ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಜೇನುಗೂಡು ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಗುರುತಿನ ಚೀಟಿ, ನೋಟ್‌ಬುಕ್, ಲೇಖನ ಸಾಮಗ್ರಿ, ನೀರಿನ ಬಾಟಲ್, ಡ್ರಾಯಿಂಗ್ ಪರಿಕರಗಳನ್ನು ವಿತರಣೆ ಮಾಡಲಾಯಿತು.

ಸಮಾಜ ಸೇವಕರಾದ ಗಿಡ್ಡಪ್ಪನಹಳ್ಳಿ ನಯಾಜ್‌ ಪಾಷಾ, ಟ್ರಸ್ಟಿನ ನಿರ್ದೇಶಕ ಸೈಯದ್ ಮಹಬೂಬ್, ರಾಜಶೇಖರರೆಡ್ಡಿ, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್ ಇತರರಿದ್ದರು.

(ಫೋಟೋ ಕ್ಯಾಪ್ಷನ್‌)

ಸೂಲಿಬೆಲೆ ಹೋಬಳಿ ವಳಗೆರೆಪುರ ಸರ್ಕಾರಿ ಶಾಲೆಯಲ್ಲಿ ಜೇನುಗೂಡು ಟ್ರಸ್ಟ್ ವತಿಯಿಂದ ಕನಕದಾಸರ ೫೩೭ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌