ಸಾಹಿತ್ಯ ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಕನಕದಾಸರ ಅಪಾರವಾದ ಕೊಡುಗೆ

KannadaprabhaNewsNetwork | Published : Nov 19, 2024 12:46 AM

ಸಾರಾಂಶ

ಕನಕದಾಸರು ರಾಜರ ಆಸ್ಥಾನದಲ್ಲಿ ಆಶ್ರಯ ಪಡೆಯದಿದ್ದರೂ ಸಹ ಅವರ ಕೀರ್ತನೆಗಳು, ಜನರ ಬಾಯಲ್ಲಿ ಹಸುಹೊಕ್ಕಾಗಿವೆ.

ಕನ್ನಡಪ್ರಭ ವಾರ್ತೆ ನಂಜನಗೂಡುಭಕ್ತ ಕನಕದಾಸರ ಸಾಹಿತ್ಯ ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ, ಅವರ ಕೀರ್ತನೆಗಳು ಶಾಸ್ತ್ರೀಯ ಸಂಗೀತದ ಬುನಾದಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಏರ್ಪಡಿಸಿದ್ದ ಭಕ್ತ ಕನಕದಾಸರ ಜಯಂತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಕ್ತ ಕನಕದಾಸರ ಸಾಹಿತ್ಯ ಮತ್ತು ಕೀರ್ತನೆಗಳು, ಗೀತೆಗಳು, ಜ್ಞಾನದ ಆಗರವಿದ್ದಂತೆ, ಕೀರ್ತನೆಗಳಲ್ಲಿ ಆಧ್ಯಾತ್ಮಿಕವಾಗಿ ಗೂಡಾರ್ಥವನ್ನು ಒಳಗೊಂಡಿದ್ದು, ಆಧ್ಯಾತ್ಮಿಕವಾಗಿ ಸತ್ಯದ ಅರಿವು ಮೂಡಿಸುವಂತಹ ಕೃತಿಗಳಾಗಿವೆ. ಅಲ್ಲದೆ 16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಹೋರಾಟ ನಡೆಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು ಎಂದರು.ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಭಕ್ತ ಕನಕದಾಸರು 16ನೇ ಶತಮಾನದಲ್ಲಿ ಮೌಡ್ಯತೆ, ಜಾತಿ ವ್ಯವಸ್ಥೆ ಬಗ್ಗೆ ಹೋರಾಟ ನಡೆಸಿದವರು. ಅವರ ಸಮ ಸಮಾಜದ ಬೋಧನೆಗಳು ಮತ್ತು ಚಿಂತನೆಗಳು, ಸಂದೇಶಗಳನ್ನು ನಮ್ಮ ಜೀವನದಲ್ಲಿ ಪಾಲಿಸಿ ಅನುಸರಿಸುವ ಮೂಲಕ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು, ಎಲ್ಲರಲ್ಲೂ ಅಸ್ಪೃಶ್ಯತೆಯ ಮನೋಭಾವನೆಯನ್ನು ದೂರವಾಗಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.ಮುಖ್ಯಭಾಷಣಕಾರರಾಗಿದ್ದ ಕುಮಾರಸ್ವಾಮಿ ಮಾತನಾಡಿ, ಕನಕದಾಸರು ರಾಜರ ಆಸ್ಥಾನದಲ್ಲಿ ಆಶ್ರಯ ಪಡೆಯದಿದ್ದರೂ ಸಹ ಅವರ ಕೀರ್ತನೆಗಳು, ಜನರ ಬಾಯಲ್ಲಿ ಹಸುಹೊಕ್ಕಾಗಿವೆ ಎಂದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸಿ.ಎಂ. ಶಂಕರ್, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಕೆಂಪಣ್ಣ, ನಗರಸಭಾಧ್ಯಕ್ಷ ಶ್ರೀಕಂಠಸ್ವಾಮಿ, ಉಪಾಧ್ಯಕ್ಷ ರೆಹನಾಬಾನು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಮುದ್ದುಮಾದೇಗೌಡ, ಕೆಂಪಿಸಿದ್ದನಹುಂಡಿ ಗ್ರಾಪಂ ಅಧ್ಯಕ್ಷ ರವಿ, ಮುಖಂಡರಾದ ಕುಳ್ಳಯ್ಯ, ದಕ್ಷಿಣಮೂರ್ತಿ, ಶಿವಸ್ವಾಮಿ, ರಾಜು, ಶ್ರೀನಿವಾಸಮೂರ್ತಿ, ವಿದ್ಯಾಸಾಗರ್, ನಗರಸಭಾ ಸದಸ್ಯರಾದ ಎಸ್. ಪಿ. ಮಹೇಶ್, ಗಂಗಾಧರ್, ಕೆ. ಎಂ. ಬಸವರಾಜು, ತಹಸಿಲ್ದಾರ್ ಶಿವಕುಮಾರ ಕಾಸ್ನೂರು, ಡಿವೈಎಸ್ಪಿ ರಘು ಇದ್ದರು.

Share this article