ಕನಕಗಿರಿ ಎಪಿಎಂಸಿಗೆ ಮೇಲ್ದರ್ಜೆ ಭಾಗ್ಯ

KannadaprabhaNewsNetwork | Published : Aug 9, 2024 12:54 AM

ಸಾರಾಂಶ

ಅಖಂಡ ಗಂಗಾವತಿ ತಾಲೂಕು ವ್ಯಾಪ್ತಿಯಲ್ಲಿದ್ದ ಕನಕಗಿರಿ ಪಟ್ಟಣದ ಮಾರುಕಟ್ಟೆ ಕೃಷಿ ಉತ್ಪನ್ನ ಮಾರುಕಟ್ಟೆಯಾಗಿ ಮೇಲ್ದರ್ಜೆಗೇರಿದೆ.

ಉಪ ಮಾರುಕಟ್ಟೆ ಕೃಷಿ ಉತ್ಪನ್ನ ಮಾರುಕಟ್ಟೆಯಾಗಿ ಮೇಲ್ದರ್ಜೆಗೆ

ಕನ್ನಡಪ್ರಭ ವಾರ್ತೆ ಕನಕಗಿರಿ

ಅಖಂಡ ಗಂಗಾವತಿ ತಾಲೂಕು ವ್ಯಾಪ್ತಿಯಲ್ಲಿದ್ದ ಕನಕಗಿರಿ ಪಟ್ಟಣದ ಮಾರುಕಟ್ಟೆ ಕೃಷಿ ಉತ್ಪನ್ನ ಮಾರುಕಟ್ಟೆಯಾಗಿ ಮೇಲ್ದರ್ಜೆಗೇರಿದೆ.

ಹಲವು ವರ್ಷಗಳಿಂದ ಕನಕಗಿರಿ ಉಪ ಮಾರುಕಟ್ಟೆಯಾಗಿತ್ತು. ಆದರೆ ಈ ವರ್ಷ ಅಧಿನಿಯಮ ೧೯೬೬ರ ಕಲಂ ೧೪೫ರನ್ವಯ ಗಂಗಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ತನ್ನ ಕ್ಷೇತ್ರವನ್ನು ವಿಭಜಿಸುವ ಮೂಲಕ ಕನಕಗಿರಿ ಪಟ್ಟಣಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎಂದು ನಿರ್ದಿಷ್ಟಪಡಿಸಿ ಕಳೆದ ಜೂ.೧೧ರಂದು ಅಧಿಸೂಚನೆ ಹೊರಡಿಸಿದೆ.

ಭತ್ತ ಮತ್ತು ಅಕ್ಕಿ ಉತ್ಪನ್ನವನ್ನು ಹೊರತುಪಡಿಸಿ ಉಳಿದ ೯೧ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕೆ ಒಳಪಡಿಸಲಾಗಿದೆ. ಪಟ್ಟಣ ಪಂಚಾಯಿತಿ ಪ್ರದೇಶವನ್ನು ಮಾರುಕಟ್ಟೆಯಾಗಿ ಮತ್ತು ಅನುಸೂಚಿತ ಎ ರಲ್ಲಿ ನಿರ್ದಿಷ್ಟಪಡಿಸಿರುವ ಸ್ಥಳವನ್ನು ಮಾರುಕಟ್ಟೆ ಪ್ರಾಂಗಣವೆಂದು ಗುರುತಿಸಿದ್ದು, ಸದ್ಯ ಈ ಮಾರುಕಟ್ಟೆ ೧೯ ಎಕರೆ ೦೮ ಗುಂಟೆ ವಿಸ್ತೀರ್ಣ ಹೊಂದಿರುವುದಾಗಿ ಅಧಿಸೂಚನೆಯಲ್ಲಿ ಉಲ್ಲೇಖವಾಗಿದೆ.

ಅಧಿಕಾರ ಸ್ವೀಕಾರ:ಹೊಸದಾಗಿ ಸೃಜಿಸಲಾದ ಕನಕಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯನಿರ್ವಹಣೆಗಾಗಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಾರಟಗಿಯ ಎಪಿಎಂಸಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಹರೀಶ ಪತ್ತಾರ್ ಇತ್ತೀಚೆಗೆ ಕನಕಗಿರಿ ಮಾರುಕಟ್ಟೆಗೆ ಪ್ರಭಾರಿಯನ್ನಾಗಿ ನಿಯೋಜಿಸಲಾಗಿದೆ.

ಅಡೆತಡೆ ಓಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ:ಈಚೆಗೆ ಗಂಗಾವತಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಕನಕಗಿರಿ ಪಟ್ಟಣದ ಶ್ರೀಗುರು ರುದ್ರಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳು ಅಡೆ ತಡೆ ಓಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.8ನೇ ತರಗತಿಯ ಪಲ್ಲವಿ ಹಾಗೂ ಪವನಕುಮಾರ ಪ್ರಥಮ ಸ್ಥಾನ ಪಡೆದರೆ, 10ನೇ ತರಗತಯ ಗೌರಮ್ಮ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕ್ರೀಡಾ ಮಾರ್ಗದರ್ಶಿ ಹಾಗೂ ದೈಹಿಕ ಶಿಕ್ಷಕ ಶಿವಾರೆಡ್ಡಿ ಮಣ್ಣೂರು, ಮುಖ್ಯಶಿಕ್ಷಕಿ ಶಶಿಕಲಾ, ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಹಳೇ ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

Share this article