ಚಿತ್ರಕಲಾ ಕ್ಷೇತ್ರವನ್ನೂ ಪ್ರೀತಿಸುವಂತೆ ಕಾರದ ಕಟ್ಟಿ ಸಲಹೆ

KannadaprabhaNewsNetwork | Published : Aug 5, 2024 12:40 AM

ಸಾರಾಂಶ

ಹಾಸನ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಿರ್ಮಲ ಕಲಾಶಾಲೆಯ ಹಳೆ ವಿದ್ಯಾರ್ಥಿಗಳಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿಮಕ್ಕಳಿಗೆ ಶಿಕ್ಷಣ ಎಂದರೆ ಎಂಜಿನಿಯರ್ ಮತ್ತು ವೈದ್ಯ ಕ್ಷೇತ್ರ ಅಷ್ಟೇ ಅಲ್ಲ. ಚಿತ್ರಕಲೆ ಕೂಡ ಅದ್ಭುತವಾದ ಒಂದು ಕ್ಷೇತ್ರ. ನಾವು ಅದನ್ನು ಎಷ್ಟು ಪ್ರೀತಿಸುತ್ತೇವೋ ಅಷ್ಟೆ ನಮಗೆ ಹೆಸರು, ಗೌರವ ತಂದುಕೊಡುತ್ತದೆ ಎಂದು ನಿರ್ಮಲ ಚಿತ್ರಕಲೆ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಆರ್‌.ಸಿ. ಕಾರದ ಕಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಕ್ಕಳಿಗೆ ಶಿಕ್ಷಣ ಎಂದರೆ ಎಂಜಿನಿಯರ್ ಮತ್ತು ವೈದ್ಯ ಕ್ಷೇತ್ರ ಅಷ್ಟೇ ಅಲ್ಲ. ಚಿತ್ರಕಲೆ ಕೂಡ ಅದ್ಭುತವಾದ ಒಂದು ಕ್ಷೇತ್ರ. ನಾವು ಅದನ್ನು ಎಷ್ಟು ಪ್ರೀತಿಸುತ್ತೇವೋ ಅಷ್ಟೆ ನಮಗೆ ಹೆಸರು, ಗೌರವ ತಂದುಕೊಡುತ್ತದೆ ಎಂದು ನಿರ್ಮಲ ಚಿತ್ರಕಲೆ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಆರ್‌.ಸಿ. ಕಾರದ ಕಟ್ಟಿ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಿರ್ಮಲ ಕಲಾಶಾಲೆಯ ಹಳೆ ವಿದ್ಯಾರ್ಥಿಗಳಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ನಂತರ ಮಾತನಾಡಿದ ಅವರು, ತಾತ್ಕಾಲಿಕವಾಗಿ ಇಲ್ಲಿಗೆ ಬಂದಾಗ ಕಾರಣಾಂತರದಿಂದ ೩೮ ವರ್ಷಗಳ ಜರ್ನಿ ಇಲ್ಲೆ ಕಳೆದಿದ್ದೇನೆ. ನನ್ನ ಹಳೆ ವಿದ್ಯಾರ್ಥಿಗಳು ಇಲ್ಲಿ ಸೇರಿದ್ದು, ಇಲ್ಲಿ ಶಿಕ್ಷಕರು ಮತ್ತು ದೊಡ್ಡ ದೊಡ್ಡ ಕಲಾವಿದರು ಕೂಡ ಇದ್ದು, ತಮ್ಮ ಸಂತೋಷವನ್ನು ನನಗೊಂದು ಗೌರವ ಸೂಚಿಸಿ ಸಂಭ್ರಮಿಸುತ್ತಿರುವುದಕ್ಕೆ ಅವರಿಗೆಲ್ಲಾ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಮೊದಲು ಎಸ್.ಎಸ್.ಎಲ್.ಸಿ. ನಂತರ ಡಿಪ್ಲೋಮಾ ಕೋರ್ಸ್ ಇತ್ತು. ಇವತ್ತು ಬ್ಯಾಚಲರ್ ಆಫ್ ವಿಸಲ್ ಆರ್ಟ್ ಎನ್ನುವ ಕೋರ್ಸ್ ಆಗಿದೆ. ಇದು ತುಂಬ ವೈಡ್ ಆಗಿದ್ದು, ಹಿಂದೆ ಶಿಕ್ಷಕ ಮಾತ್ರ ಎನ್ನುವುದು ಇತ್ತು. ಈಗ ಡಿಗ್ರಿ ಕೋರ್ಸ್ ಇರುವುದರಿಂದ ಆಸಕ್ತಿ ಇರುವವರಿಗೆ ಸಾಕಷ್ಟು ಅವಕಾಶಗಳಿವೆ. ಶ್ರದ್ಧೆ ಭಕ್ತಿಯಿಂದ ಇದರಲ್ಲಿ ದುಡಿದರೇ ಅವರಲ್ಲೂ ಕೂಡ ನಾಲ್ಕೈದು ಜನ ಕಲಾವಿದರನ್ನು ಇಟ್ಟುಕೊಂಡು ಕೆಲಸ ಮಾಡುವ ಶಕ್ತಿ ಈ ಕ್ಷೇತ್ರದಲ್ಲಿದೆ. ಶ್ರದ್ಧೆಯಿಂದ ಪಾಲಿಸಿದರೇ ಅವರಿಗೆ ಒಳ್ಳೆಯದಾಗುತ್ತದೆ. ಶಿಕ್ಷಣ ಎಂದರೇ ಎಂಜಿನಿಯರ್‌, ಡಾಕ್ಟರ್‌ ಮಾತ್ರ ಅಲ್ಲ. ಚಿತ್ರಕಲೆ ಕೂಡ ಅದ್ಭುತವಾದ ಒಂದು ಕ್ಷೇತ್ರ. ನಾವು ಅದನ್ನು ಎಷ್ಟು ಪ್ರೀತಿಸುತ್ತೇವೆ ಅಷ್ಟೆ ನಮಗೆ ಹೆಸರು, ಗೌರವ ಎಲ್ಲಾವನ್ನು ತಂದುಕೊಡುವ ಕ್ಷೇತ್ರವಾಗಿದೆ ಎಂದು ಹಿರಿಯ ಮತ್ತು ಕಿರಿಯ ಚಿತ್ರಕಲಾವಿದರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಆರ್‌.ಸಿ. ಕಾರದ ಕಟ್ಟಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗೆ ಬಂದಾಗ ಮುಖ್ಯದ್ವಾರದಿಂದಲೇ ಸಾಲಾಗಿ ಹಳೆ ವಿದ್ಯಾರ್ಥಿಗಳು ನಿಂತು ಹೂವಿನ ಮಳೆ ಕರೆದು ಗೌರವ ಸೂಚಿಸಿ ಸಭಾ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಇವರ ಜೊತೆಯಲ್ಲಿ ಆರ್.ಸಿ. ಕಾರದ ಕಟ್ಟಿ ಧರ್ಮಪತ್ನಿ ಎನ್. ಲಕ್ಷ್ಮಿ ಇದ್ದರು.

ಇದೇ ವೇಳೆ ಹಳೆಯ ವಿದ್ಯಾರ್ಥಿಗಳು ಹಾಗೂ ಚಿತ್ರಕಲಾವಿದರಾದ ವೈ.ಬಿ. ರವಿ, ಕೆ.ಎನ್. ಶಂಕರಪ್ಪ, ರಮೇಶ್, ಮಂಜುನಾಥ್, ನಾಗೇಶ್ ಇತರರು ಉಪಸ್ಥಿತರಿದ್ದರು.

Share this article