ಸರ್ಕಾರಿ ನೌಕರರ ವೇತನ ಶೇ. 27.5 ಏರಿಕೆ ಸಾಧ್ಯತೆ?

KannadaprabhaNewsNetwork | Updated : Mar 17 2024, 12:52 PM IST

ಸಾರಾಂಶ

ಸರ್ಕಾರಿ ನೌಕರರ ಮೂಲ ವೇತನವನ್ನು 17 ಸಾವಿರ ರು.ಯಿಂದ 27 ಸಾವಿರ ರು.ಗೆ ಏರಿಕೆ ಮಾಡಲು ತೀರ್ಮಾನಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಅಂಕಿತ ಹಾಕಲಿದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರ ಬಹುನಿರೀಕ್ಷಿತ ಏಳನೇ ವೇತನ ಆಯೋಗದ ಅಂತಿಮ ವರದಿ ಶನಿವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮೂಲವೇತನದ ಮೇಲೆ ಶೇ.27.5ರಷ್ಟು ಹೆಚ್ಚಿಸಬೇಕು.

ಕನಿಷ್ಠ ವೇತನವನ್ನು 17 ಸಾವಿರ ರು.ಗಳಿಂದ 27000 ರು.ಗಳಿಗೆ ಹೆಚ್ಚಿಸಬೇಕು ಎಂಬುದೂ ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್‌ ನೇತೃತ್ವದ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿತು.

ಆಯೋಗದ ವರದಿ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ, ಆರ್ಥಿಕ ಇಲಾಖೆಯ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ವಾರಕ್ಕೆ 5 ದಿನ ಮಾತ್ರ ಕೆಲಸ!
ರಾಜ್ಯದಲ್ಲಿ ಸರ್ಕಾರಿ ನೌಕರರ ಕೆಲಸದ ಗುಣಮಟ್ಟ ಹೆಚ್ಚಿಸಲು ವಾರದಲ್ಲಿ ಐದು ದಿನ ಮಾತ್ರ ಕೆಲಸದ ಅವಧಿ ಇರಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. 

ಹಾಗೆಯೇ, ಗರಿಷ್ಠ ವೇತನವನ್ನು 1,04,600 ರು.ಗಳಿಂದ 2,41,200 ರು.ಗೆ ಹೆಚ್ಚಿಸಬೇಕು. ಹೊಸ ವೇತನ ಶ್ರೇಣಿಯನ್ನು 2022ರ ಜುಲೈನಿಂದಲೇ ಪೂರ್ವಾನ್ವಯ ಮಾಡಬೇಕು ಎಂದೂ ಶಿಫಾರಸು ಮಾಡಲಾಗಿದೆ.

Share this article