ನಾಲೆಗಳಿಗೆ ಕೂಡಲೇ ನೀರು ಹರಿಸಲು ಆಗ್ರಹ

KannadaprabhaNewsNetwork |  
Published : Mar 07, 2024, 01:48 AM IST
6 | Kannada Prabha

ಸಾರಾಂಶ

ರೈತರು ಮಾಡಿದ ಸಾಲ ತೀರಿಸಲಾಗದೇ ಜೀವನ ನಡೆಸಲು ಕಷ್ಟಕರ ವಾಗಿದ್ದು, ಸರ್ಕಾರವೇ ಬರಗಾಲ ಘೋಷಣೆ ಮಾಡಿದ್ದು, ಬರ ಪರಿಹಾರ ಎಕರೆಗೆ ಕನಿಷ್ಟ25,000 ಹಾಗೂ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 10,000 ಕೊಡಬೇಕು ಎಂದು ಅವರು ಸರ್ಕಾರವನ್ನು

- ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

ಫೋಟೋ- 6ಎಂವೈಎಸ್‌ 6

ಕನ್ನಡಪ್ರಭ ವಾರ್ತೆ ಮೈಸೂರು

ಕಾವೇರಿ ಕಬಿನಿ ಅಚ್ಚುಕಟ್ಟು ಭಾಗದ ಕೆರೆಗಳು ಒಣಗಿದ್ದು ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ ಬೆಳೆಗಳು ಒಣಗಿ ಹಾಳಾಗುತ್ತಿವೆ

ತಕ್ಷಣವೇ ಕಾಲುವೆಗಳ ಮೂಲಕ ನೀರು ಹರಿಸಿ ಕೆರೆ ಕಟ್ಟೆನ್ನು ತುಂಬಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘದ ನೂರಾರು ರೈತರು ಪದಾಧಿಕಾರಿಗಳು ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್‌ ಕಚೇರಿ ಎದುರು ಪ್ರತಿಭಟಿಸಿದರು. ದಕ್ಷಿಣ ವಲಯ ನೀರಾವರಿ ಇಲಾಖೆ

ಉಪ ಮುಖ್ಯ ಎಂಜಿನಿಯರ್ ಗೌತಮ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು. ಮೂರು ದಿನದ ಒಳಗೆ ನೀರು ಹರಿಸುವ ನಿರ್ಧಾರ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತರು ಮಾಡಿದ ಸಾಲ ತೀರಿಸಲಾಗದೇ ಜೀವನ ನಡೆಸಲು ಕಷ್ಟಕರ ವಾಗಿದ್ದು, ಸರ್ಕಾರವೇ ಬರಗಾಲ ಘೋಷಣೆ ಮಾಡಿದ್ದು, ಬರ ಪರಿಹಾರ ಎಕರೆಗೆ ಕನಿಷ್ಟ

25,000 ಹಾಗೂ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 10,000 ಕೊಡಬೇಕು ಎಂದು ಅವರು ಸರ್ಕಾರವನ್ನು ಒತ್ತಯಿಸಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ತಮಿಳುನಾಡಿನ ಮುಖ್ಯಮಂತ್ರಿಗಳ ಬಾಂಧವ್ಯಕ್ಕೆ ತಲೆಬಾಗಿ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಿ ಖಾಲಿ ಮಾಡಿದ ಕಾರಣ ಬೆಂಗಳೂರು ನಗರದ ನಿವಾಸಿಗಳು ಕಾವೇರಿ ಅಚ್ಚುಕಟ್ಟು ಭಾಗದ ರೈತರು ನೀರಿನ ಸಮಸ್ಯೆಗೆ ಬಲಿಯಾಗಿದಾರೆ, ಅಚ್ಚುಕಟ್ಟು ಭಾಗದ ಕೆರೆಕಟ್ಟೆಗಳು ಒಣಗಿ ಹೋಗಿವೆ ಎಂದು ದೂರಿದರು.

ಜನ ಜಾನುವಾರುಗಳು ಕುಡಿಯುವ ನೀರಿಗೆ ಕಾದಾಡುತ್ತಿದ್ದಾರೆ, ಕೂಡಲೇ ನಾಲೆಗಳಲ್ಲಿ ನೀರು ಹರಿಸಿ ರೈತರ ರಕ್ಷಿಸಬೇಕು, ಕಾವೇರಿ ಅಚ್ಚು ಕಟ್ಟು ಭಾಗದ ರೈತರು ನರಕಯಾತನೆ ಅನುಭವಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳು ರೈತರನ್ನು ಹಗುರವಾಗಿ ಕಾಣುತ್ತಿವೆ. ದೆಹಲಿಯಲ್ಲಿ ಚಳವಳಿ ಮಾಡುವ ರೈತರ ಶಕ್ತಿ ಹೆಚ್ಚಿಸಲು ನಾವೆಲ್ಲ ನಿರಂತರ ಹೋರಾಟ ಮಾಡಬೇಕಿದೆ ಎಂದು ಅವರು ರೈತರಿಗೆ ಕರೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ

ಪಿ. ಸೋಮಶೇಖರ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಕಿರಗಸೂರು ಶಂಕರ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಮುಖಂಡರಾದ ಸಿದ್ದೇಶ್, ವೆಂಕಟೇಶ್, ರಾಜೇಶ್, ದೇವನೂರು ವಿಜಯೇಂದ್ರ, ಪ್ರದೀಪ್, ಸೂರಿ, ಉಮೇಶ್, ಕಾಟೂರು ನಾಗೇಶ್, ಅಂಬಳೆ ಮಂಜುನಾಥ್, ಸುನಿಲ್, ಶಿವಸ್ವಾಮಿ ಚೇತನ್, ಶಂಭು, ಶಾಂತರಾಜ್, ಶಿವಮೂರ್ತಿ, ಮಂಜುನಾಥ್, ಶಿವಕುಮಾರ್ ನೂರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ