ಗದಗ:ಗಾಣಿಗ ಸಮಾಜದ ಕಾಯಕ ನಿಷ್ಠೆ, ವೈಚಾರಿಕತೆ ಎಲ್ಲರಿಗೂ ಮಾದರಿಯಾಗಿದೆ ಎಂದು ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಯಾವುದೇ ಸಮಾಜ ಉದ್ಧಾರ ಆಗಬೇಕಾದರೆ ಗುರು ಮುಖ್ಯ. ಗುರುವಿನಿಂದ ಸಂಸ್ಕಾರ, ಗುರಿ, ದಿಕ್ಸೂಚಿ, ವೇಗ, ಗುರಿ ತಲುಪುವ ಸಂಕಲ್ಪ ಯಶಸ್ವಿಯಾಗುತ್ತದೆ ಎಂದರು.
ಸಮುದಾಯದ ಹಿರಿಯ ಮುಖಂಡ ದಶರಥ ಗಾಣಿಗೇರ ಮಾತನಾಡಿ, ಗಾಣಿಗ ಸಮುದಾಯಕ್ಕೆ ಭೀಮನ ಭಕ್ತಿಯಿದೆ. ಆದರೆ, ಲಿಂಗ, ವಿಭೂತಿ, ಗುರು ಸೇರಿ ಅಷ್ಟಾವರಣಗಳ ಕೊರತೆಯಿದೆ. ಅದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಈ ಸಮಾಜಕ್ಕೆ ಎಲ್ಲ ವ್ಯವಹಾರಗಳು ಒಲಿಯುತ್ತವೆ. ಇದಕ್ಕೆ ಅವರ ಶ್ರಮ, ಪ್ರಾಮಾಣಿಕತೆ ಹಾಗೂ ನಿಷ್ಠೆ ಕಾರಣ ಗಾಣಿಗ ಸಮುದಾಯ ಜಾತಿಯಿಂದ ಗುರುತಿಸಿಕೊಂಡಿಲ್ಲ. ಬದಲಾಗಿ ಕಾಯಕ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ಈ ಸಮುದಾಯದಿಂದಲೂ ಹೆಚ್ಚಿನ ಮಕ್ಕಳು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಾಗಬೇಕು ಎಂದರು.
ಜಿಲ್ಲಾ ಸಮುದಾಯದ ಅಧ್ಯಕ್ಷ ಬಸವರಾಜ ಬಿಂಗಿ ಅಧ್ಯಕ್ಷತೆ ವಹಿಸಿದ್ದರು. ಡಾ.ಶ್ರೀ ಜಯ ಬಸವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು.
ಸಮಾರಂಭದಲ್ಲಿ ಷಣ್ಮುಖ ಬಡ್ನಿ, ಎನ್.ಎಸ್. ಕೆಂಗಾರ, ಡಾ.ಶೇಖರ ಸಜ್ಜನರ, ಬಿ.ಬಿ.ಐನಾಪೂರ, ಬಸವರಾಜ ನವಲಗುಂದ, ಎಚ್.ಬಿ. ತೋರಗಲ್, ರಮೇಶ ಕಪ್ಪತ್ತನವರ, ಸುಭಾಸ ಬಾಟಕುಕಿ, ಮುರಘರಾಜೇಂದ್ರ ಬಡ್ನಿ, ಸುರೇಶ ಮರಳಪ್ಪನವರ, ಎಸ್.ವಿ. ಪವಾಡಿಗೌಡ್ರ, ಗಿರಿಯಪ್ಪ ಅಸೂಟಿ, ಶ್ರೀಕಾಂತ ಲಕ್ಕುಂಡಿ, ತೋಟಪ್ಪ ಗಾಣಿಗೇರ, ಪರಶುರಾಮ ಅಳಗವಾಡಿ, ಐ.ಎಂ. ಕಿರೇಸೂರ, ಅಶೋಕ ಗುಜಮಾಗಡಿ, ಬಿ.ಎಸ್.ವಡವಟ್ಟಿ, ಗಂಗಾಧರ ಗಾಣಿಗೇರ, ಸಂದೀಪ ಕಪ್ಪತ್ತನವರ, ಅಶೋಕ ಮಂದಾಲಿ, ಯಚ್ಚರಗೌಡ ಗೋವಿಂದಗೌಡ್ರ ಮುಂತಾದವರು ಹಾಜರಿದ್ದರು.