ಛಲ ಬಿಡದೇ ಅಧ್ಯಯನದಲ್ಲಿ ತೊಡಗಿ ಉನ್ನತ ಸ್ಥಾನಕ್ಕೇರಿ: ಡಾ.ಚಂದ್ರಶೇಖರ ಪಾಟೀಲ್

KannadaprabhaNewsNetwork |  
Published : Jul 04, 2024, 01:06 AM ISTUpdated : Jul 04, 2024, 01:07 AM IST
ಚಿತ್ರ 2ಬಿಡಿಆರ್54 | Kannada Prabha

ಸಾರಾಂಶ

ಬಸವಕಲ್ಯಾಣ ನಗರದ ಎಸ್.ಎಸ್.ಕೆ.ಬಿ ಪದವಿ ಮಹಾವಿದ್ಯಾಲಯದಲ್ಲಿ 2023-24 ಶೈಕ್ಷಣಿಕ ಸಾಲಿನ ಅಕಾಡೆಮಿಕ್‌ ಸಮಾರೋಪ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಈ ಬೀಳ್ಕೊಡುಗೆ ಸಮಾರಂಭ ಮುಗಿದ ನಂತರ ತಾವು ಉನ್ನತ ಶಿಕ್ಷಣಕ್ಕೆ ಹಾಗೂ ಇತರೆ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದು ನಿಮ್ಮ ಛಲವನ್ನು ಬಿಡದೆ ಗುರಿ ಮುಟ್ಟುವವರೆಗೂ ತಮ್ಮ ಅಧ್ಯಯನದಲ್ಲಿ ತೊಡಗಿ ಉನ್ನತ ಸ್ಥಾನಕ್ಕೆ ಎರಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ತಿಳಿಸಿದರು.

ಅವರು ನಗರದ ಎಸ್.ಎಸ್.ಕೆ.ಬಿ ಪದವಿ ಮಹಾವಿದ್ಯಾಲಯದಲ್ಲಿ 2023-24 ಶೈಕ್ಷಣಿಕ ಸಾಲಿನ ಅಕಾಡೆಮಿಕ್‌ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ನಿಮ್ಮ ತಂದೆ ತಾಯಿ ಚೆನ್ನಾಗಿ ನೋಡಿಕೊಳ್ಳಬೇಕೆಂದ ಅವರು, ಶರಣ ಬಸವೇಶ್ವರ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಅನೇಕ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಹೇಳಿದರು.

ಗುವಿವಿ ಪ್ರಾಧ್ಯಾಪಕ ಡಾ.ಚಂದ್ರಕಾಂತ ಕೆಳಮನಿ ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅನೇಕ ರೀತಿ ಉನ್ನತ ಶಿಕ್ಷಣ ಕೈಗೊಂಡು ಸಂಶೋಧನೆ ಕಾರ್ಯದಲ್ಲಿ ತೊಡಗಿಸಿಕೊಂಡು ವಿಜ್ಞಾನಿಗಳಾಗಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಯಾರು ಜ್ಞಾನವನ್ನು ಹೊಂದಿರುತ್ತಾರೊ ಅವರು ಜಗತ್ತನ್ನು ಆಳುತ್ತಾರೆ ಎಂದು ಹೇಳಿ, ಕೇವಲ ಪದವಿ ಪಡೆದರೆ ಸಾಲದು ಒಳ್ಳೆಯ ಜ್ಞಾನ, ಕಠಿಣ ಪರಿಶ್ರಮ ಮಾಡಿದಾಗ ಮಾತ್ರ ಜೀವನದಲ್ಲಿ ಯಶಸ್ವಿ ಪಡೆಯಲು ಸಾಧ್ಯ. ಕಲ್ಯಾಣ ನಾಡಿನಲ್ಲಿ ಓದುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಏಕೆಂದರೆ, ಅನೇಕ ಶರಣರು ತಮ್ಮದೆ ಆದ ವಿಚಾರಧಾರೆಗಳ ಮೂಲಕ ಕ್ರಾಂತಿಯನ್ನೇ ಕೈಗೊಂಡಿದ್ದಾರೆ ಎಂದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಸವರಾಜ ಎವಲೆ ಪ್ರಸ್ತಾವಿಕ ಮಾತನಾಡಿ, ಶರಣಬಸವೇಶ್ವರ ಸಂಘದ ಅಡಿಯಲ್ಲಿ ಬರುವ ನಮ್ಮ ಮಹಾವಿದ್ಯಾಲಯ ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲ್ಪಿಸಲು ಪೂಜ್ಯ ದೊಡ್ಡಪ್ಪ ಅಪ್ಪ ಅವರ ಕೊಡುಗೆಯಾಗಿದೆ. ಅಲ್ಲದೆ ನಮ್ಮ ಸಂಘದಿಂದ 10 ಏಕರೆ (ದೊಡ್ಡಪ್ಪ ಅಪ್ಪ ಕ್ರೀಡಾಂಗಣ) ಜಮೀನು ದಾನ ಮಾಡುವುದರ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಕ್ರೀಡಾ ಆಸಕ್ತಿ ಬೆಳೆಸಲು ಸಹಕಾರಿಯಾಗಿದೆ ಎಂದು ವಿವರಿಸಿದರು.

ಪ್ರೊ.ವಿಠೋಬಾ ಡೊಣ್ಣೆಗೌಡರ ನಿರೂಪಿಸಿ, ಉಪನ್ಯಾಸಕ ಸುಮನ ರೆಡ್ಡಿ ವಂದಿಸಿದರು. ಸಿಬ್ಬಂದಿಗಳು ಇದ್ದರು.

PREV